‘ನಟನೆಯಿಂದ ಬ್ರೇಕ್​ ತೆಗೆದುಕೊಳ್ಳುವ ಸಮಯ’; ವಿಡಿಯೋದಲ್ಲಿ ಎಲ್ಲವನ್ನೂ ವಿವರಿಸಿದ ‘ಮೈನಾ’ ನಟಿ ನಿತ್ಯಾ ಮೆನನ್

| Updated By: ರಾಜೇಶ್ ದುಗ್ಗುಮನೆ

Updated on: Jul 25, 2022 | 7:19 PM

ನಿತ್ಯಾ ಮೆನನ್ ನಟನೆಯಿಂದ ಬ್ರೇಕ್ ತೆಗೆದುಕೊಳ್ಳುತ್ತಾರೆ ಎನ್ನುವ ವಿಚಾರ ಹರಿದಾಡಿತ್ತು. ಮದುವೆ ಆಗಲೆಂದೇ ಅವರು ಬ್ರೇಕ್ ತೆಗೆದುಕೊಳ್ಳುತ್ತಾರೆ ಎನ್ನಲಾಗಿತ್ತು. ಈ ವಿಚಾರಕ್ಕೂ ಅವರು ಸ್ಪಷ್ಟನೆ ನೀಡಿದ್ದಾರೆ.

‘ನಟನೆಯಿಂದ ಬ್ರೇಕ್​ ತೆಗೆದುಕೊಳ್ಳುವ ಸಮಯ’; ವಿಡಿಯೋದಲ್ಲಿ ಎಲ್ಲವನ್ನೂ ವಿವರಿಸಿದ ‘ಮೈನಾ’ ನಟಿ ನಿತ್ಯಾ ಮೆನನ್
ನಿತ್ಯಾ
Follow us on

ನಿತ್ಯಾ ಮೆನನ್ (Nithya Menen) ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಶೀಘ್ರವೇ ಮದುವೆ (Nithya Menen Marriage) ಆಗುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಈಗ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಾವು ಸದ್ಯಕ್ಕಂತೂ ಮದುವೆ ಆಗುವ ಆಲೋಚನೆಯಲ್ಲಿ ಇಲ್ಲ ಎಂದಿರುವ ಅವರು, ಇದು ಬ್ರೇಕ್ ತೆಗೆದುಕೊಳ್ಳುವ ಸಮಯ ಎಂದು ಹೇಳಿದ್ದಾರೆ.

‘ನಾನು ಮದುವೆ ಆಗುತ್ತಿಲ್ಲ. ಈ ಸುದ್ದಿ ನಿಜಕ್ಕೆ ಹತ್ತಿರವಿಲ್ಲ. ಯಾರೋ ಬೇಸರ ಬಂದವರು ಒಂದು ಆರ್ಟಿಕಲ್ ಬರೆಯಬೇಕು ಎಂದು ಈ ರೀತಿ ಬರೆದಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಪಡೆಯದೇ ಸುದ್ದಿ ಪ್ರಕಟಿಸಲಾಗಿದೆ. ಮದುವೆ ವಿಚಾರದಲ್ಲಿ ನನ್ನದು ಸದ್ಯಕ್ಕಂತೂ ಯಾವುದೇ ಪ್ಲ್ಯಾನ್ ಇಲ್ಲ’ ಎಂದು ಹೇಳುವ ಮೂಲಕ ನಿತ್ಯಾ ಎಲ್ಲ ವದಂತಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ
ಒಂದು ವಿಶೇಷ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದ ‘ಕನ್ನಡತಿ’ ನಟಿ ರಂಜನಿ ರಾಘವನ್
ಸೀತಾ-ರಾಮ್ ಹುಡುಕಿ ಹೊರಟ ರಶ್ಮಿಕಾ ಮಂದಣ್ಣ; ಇಲ್ಲಿ ಎಲ್ಲವೂ ಸಸ್ಪೆನ್ಸ್
Nithya Menen: ಮದುವೆ ವಿಚಾರದಲ್ಲಿ ಮೌನ ಮುರಿದ ನಿತ್ಯಾ ಮೆನನ್​; ನಿಜ ವಿಚಾರ ಬಿಚ್ಚಿಟ್ಟ ನಟಿ
Nithya Menon Marriage: ‘ಮೈನಾ’ ಸುಂದರಿಗೆ ಕಂಕಣ ಭಾಗ್ಯ: ಸ್ಟಾರ್​ ಹೀರೋ ಜತೆ ಮದುವೆ ಆಗಲಿರುವ ನಿತ್ಯಾ ಮೆನನ್​?

ನಿತ್ಯಾ ಮೆನನ್ ನಟನೆಯಿಂದ ಬ್ರೇಕ್ ತೆಗೆದುಕೊಳ್ಳುತ್ತಾರೆ ಎನ್ನುವ ವಿಚಾರ ಹರಿದಾಡಿತ್ತು. ಮದುವೆ ಆಗಲೆಂದೇ ಅವರು ಬ್ರೇಕ್ ತೆಗೆದುಕೊಳ್ಳುತ್ತಾರೆ ಎನ್ನಲಾಗಿತ್ತು. ಈ ವಿಚಾರಕ್ಕೂ ಅವರು ಸ್ಪಷ್ಟನೆ ನೀಡಿದ್ದಾರೆ. ತಾವು ಬ್ರೇಕ್ ಪಡೆಯುತ್ತಿರುವ ಹಿಂದಿನ ಉದ್ದೇಶ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

‘ನಾನು ನಟನೆಯಿಂದ ಒಂದು ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ. ಒಂದಷ್ಟು ಸಿನಿಮಾ ಮಾಡಿದಮೇಲೆ ಒಂದು ಬ್ರೇಕ್ ಪಡೆಯುತ್ತೇನೆ. ರೋಬೋಟ್ ರೀತಿ ನನಗೆ ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಾಗಿ ಒಂದು ವಿರಾಮ ಬೇಕಿದೆ’ ಎಂದಿದ್ದಾರೆ ಅವರು.

‘ಕಳೆದ ಒಂದು ವರ್ಷದಿಂದ ಸಾಕಷ್ಟು ಕೆಲಸ ಮಾಡಿದ್ದೇನೆ. ಐದಾರು ಸಿನಿಮಾಗಳು ರಿಲೀಸ್​ಗೆ ರೆಡಿ ಇವೆ. ಈ ಚಿತ್ರಕ್ಕಾಗಿ ನಾನು ನಿತ್ಯ ಕೆಲಸ ಮಾಡಿದ್ದೇನೆ. ಹೀಗಾಗಿ, ವಿರಾಮದ ಅಗತ್ಯವಿದೆ. ಇದು ಬ್ರೇಕ್​ ತೆಗೆದುಕೊಳ್ಳುವ ಸಮಯ. ಈ ಸಮಯದಲ್ಲಿ ಸಾಕಷ್ಟು ಸುತ್ತಾಡುತ್ತೇನೆ’ ಎಂದು ಹೇಳಿದ್ದಾರೆ ನಿತ್ಯಾ.

ಇದನ್ನೂ ಓದಿ:  ಮದುವೆ ವಿಚಾರದಲ್ಲಿ ಮೌನ ಮುರಿದ ನಿತ್ಯಾ ಮೆನನ್​; ನಿಜ ವಿಚಾರ ಬಿಚ್ಚಿಟ್ಟ ನಟಿ

ಮಲಯಾಳಂನ ಖ್ಯಾತ ನಟನ ಜತೆ ನಿತ್ಯಾ ಮದುವೆ ನಡೆಯಲಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಈಗ ಅವರಿಂದಲೇ ಇದಕ್ಕೆ ಸ್ಪಷ್ಟನೆ ಸಿಕ್ಕಂತೆ ಆಗಿದೆ. ನಿತ್ಯಾ ಮೆನನ್ ಅವರು ಮದುವೆ ಆಗುತ್ತಿಲ್ಲ ಎನ್ನುವ ವಿಚಾರ ಕೇಳಿ ಕೆಲ ಫ್ಯಾನ್ಸ್ ಬೇಸರಗೊಂಡಿದ್ದಾರೆ. ಆದಷ್ಟು ಬೇಗ ಅವರು ವಿವಾಹವಾಗಲಿ ಎಂದು ಅಭಿಮಾನಿಗಳು ಕೋರುತ್ತಿದ್ದಾರೆ.

Published On - 7:19 pm, Mon, 25 July 22