ಸೀತಾ-ರಾಮ್ ಹುಡುಕಿ ಹೊರಟ ರಶ್ಮಿಕಾ ಮಂದಣ್ಣ; ಇಲ್ಲಿ ಎಲ್ಲವೂ ಸಸ್ಪೆನ್ಸ್

‘ಸೀತಾ ರಾಮಮ್​’ ಚಿತ್ರದಲ್ಲಿ ರಾಮ್ (ದುಲ್ಖರ್​ ಸಲ್ಮಾನ್​) ಲೆಫ್ಟಿನಂಟ್ ಆಗಿರುತ್ತಾನೆ. ಸೀತಾ (ಮೃಣಾಲ್​) ಮೇಲೆ ರಾಮ್​ಗೆ ಪ್ರೀತಿ ಮೂಡುತ್ತದೆ. ಇವರ ಪ್ರೀತಿಯ ಕಥೆ ಸಾಗೋದು 1964ರಲ್ಲಿ. ಈ ಘಟನೆ ನಡೆದು 20 ವರ್ಷಗಳ ಬಳಿಕ ಇವರನ್ನು ಹುಡುಕಿ ರಶ್ಮಿಕಾ ಬರುತ್ತಾರೆ.

ಸೀತಾ-ರಾಮ್ ಹುಡುಕಿ ಹೊರಟ ರಶ್ಮಿಕಾ ಮಂದಣ್ಣ; ಇಲ್ಲಿ ಎಲ್ಲವೂ ಸಸ್ಪೆನ್ಸ್
ರಶ್ಮಿಕಾ
TV9kannada Web Team

| Edited By: Rajesh Duggumane

Jul 25, 2022 | 4:35 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಆ ಪೈಕಿ ‘ಸೀತಾ-ರಾಮಮ್’ ಚಿತ್ರ (Sita Ramam Trailer) ಕೂಡ ಒಂದು. ದುಲ್ಖರ್ ಸಲ್ಮಾನ್ ಹಾಗೂ ಮೃಣಾಲ್ ಠಾಕೂರ್ ನಟನೆಯ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್ ಇಂದು (ಜುಲೈ 25) ರಿಲೀಸ್ ಆಗಿದೆ. ಈ ಟ್ರೇಲರ್​​ನಲ್ಲಿ ಸಾಕಷ್ಟು ಸಸ್ಪೆನ್ಸ್ ವಿಚಾರಗಳನ್ನು ಹೇಳಲಾಗಿದೆ. ಈ ಚಿತ್ರ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ.

‘ಸೀತಾ ರಾಮಮ್​’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎಂದಾಗಲೇ ಸಾಕಷ್ಟು ಕುತೂಹಲ ಸೃಷ್ಟಿ ಆಗಿತ್ತು. ಅವರು ಹಿಜಾಬ್ ಧರಿಸಿ ಫಸ್ಟ್ ಲುಕ್​ನಲ್ಲಿ ಮಿಂಚಿದ್ದರು. ಹಿಜಾಬ್ ವಿಚಾರ ಕರ್ನಾಟಕದಲ್ಲಿ ಚರ್ಚೆಯಲ್ಲಿರುವಾಗಲೇ ಈ ಪೋಸ್ಟರ್ ರಿಲೀಸ್ ಆಗಿತ್ತು. ಈಗ ರಿಲೀಸ್ ಆದ ಟ್ರೇಲರ್​ನಲ್ಲಿ ಒಂದಷ್ಟು ವಿಚಾರಗಳನ್ನು ಬಿಟ್ಟುಕೊಡಲಾಗಿದೆ.

‘ಸೀತಾ ರಾಮಮ್​’ ಚಿತ್ರದಲ್ಲಿ ರಾಮ್ (ದುಲ್ಖರ್​ ಸಲ್ಮಾನ್​) ಲೆಫ್ಟಿನಂಟ್ ಆಗಿರುತ್ತಾನೆ. ಸೀತಾ (ಮೃಣಾಲ್​) ಮೇಲೆ ರಾಮ್​ಗೆ ಪ್ರೀತಿ ಮೂಡುತ್ತದೆ. ಇವರ ಪ್ರೀತಿಯ ಕಥೆ ಸಾಗೋದು 1964ರಲ್ಲಿ. ಈ ಘಟನೆ ನಡೆದು 20 ವರ್ಷಗಳ ಬಳಿಕ ಇವರನ್ನು ಹುಡುಕಿ ರಶ್ಮಿಕಾ ಬರುತ್ತಾರೆ. ರಶ್ಮಿಕಾ ಅವರ ಪಾತ್ರ ಇಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಅವರು ಟ್ರೇಲರ್​ನಲ್ಲಿಯೂ ಹಿಜಾಬ್ ಧರಿಸಿ ಕಾಣಿಸಿಕೊಂಡಿದ್ದಾರೆ.

‘ಸೀತಾ-ರಾಮಮ್​’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರದ್ದು ಅತಿಥಿ ಪಾತ್ರ ಎಂದು ಈ ಮೊದಲು ಹೇಳಲಾಗಿತ್ತು. ಆದರೆ, ಟ್ರೇಲರ್ ನೋಡಿದರೆ ಇಡೀ ಸಿನಿಮಾದುದ್ದಕ್ಕೂ ಅವರ ಪಾತ್ರ ಬರಲಿದೆ ಎಂಬುದು ಫ್ಯಾನ್ಸ್​ಗೆ ಮನವರಿಕೆ ಆಗಿದೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಚಿತ್ರದಲ್ಲಿ ರಶ್ಮಿಕಾ ಪಾತ್ರದ ಹೆಸರು ಏನು  ಎಂಬುದು ಟ್ರೇಲರ್​ನಲ್ಲಿ ರಿವೀಲ್ ಆಗಿಲ್ಲ. ಅವರು ಸೀತಾ ಹಾಗೂ ರಾಮಮ್​ ಅವರನ್ನು ಹುಡುಕುತ್ತಿರುವುದು ಏಕೆ ಎಂಬ ಪ್ರಶ್ನೆಯೂ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ಸಿನಿಮಾದಲ್ಲೇ ಉತ್ತರ ಸಿಗಬೇಕಿದೆ.

ಇದನ್ನೂ ಓದಿ

ಹನು ರಾಘವಪುಡಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳಿದ್ದಾರೆ. ಸ್ವಪ್ನಾ ಸಿನಿಮಾಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಆಗಸ್ಟ್ 5ರಂದು ಈ ಸಿನಿಮಾ ತೆರೆಗೆ ಬರುತ್ತಿದೆ.

Follow us on

Related Stories

Most Read Stories

Click on your DTH Provider to Add TV9 Kannada