2024ರ ಜನಪ್ರಿಯ, ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ರಿಲೀಸ್; ಕನ್ನಡದ ಒಂದು ಚಿತ್ರವೂ ಇಲ್ಲ

‘ಕೆಜಿಎಫ್​ 2’, ‘ಕಾಂತಾರ’ ಮುಂತಾದ ಸಿನಿಮಾಗಳ ಯಶಸ್ಸಿನಿಂದ ಕನ್ನಡ ಚಿತ್ರರಂಗಕ್ಕೆ ಹೊಸ ಮೆರುಗು ಬಂದಿತ್ತು. ಆದರೆ 2024ರಲ್ಲಿ ಚಂದನವನ ಮಂಕಾಗಿದೆ. ಐಎಂಡಿಬಿ ಪ್ರಕಟ ಮಾಡಿರುವ ಟಾಪ್​ 10 ಬಹುನಿರೀಕ್ಷಿತ ಹಾಗೂ ಅತಿ ಜನಪ್ರಿಯ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡ ಸಿನಿಮಾಗಳಿಗೆ ಸ್ಥಾನ ಸಿಕ್ಕಿಲ್ಲ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..

2024ರ ಜನಪ್ರಿಯ, ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ರಿಲೀಸ್; ಕನ್ನಡದ ಒಂದು ಚಿತ್ರವೂ ಇಲ್ಲ
2024ರ ಸಿನಿಮಾಗಳ ಪೋಸ್ಟರ್​

Updated on: Jul 23, 2024 | 5:48 PM

2024ರಲ್ಲಿ ಕನ್ನಡ ಚಿತ್ರರಂಗ ಸೊರಗಿದೆ. ಅಂಕಿ-ಅಂಶಗಳಿಂದಲೂ ಈ ಮಾತು ಸಾಬೀತಾಗುತ್ತಿದೆ. ಕನ್ನಡದ ಸಿನಿಮಾಗಳಿಗೆ ನಿರೀಕ್ಷಿತ ಪ್ರಮಾಣದ ಗೆಲುವು ಸಿಗುತ್ತಿಲ್ಲ. ಇನ್ನುಳಿದ ಭಾಷೆಯ ಸಿನಿಮಾಗಳ ಎದುರು ಪೈಪೋಟಿ ನೀಡುವಲ್ಲಿ ಸ್ಯಾಂಡಲ್​ವುಡ್​ ಸಿನಿಮಾಗಳು ಕಷ್ಟಪಡುತ್ತಿವೆ. 2024ರಲ್ಲಿ ಅರ್ಧ ವರ್ಷ ಕಳೆದುಹೋಗಿದೆ. ಈವರೆಗೆ ಭಾರತದಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ಜನಪ್ರಿಯ 10 ಸಿನಿಮಾಗಳ ಪಟ್ಟಿಯನ್ನು ಐಎಂಡಿಬಿ ರಿಲೀಸ್​ ಮಾಡಿದೆ. ಹಾಗೆಯೇ, ಮುಂಬರುವ ತಿಂಗಳಲ್ಲಿ ರಿಲೀಸ್​ಗೆ ಸಿದ್ಧವಾಗಿರುವ 10 ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಕೂಡ ಅನಾವರಣ ಮಾಡಲಾಗಿದೆ.

2024ರ ಜನವರಿ 1ರಿಂದ ಜುಲೈ 10ರವರೆಗೆ ಬಿಡುಗಡೆ ಆದ ಸಿನಿಮಾಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿದ ಟಾಪ್​ 10 ಸಿನಿಮಾಗಳ ಪಟ್ಟಿ ಹೀಗಿದೆ. ಐಎಂಡಿವಿ ವೆಬ್​ಸೈಟ್​ನಲ್ಲಿ ಈ ಸಿನಿಮಾಗಳು ಪಡೆದ ವೀವ್ಸ್​ ಮತ್ತು ರೇಟಿಂಗ್​ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಕನ್ನಡದ ಯಾವುದೇ ಸಿನಿಮಾಗಳು ಇಲ್ಲ ಎಂಬುದು ನಿರಾಸೆ ಮೂಡಿಸಿದೆ.

1. ಕಲ್ಕಿ 2898 ಎಡಿ
2. ಮಂಜುಮೇಲ್​ ಬಾಯ್ಸ್​
3. ಫೈಟರ್​
4. ಹನುಮಾನ್​
5. ಶೈತಾನ್​
6. ಲಾಪತಾ ಲೇಡೀಸ್​
7. ಆರ್ಟಿಕಲ್ 370
8. ಪ್ರೇಮಲು
9. ಆವೇಶಂ
10. ಮುಂಜ್ಯ

ಇದನ್ನೂ ಓದಿ: ‘ಐಎಂಡಿಬಿ ಟಾಪ್ 100’ ಪಟ್ಟಿಯಲ್ಲಿ ಇರುವ ಏಕೈಕ ಕನ್ನಡದ ನಟ ಯಶ್​; ಎಷ್ಟನೇ ಸ್ಥಾನ?

ಈ ವರ್ಷ ಡಿಸೆಂಬರ್​ ತನಕ ಬಿಡುಗಡೆ ಆಗಲಿರುವ ಸಿನಿಮಾಗಳಲ್ಲಿ ಅತಿ ಹೆಚ್ಚು ನಿರೀಕ್ಷೆ ಹುಟ್ಟುಹಾಕಿರುವ ಟಾಪ್​ 10 ಚಿತ್ರಗಳ ಪಟ್ಟಿಯನ್ನು ಕೂಡ ಐಎಂಡಿಬಿ ರಿಲೀಸ್​ ಮಾಡಿದೆ. ಇದರಲ್ಲಿಯೂ ಕೂಡ ಕನ್ನಡದ ಯಾವುದೇ ಸಿನಿಮಾಗಳು ಇಲ್ಲ. ಈ ವಿಚಾರದಲ್ಲಿ ಚಂದನವನದ ಸಿನಿಮಾಗಳಿಗೆ ಹಿನ್ನಡೆ ಆಗಿದೆ.

1. ಪುಷ್ಪ 2
2. ದೇವರ ಪಾರ್ಟ್​ 1
3. ವೆಲ್​ಕಮ್​ ಟು ದಿ ಜಂಗಲ್​
4. ದಿ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​
5.ಕಂಗುವ
6. ಸಿಂಗಂ ಅಗೇನ್​
7. ಭೂಲ್​ಭುಲಯ್ಯ 3
8. ತಂಗಲಾನ್
9. ಔರೋಮೆ ಕಹಾ ಧಮ್ ಥಾ
10. ಸ್ತ್ರೀ 2

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us