ಧ್ರುವ ಸರ್ಜಾ ಅವರ ಅಭಿಮಾನಿ ಹೇಳಿದ್ದ ‘ಒಡ್ರೋ ಒಡ್ರೋ..’ ಸಾಂಗ್ ಸಖತ್ ಟ್ರೆಂಡ್ ಸೃಷ್ಟಿ ಮಾಡಿದೆ. ಈ ಹಾಡನ್ನು ಟ್ರೋಲ್ ಪೇಜ್ಗಳು ಬಳಕೆ ಮಾಡಿಕೊಳ್ಳುತ್ತಿವೆ. ಕೆಲವರು ಧ್ರುವ ಸರ್ಜಾ ಅವರಿಗೆ ಸಾಕಷ್ಟು ತಾಳ್ಮೆ ಇದೆ ಎಂದೆಲ್ಲ ಕಮೆಂಟ್ ಮಾಡಿದ್ದೂ ಇದೆ. ಈಗ ಧ್ರುವ ಸರ್ಜಾ ಅವರು ಆ ವಿಶೇಷ ಅಭಿಮಾನಿ ಬಗ್ಗೆ ಹಾಗೂ ಅವರ ಬಳಿಕ ಮಾಡಿಕೊಂಡಿದ್ದ ಮನವಿ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಟ್ರೋಲ್ ಪೇಜ್ಗಳಲ್ಲಿ ಧ್ರುವ ಸರ್ಜಾ ಹೇಳಿಕೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಧ್ರುವ ಸರ್ಜಾ ಅವರು ಪ್ರತಿ ಭಾನುವಾರ ಮನೆ ಸಮೀಪ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಅನೇಕರು ಬಂದು ಸೆಲ್ಫಿ ತೆಗೆಸಿಕೊಂಡು ಹೋಗುತ್ತಾರೆ. ಇನ್ನೂ ಕೆಲವರು ಹಾಡು ಹೇಳುತ್ತಾರೆ, ಡೈಲಾಗ್ ಹೊಡೆಯುತ್ತಾರೆ. ಅದೇ ರೀತಿ ಅಭಿಮಾನಿಯೋರ್ವ ಬಂದು ಸಖತ್ ಆಗಿ ಹಾಡು ಹೇಳಿದ್ದ. ಇದಕ್ಕೆ ಕೆಲವರು ರಿಮಿಕ್ಸ್ ಕೂಡ ಮಾಡಿದ್ದರು. ಅವರ ಬಳಿ ಧ್ರುವ ಸರ್ಜಾ ಅವರು ‘ಈ ಬಾರಿ ಬಿಟ್ಬಿಡು’ ಎಂಬ ಕೋರಿಕೆ ಇಟ್ಟಿದ್ದರು.
‘ಒಡ್ರೋ ಒಡ್ರೋ ಇದು ಸರ್ಜಾ ಅಡ್ಡ.. ಸರ್ಜಾ ಬಂದ್ರು ಸರ್ಜಾ ಆ್ಯಕ್ಷನ್ ಪ್ರಿನ್ಸ್ ಸರ್ಜಾ. ಹೊಡಿರಿ ನಗಾರಿ, ಊದಿರಿ ತುತ್ತೂರಿ.. ಎರಡೇ ಎರಡು ಸ್ಟೆಪ್ ಹಾಕಿ ಬಿಡೋಣ. ಜೈ ಜೈ ಶ್ರೀರಾಮ್.. ಶ್ರೀರಾಮ ಧೂತ ಹನುಮಾನ’ ಎಂಬ ಸಾಲುಗಳನ್ನು ಈ ಹಾಡು ಒಳಗೊಂಡಿತ್ತು.
ಇದನ್ನೂ ಓದಿ: ಮಾರ್ಟಿನ್ ಟ್ರೇಲರ್ ಬಿಡುಗಡೆ: ಮುಂಬೈನಲ್ಲಿ ಧ್ರುವ ಸರ್ಜಾ ಅಬ್ಬರ; ಹೆಚ್ಚಾಯಿತು ಸಿನಿಮಾ ಹೈಪ್
ಈ ವ್ಯಕ್ತಿ ಬಗ್ಗೆ ಧ್ರುವ ಮಾತನಾಡಿದ್ದಾರೆ. ‘ಆತ ಬಂದು ಒಂದು ಹಾಡು ಹೇಳ್ತೀನಿ ಎಂದು ಹೇಳಿದ. ಹಾಡು ಹೇಳಬೇಡ, ಸಾಕಷ್ಟು ಜನರಿದ್ದಾರೆ, ಸಮಯ ಬೇಕಾಗುತ್ತದೆ ಎಂದು ಹೇಳಿದೆ. ಆದಾಗ್ಯೂ ಹಾಡು ಹೇಳಲೇ ಬೇಕು ಎಂದ. 2-3 ನಿಮಿಷ ಹಾಡು ಹೇಳಿದ. ನಾನು ನಿಲ್ಲಿಸು ಎಂದಿಲ್ಲ. ನಂತರ ಹೋದವನು 3-4 ಗಂಟೆ ಬಿಟ್ಟು ಮತ್ತೆ ಬಂದ. ಇನ್ನೊಂದು ಹಾಡು ಹೇಳಲಾ ಎಂದು ಕೇಳಿದ. ಈ ಭಾನುವಾರ ಸಾಕು ಬಿಟ್ಬಿಡು ಎಂದೆ’ ಎಂಬುದು ಧ್ರುವ ಸರ್ಜಾ ಮಾತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.