ರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ‘ಶ್ರೀ ರಾಮ್, ಜೈ ಹನುಮಾನ್’ ಸಿನಿಮಾ ಅನೌನ್ಸ್; ಗಮನ ಸೆಳೆದ ಪೋಸ್ಟರ್

ರಾಮಾಯಣದಲ್ಲಿ ಎಲ್ಲೂ ದಾಖಲಾಗದ ವಿಷಯಗಳನ್ನು ‘ಶ್ರೀ ರಾಮ್, ಜೈ ಹನುಮಾನ್’ ಸಿನಿಮಾದಲ್ಲಿ ಹೇಳುವ ಕೆಲಸ ಆಗುತ್ತಿದೆ ಎಂದು ತಂಡ ಹೇಳಿಕೊಂಡಿದೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ.

ರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ‘ಶ್ರೀ ರಾಮ್, ಜೈ ಹನುಮಾನ್’ ಸಿನಿಮಾ ಅನೌನ್ಸ್; ಗಮನ ಸೆಳೆದ ಪೋಸ್ಟರ್
ಸಿನಿಮಾ ಪೋಸ್ಟರ್
Follow us
ರಾಜೇಶ್ ದುಗ್ಗುಮನೆ
|

Updated on:Jan 22, 2024 | 1:18 PM

ಅಯೋಧ್ಯೆಯ ರಾಮ ಮಂದಿರದಲ್ಲಿ (Rama Mandira) ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆದಿದೆ. ಈ ಐತಿಹಾಸಿಕ ಕ್ಷಣವನ್ನು ಇಡೀ ದೇಶದ ಜನರು ಕಣ್ತುಂಬಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ‘ಶ್ರೀ ರಾಮ್, ಜೈ ಹನುಮಾನ್’ ಹೆಸರಿನ ಹೊಸ ಸಿನಿಮಾ ಅನೌನ್ಸ್ ಆಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತಮಿಳು, ಹಿಂದಿ, ಮಲಯಾಳಂ, ತೆಲುಗು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ.

ರಾಮಾಯಾಣ ಆಧರಿಸಿ ಈಗಾಗಲೇ ಹಲವು ಸಿನಿಮಾಗಳು ಬಂದಿವೆ. ‘ಆದಿಪುರುಷ್’ ಸಿನಿಮಾ ಫ್ಲಾಪ್ ಆಯಿತು. ಇತ್ತೀಚೆಗೆ ರಿಲೀಸ್ ಆದ ‘ಹನುಮಾನ್’ ಸಿನಿಮಾ ಗೆಲುವು ಕಂಡಿದೆ. ಈಗ ‘ಶ್ರೀ ರಾಮ್, ಜೈ ಹನುಮಾನ್’ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆ ಆದ ಸಮಯದಂದೇ ಈ ಪೋಸ್ಟರ್ ಅನಾವರಣಗೊಂಡಿದೆ ಅನ್ನೋದು ವಿಶೇಷ.

‘ಆ್ಯನ್ ಅನ್​ಟೋಲ್ಡ್ ಎಪಿಕ್ ಆಫ್ ರಾಮಾಯಣ’ ಎಂಬ ಅಡಿಬರಹ ಈ ಚಿತ್ರಕ್ಕೆ ನೀಡಲಾಗಿದೆ. ಅಂದರೆ, ರಾಮಾಯಣದಲ್ಲಿ ಎಲ್ಲೂ ದಾಖಲಾಗದ ವಿಷಯಗಳನ್ನು ‘ಶ್ರೀ ರಾಮ್, ಜೈ ಹನುಮಾನ್’ ಸಿನಿಮಾದಲ್ಲಿ ಹೇಳುವ ಕೆಲಸ ಆಗುತ್ತಿದೆ ಎಂದು ತಂಡ ಹೇಳಿಕೊಂಡಿದೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ.

ಪೋಸ್ಟರ್​ನಲ್ಲಿ ಹಲವು ವಿಶೇಷತೆಗಳಿವೆ. ಗುಡ್ಡ, ಬೆಟ್ಟ, ಬೆಂಕಿ, ನೀರು, ರಾಮ, ಹನುಮ ಸೇರಿ ಅನೇಕ ವಿಚಾರಗಳು ಪೋಸ್ಟರ್​ನಲ್ಲಿದೆ. ಹನುಮಂತ ಗಧೆ ಹಿಡಿದು ಬಂದರೆ ರಾಮನು ಬಿಲ್ಲನ್ನು ಹಿಡಿದು ನಿಂತಿದ್ದಾನೆ. ಈ ಚಿತ್ರದ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ದಿನವೇ ರಾಜ್ಯದ ಕೆಲವೆಡೆ ಮಂದಿರ ಉದ್ಘಾಟನೆ

ಅವಧೂತ ಅವರು ‘ಶ್ರೀ ರಾಮ್, ಜೈ ಹನುಮಾನ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ಪ್ರಯತ್ನ. ಅದ್ದೂರಿ ಬಜೆಟ್​ನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ‘ಸುರೇಶ್ ಆರ್ಟ್ಸ್ ಬ್ಯಾನರ್’ ಅಡಿಯಲ್ಲಿ ಕೆ.ಎ. ಸುರೇಶ್ ಸಿನಿಮಾನ ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲಾ ಭಾಷೆಯ ಖ್ಯಾತ ನಟರು, ಕಲಾವಿದರು ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿ ಇರಲಿದೆ. ಬಹುಕೋಟಿ ವೆಚ್ಛದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಸ್ಟೋರಿ ಬೋರ್ಡ್ ಮತ್ತು ವಿಎಫ್ಎಕ್ಸ್ ಕೆಲಸಗಳು ಭರದಿಂದ ಸಾಗುತ್ತಿವೆ. ಮುಂದಿನ ದಿನಗಳಲ್ಲಿ ಸಿನಿಮಾ ಬಗ್ಗೆ ಹೆಚ್ಚಿನ ವಿವರ ಹಂಚಿಕೊಳ್ಳಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:18 pm, Mon, 22 January 24