ಟಾಲಿವುಡ್ನಲ್ಲಿ ಅಲ್ಲು ಅರ್ಜುನ್ ಅವರಿಗೆ ಸ್ಟೈಲಿಶ್ ಸ್ಟಾರ್ ಎನ್ನುವ ಬಿರುದು ಇದೆ. ಅವರು ಸದಾ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ‘ಆರ್ಯ’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಅವರನ್ನು ಜನರು ಹಾಗೆಯೇ ಕರೆಯೋಕೆ ಶುರು ಮಾಡಿದರು. ಈ ರೀತಿ ಸ್ಟೈಲಿಶ್ ಸ್ಟಾರ್ ಆಗಿರೋ ಅಲ್ಲು ಅರ್ಜುನ್ಗೆ ಯಶ್ ಅವರು ಒಮ್ಮೆ ಶಾಕ್ ಕೊಟ್ಟಿದ್ದರು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಟಾಲಿವುಡ್ನ ಬೇಡಿಕೆಯ ಹೀರೋಗಳಲ್ಲಿ ಅಲ್ಲು ಅರ್ಜುನ್ ಕೂಡ ಒಬ್ಬರು. ಅವರು ಮಾಡೋ ಸ್ಟೈಲ್ ಅನೇಕರಿಗೆ ಇಷ್ಟ ಆಗುತ್ತದೆ. ಅವರು ತಮ್ಮ ಲುಕ್ ಬಗ್ಗೆ ಸಾಕಷ್ಟು ಗಮನ ಹರಿಸುತ್ತಾರೆ. ಇದಕ್ಕಾಗಿ ಅವರು ಸಾಕಷ್ಟು ಹಣ ಕೂಡ ಖರ್ಚು ಮಾಡುತ್ತಾರೆ. ಅಲ್ಲು ಅರ್ಜುನ್ ಅವರನ್ನೇ ಯಶ್ ಮೀರಿಸಿದ್ದಾರೆ. ಅವರು ಬಾಕ್ಸ್ ಆಫೀಸ್ಗೆ ಮಾತ್ರವಲ್ಲ, ಸ್ಟೈಲ್ಗೂ ಸಿಇಒ ಆಗಿದ್ದಾರೆ.
ಅದೊಂದು ಅವಾರ್ಡ್ ಫಂಕ್ಷನ್. ಈ ಕಾರ್ಯಕ್ರಮದಲ್ಲಿ ಯಶ್, ಅಲ್ಲು ಅರ್ಜುನ್, ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕರು ಭಾಗಿ ಆಗಿದ್ದರು. ಸ್ಟೈಲಿಶ್ ಸ್ಟಾರ್ ಅವಾರ್ಡ್ನ ಘೋಷಣೆ ಮಾಡಲಾಯಿತು. ಅವಾರ್ಡ್ ಘೋಷಣೆ ಮಾಡುವವರು ಯಶ್ ಹೆಸರನ್ನು ತೆಗೆದುಕೊಂಡರು. ‘ಸ್ಟೈಲಿಶ್ ಸ್ಟಾರ್ ಅವಾರ್ಡ್ ಗೋಸ್ ಟು..’ ಎನ್ನುವಾಗಲೇ ಅಲ್ಲು ಅರ್ಜುನ್ ಅವರು ಎದ್ದು ನಿಲ್ಲುವವರಾಗಿದ್ದಾರು. ಯಶ್ ಅವರ ಹೆಸರನ್ನು ಕೇಳಿ ಅಲ್ಲು ಅರ್ಜುನ್ ನಿಜಕ್ಕೂ ಶಾಕ್ ಆದರು. ಈ ವಿಡಿಯೋ ಈಗ ಮತ್ತೊಮ್ಮೆ ವೈರಲ್ ಮಾಡಲಾಗುತ್ತಿದೆ.
ವೇದಿಕೆ ಏರಿದ ಯಶ್ ಎಲ್ಲರನ್ನು ಉದ್ದೇಶಿಸಿ ಮಾತನಾಡಿದರು. ‘ಎಲ್ಲರಿಗೂ ನಮಸ್ಕಾರ. ಸ್ಟೈಲ್ ಐಕಾನ್ ಅವಾರ್ಡ್ ಸಿಕ್ಕಿದೆ. ಸ್ಟೈಲ್ನ ಇನ್ನೊಬ್ಬರನ ಇಂಪ್ರೆಸ್ ಮಾಡೋಕೆ ಏನೂ ಮಾಡಬೇಡಿ. ಬಲವಂತವಾಗಿ ಏನೂ ಮಾಡಬೇಡಿ. ನಿಮಗೆ ಏನು ಖುಷಿ ಕೊಡುತ್ತದೆಯೋ ಅದನ್ನೇ ಮಾಡಿ. ಅದುವೇ ಸ್ಟೈಲ್’ ಎಂದು ಯಶ್ ಅವರು ವೇದಿಕೆ ಮೇಲೆ ಕನ್ನಡದಲ್ಲೇ ಮಾತನಾಡಿದ್ದರು. ಈ ಬಗ್ಗೆಯೂ ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಇದನ್ನೂ ಓದಿ: ಯಶ್ ಯೋಚನೆ ಆಗಲೇ ಎಷ್ಟು ವಿಶಾಲವಾಗಿತ್ತು: ವಿವರಿಸಿದ ತಮಿಳು ನಿರ್ಮಾಪಕ
ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರವನ್ನು ಗೀತು ಮೋಹನ್ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಅವರು ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಅಲ್ಲು ಅರ್ಜುನ್ ‘ಪುಷ್ಪ 2‘ ಸಿನಿಮಾ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:14 am, Sun, 21 July 24