‘ಅಡವಿ’ ಸಿನಿಮಾ ಹಾಡು ಬಿಡುಗಡೆ ಮಾಡಿದ ‘ಕಬಾಲಿ’ ನಿರ್ದೇಶಕ

|

Updated on: Dec 28, 2023 | 6:26 PM

Pa Ranjith: ರಜನೀಕಾಂತ್ ನಟನೆಯ ‘ಕಬಾಲಿ’, ‘ಕಾಲ’ ಸಿನಿಮಾಗಳ ನಿರ್ದೇಶಕ ಪಾ ರಂಜಿತ್, ಕನ್ನಡದ ‘ಅಡವಿ’ ಸಿನಿಮಾದ ಹಾಡು ಬಿಡುಗಡೆ ಮಾಡಿದ್ದಾರೆ.

ಅಡವಿ ಸಿನಿಮಾ ಹಾಡು ಬಿಡುಗಡೆ ಮಾಡಿದ ‘ಕಬಾಲಿ’ ನಿರ್ದೇಶಕ
Follow us on

ಸೂಪರ್ ಸ್ಟಾರ್ ರಜನೀಕಾಂತ್ (Rajinikanth) ನಟಿಸಿರುವ ‘ಕಬಾಲಿ’, ‘ಕಾಲ’ ಸೇರಿದಂತೆ ಹಲವು ಒಳ್ಳೆಯ ಸಿನಿಮಾಗಳನ್ನು ನಿರ್ದೇಶಿಸಿರುವ ತಮಿಳಿನ ಜನಪ್ರಿಯ ನಿರ್ದೇಶಕ ಪಾ ರಂಜಿತ್ ಕನ್ನಡ ಸಿನಿಮಾ ಒಂದರನ್ನು ಹಾಡು ಬಿಡುಗಡೆ ಮಾಡಿ ಅಪರೂಪದ ಕತೆಯೊಂದನ್ನು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸಂವಿಧಾನ ಹಾಗೂ ಅದರ ಮಹತ್ವದ ಬಗ್ಗೆ ಅರಿವು ಮೂಡಿಸುವ, ಕಾಡಿನ ಸಂರಕ್ಷಣೆ,
ಕಾಡಿನ ಮೂಲ ನಿವಾಸಿಗಳ ಬದುಕು ಮತ್ತು ಸಂಘರ್ಷದ ಕಥೆಯನ್ನು ತೆರೆದಿಡುವ ಚಿತ್ರ ಎನ್ನಲಾಗುತ್ತಿರುವ ‘ಅಡವಿ’ ಸಿನಿಮಾದ ‘ಸಿಂಗಾರ ಸಿಂಗಾರ ತ್ವಾಟ’ ಹಾಡಿನ ಲಿರಿಕಲ್ ವೀಡಿಯೋವನ್ನು ಕೆಜಿಎಫ್ ಮುನಿಸಿಪಲ್ ಗ್ರೌಂಡ್ ನಲ್ಲಿ ನಿರ್ದೇಶಕ ಪ.ರಂಜಿತ್ ಬಿಡುಗಡೆ ಮಾಡಿದರು.

ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್ ಅವರ ಸಾಹಿತ್ಯದ 2500ನೇ ಗೀತೆ ಇದಾಗಿದ್ದು, ಹಾಡನ್ನು ನವೀನ್ ಸಜ್ಜು ಹಾಡಿದ್ದಾರೆ. ಸಂವಿಧಾನ ಸಿನಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಟೈಗರ್ ನಾಗ್, ಚಿತ್ರಕಥೆ ಬರೆದ ನಿರ್ಮಿಸಿ, ನಿರ್ದೇಶನ ಮಾಡಿರುವ ಕಾದಂಬರಿ ಆಧಾರಿತ ಸಿನಿಮಾ ಇದಾಗಿದೆ.

ಇದನ್ನೂ ಓದಿ:ನಕಲಿ ದಾಖಲೆ ಬಳಕೆ ಪ್ರಕರಣ: ರಜನೀಕಾಂತ್​ ಪತ್ನಿಗೆ ಜಾಮೀನು ಮಂಜೂರು

ಹಾಡು ಬಿಡುಗಡೆ ಮಾಡಿ ಮಾತನಾಡಿದ ಪಾ ರಂಜೀತ್ ಮಾತನಾಡಿ ‘ಅಡವಿ’ ಚಿತ್ರದಲ್ಲಿ ನೆಲದ ಮಣ್ಣಿನ ಮಕ್ಕಳ ಕಥೆಯೊಂದಿಗೆ ಸಂವಿಧಾನ ಮತ್ತು ಅಂಬೇಡ್ಕರ್ ಅವರ ವಿಚಾರಗಳನ್ನು ಬಹಳ‌ ಚೆನ್ನಾಗಿ ತಂದಿದ್ದಾರೆ.‌ ನಿರ್ದೇಶಕ ಟೈಗರ್ ನಾಗ್ ಅವರು ಚಿತ್ರದ ಟೈಟಲ್ ಮತ್ತು ಹಾಡಿನಲ್ಲಿ ಕುತೂಹಲ ಮೂಡಿಸಿದ್ದಾರೆ, ಚಿತ್ರತಂಡಕ್ಕೆ ಯಶ ಸಿಗಲಿ ಎಂದು ಹಾರೈಸಿದರು.

ಅರಣ್ಯವೇ ಸರ್ವಸ್ವ ಎಂದು ನಂಬಿರುವ ಕಾಡಿನ ಮೂಲ ನಿವಾಸಿಗಳ ಜೀವನ, ತಮ್ಮ ಸ್ವಚ್ಛಂದ ಬದುಕಿಗಾಗಿ ಅವರು ನಡೆಸುವ ಹೋರಾಟ, ಬುಡಕಟ್ಟು ಜನರು ಮತ್ತು ಪ್ರಸ್ತುತ ವ್ಯವಸ್ಥೆಯ ನಡುವಿನ ಸಂಘರ್ಷವನ್ನು ತೆರೆದಿಡುವ ಪ್ರಯತ್ನ ಈ ಸಿನಿಮಾದ ಕತೆಯಲ್ಲಿದೆ. ಈಗಾಗಲೇ ‘ಅಡವಿ’ ಚಿತ್ರದ ಚಿತ್ರೀಕರಣ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಚಿತ್ರತಂಡವೀಗ ಸಿನಿಮಾ ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ.

‘ಅಡವಿ’ ಸಿನಿಮಾವನ್ನು ಐತಿಹಾಸಿಕ ಸಿದ್ದರಬೆಟ್ಟ, ಸಂಜೀವಿನಿ ಕ್ಷೇತ್ರ, ಸೂರ್ಯ ಗವಿ, ತಿಮ್ಮಲಾಪುರ ಅಭಯಾರಣ್ಯ, ಚಿಕ್ಕಮಗಳೂರು, ಸಕಲೇಶಪುರ, ತುಮಕೂರು ಮತ್ತು ಕೊರಟಗೆರೆ ಅಲ್ಲದೆ ಆದಿವಾಸಿಗಳು ವಾಸಿಸುವ ಗುಡಿಸಲುಗಳಲ್ಲಿ ಚಿತ್ರೀಕರಿಸಲಾಗಿದೆ.

ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಹುಟ್ಟುಹಾಕಿರುವ ‘ಅಡವಿ’ ಸಿನಿಮಾದ ನಿರ್ಮಾಪಕ ಟೈಗರ್ ನಾಗ್ ಇತ್ತೀಚೆಗಷ್ಟೆ ಸೆನ್ಸಾರ್ ಮಂಡಳಿ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಸಿಬಿಐಗೆ ದೂರು ನೀಡಿದ್ದರು. ಬಳಿಕ ಸಿಬಿಐ ಬಲೆಗೆ ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ