AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kaatera: ‘ಕಾಟೇರ’ ಚಿತ್ರದ ಮೊದಲಾರ್ಧದಲ್ಲಿ ಏನೆಲ್ಲ ಹೈಲೈಟ್​ ಆಗಿದೆ? ಇಲ್ಲಿದೆ ಫಸ್ಟ್​ ಹಾಫ್​ ರಿಪೋರ್ಟ್​

Kaatera First Half Review: ದರ್ಶನ್​ ಅಭಿಮಾನಿಗಳ ವಲಯದಲ್ಲಿ ‘ಕಾಟೇರ’ ಕ್ರೇಜ್​ ಜೋರಾಗಿದೆ. ಭಾರಿ ಸಂಭ್ರಮದಲ್ಲಿ ಈ ಸಿನಿಮಾವನ್ನು ಸ್ವಾಗತಿಸಲಾಗಿದೆ. ಮೊದಲ ಶೋ ನೋಡಿ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ‘ಕಾಟೇರ’ ಮೊದಲಾರ್ಧದಲ್ಲಿ ಏನೆಲ್ಲ ಹೈಲೈಟ್​ ಆಗಿದೆ ಎಂಬ ರಿಪೋರ್ಟ್​​ ಇಲ್ಲಿದೆ..

Kaatera: ‘ಕಾಟೇರ’ ಚಿತ್ರದ ಮೊದಲಾರ್ಧದಲ್ಲಿ ಏನೆಲ್ಲ ಹೈಲೈಟ್​ ಆಗಿದೆ? ಇಲ್ಲಿದೆ ಫಸ್ಟ್​ ಹಾಫ್​ ರಿಪೋರ್ಟ್​
ದರ್ಶನ್​
ಮದನ್​ ಕುಮಾರ್​
| Edited By: |

Updated on:Dec 29, 2023 | 6:44 AM

Share

ಭಾರಿ ನಿರೀಕ್ಷೆ‌ ಮೂಡಿಸಿದ್ದ ‘ಕಾಟೇರ‌’ ಸಿನಿಮಾ (Kaatera Movie) ಇಂದು (ಡಿಸೆಂಬರ್​ 29) ಬಿಡುಗಡೆ ಆಗಿದೆ. ಡಿ.28ರ ಮಧ್ಯ ರಾತ್ರಿಯಿಂದಲೇ ಶೋ ಆರಂಭ ಆಗಿವೆ.‌ ಹಲವು ಕಡೆಗಳಲ್ಲಿ ಈ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ. ದರ್ಶನ್ (Darshan) ಅಭಿಮಾನಿಗಳು ‘ಕಾಟೇರ’ ಸಿನಿಮಾದ ಬಿಡುಗಡೆಯನ್ನು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ದರ್ಶನ್‌ಗೆ ಜೋಡಿಯಾಗಿ ಆರಾಧನಾ ರಾಮ್ ನಟಿಸಿದ್ದಾರೆ. ಶ್ರುತಿ, ಅವಿನಾಶ್, ಜಗಪತಿ ಬಾಬು ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ‘ಕಾಟೇರ’ ಸಿನಿಮಾದ ಮೊದಲಾರ್ಧದಲ್ಲಿ (Kaatera First Half Review) ಏನೆಲ್ಲ ಇದೆ ಎಂಬುದನ್ನು ತಿಳಿಯಲು ಈ ರಿಪೋರ್ಟ್​ ನೋಡಿ..

  • ಸಾಲು ಸಾಲು ಅಸ್ಥಿಪಂಜರಗಳು ಪತ್ತೆಯ ಆಗುವ ದೃಶ್ಯದಿಂದ‌ ‘ಕಾಟೇರ‌’ ಸಿನಿಮಾ ಆರಂಭ. ಆ ಅಸ್ಥಿ ಪಂಜರಗಳ ಹಿಂದಿನ ಸಸ್ಪೆನ್ಸ್ ಏನೆಂಬುದೇ ಈ ಸಿನಿಮಾದ ಕಥೆ.
  • ರೆಟ್ರೋ ಕಾಲದ ಕಥೆ ಈ ಸಿನಿಮಾದಲ್ಲಿದೆ. ಅದಕ್ಕೆ ತಕ್ಕಂತೆ ಸೆಟ್‌ಗಳ ಮೂಲಕ ದೃಶ್ಯಗಳನ್ನು ಕಟ್ಟಿಕೊಟ್ಟಿದೆ ‘ಕಾಟೇರ’ ಸಿನಿಮಾ.
  • ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ ದರ್ಶನ್ ಎಂಟ್ರಿ. ಮೊದಲ ಡೈಲಾಗ್ ಹೊಡೆಯುವ ಮುನ್ನವೇ ಮಾಸ್ ಲುಕ್​ ನೀಡಿದ ಚಾಲೆಂಜಿಂಗ್ ಸ್ಟಾರ್.
  • ಫ್ಲ್ಯಾಶ್‌ಬ್ಯಾಕ್ ಕಥೆ ತೆರೆದುಕೊಂಡಾಗ ದರ್ಶನ್ ಅವರ ಇನ್ನೊಂದು ಗೆಟಪ್ ಬಹಿರಂಗ.‌ ಕುಲುಮೆಯಲ್ಲಿ ಕೆಲಸ ಮಾಡುವ ಯುವಕನ ಪಾತ್ರದಲ್ಲಿ ಮಾಸ್ ಇಂಟ್ರಡಕ್ಷನ್.
  • ರೈತರ ಪ್ರಾಣ ಹಿಂಡುವ ಜಮೀನ್ದಾರನ ಪಾತ್ರ ಮಾಡಿದ ಜಗಪತಿ ಬಾಬು. ಮೊದಲಾರ್ಧದ ಒಂದಷ್ಟು ದೃಶ್ಯಗಳಲ್ಲಿ ಕಾಣಿಸಿಕೊಂಡು ಅವರು ಅಬ್ಬರಿಸಿದ್ದಾರೆ.
  • ಹೊಸ ನಟಿ ಆರಾಧನಾ ರಾಮ್‌ಗೆ ಶಾನಭೋಗನ ಮಗಳ ಪಾತ್ರ.‌ ಮಚ್ಚು ಹಿಡಿದು ದರ್ಶನ್‌ಗೆ ಆವಾಜ್ ಹಾಕುವ ದೃಶ್ಯದ ಬಳಿಕ ‘ಪಸಂದಾಗವ್ನೆ..’ ಹಾಡಿನಲ್ಲಿ ಹೆಜ್ಜೆ ಹಾಕಿ ರಂಜಿಸಿದ ಆರಾಧನಾ.
  • ಸಿನಿಮಾ ಆರಂಭ ಆಗಿ ಮುಕ್ಕಾಲು ಗಂಟೆ ಕಳೆದರೂ ಯಾವುದೇ ಫೈಟ್ ಇಲ್ಲ. ಹೊಡಿಬಡಿ ದೃಶ್ಯಕ್ಕಾಗಿ ಕಾತರದಿಂದ ಕಾಯಬೇಕು ಫ್ಯಾನ್ಸ್.
  • ನಾಯಕ-ನಾಯಕಿ ನಡುವಿನ ಪ್ರೀತಿ-ಪ್ರೇಮದ ಜೊತೆ ಜಾತಿ ತಾರತಮ್ಯದ ಕಹಾನಿಯೂ ‘ಕಾಟೇರ’ ಸಿನಿಮಾದ ಫಸ್ಟ್ ಹಾಫ್‌ನಲ್ಲಿ ಹೈಲೈಟ್​ ಆಗಿದೆ.
  • ಒಂದೇ ಕೈಯಲ್ಲಿ ನೂರಾರು ಜನರನ್ನು ಹೊಡೆದು ಹಾಕುವ ಫೈಟ್ ಮೂಲಕ ಮಾಸ್ ಪ್ರೇಕ್ಷಕರಿಗೆ ದರ್ಶನ್ ಮಸ್ತ್ ಮನರಂಜನೆ ನೀಡಿದ್ದಾರೆ.
  • ಕಥಾನಾಯಕನ ಸಹೋದರಿ ಪಾತ್ರದಲ್ಲಿ ಶ್ರುತಿ ಗಮನಾರ್ಹ ಅಭಿನಯ ನೀಡಿದ್ದಾರೆ. ಕುಮಾರ್ ಗೋವಿಂದ್, ವೈಜನಾಥ್ ಬಿರಾದಾರ, ಅವಿನಾಶ್ ಮುಂತಾದವರು ಸಾಥ್ ನೀಡಿದ್ದಾರೆ.
  • ಬಡ ರೈತರ‌ ಹೋರಾಟದ ಕಥೆಯನ್ನು ತರುಣ್ ಸುಧೀರ್ ಮಾಸ್ ಆಗಿ ಚಿತ್ರಿಸಿದ್ದಾರೆ. ಮಧ್ಯಂತರದ ವೇಳೆಗೆ ಕಥೆಯ ರೋಚಕತೆ ಹೆಚ್ಚುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:15 am, Fri, 29 December 23

ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ