ಖ್ಯಾತ ನಟಿ ಪವಿತ್ರಾ ಲೋಕೇಶ್ (Pavitra Lokesh) ಅವರ ವೈಯಕ್ತಿಕ ಜೀವನದ ಬಗ್ಗೆ ಅನೇಕ ಅಂತೆ-ಕಂತೆಗಳು ಹರಿದಾಡುತ್ತಿವೆ. ಅವರ ದಾಂಪತ್ಯ ಜೀವನದ ಬಗ್ಗೆಯೂ ಹಲವು ಗಾಸಿಪ್ಗಳು (Pavitra Lokesh News) ಪ್ರಕಟ ಆಗಿವೆ. ಇನ್ನೂ ಕೆಲವರು ಪವಿತ್ರಾ ಲೋಕೇಶ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡುತ್ತಿದ್ದಾರೆ. ಇದರ ವಿರುದ್ಧ ಪವಿತ್ರಾ ಲೋಕೇಶ್ ಅವರು ಸಿಡಿದೆದ್ದಿದ್ದಾರೆ. ಈಗ ಅವರು ಕಾನೂನಿನ ಮೂಲಕ ಸಮರ ಸಾರಲು ಮುಂದಾಗಿದ್ದಾರೆ. ಸೈಬರ್ ಕ್ರೈಂ (Cyber Crime) ಠಾಣೆಯ ಮೆಟ್ಟಿಲೇರಿರುವ ಪವಿತ್ರಾ ಲೋಕೇಶ್ ಅವರು ಸುಳ್ಳು ಸುದ್ದಿ ಹರಡಿಸುವವರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ಪವಿತ್ರಾ ಲೋಕೇಶ್ ಅವರು ನರೇಶ್ ಎಂಬುವವರ ಜೊತೆ ಮದುವೆ ಆಗಿದ್ದಾರೆ ಎಂದು ಅನೇಕ ಕಡೆಗಳಲ್ಲಿ ವರದಿ ಆಗಿದೆ. ಆ ಬಗ್ಗೆ ಇನ್ನಷ್ಟೇ ಸೂಕ್ತ ಸ್ಪಷ್ಟನೆ ಬರಬೇಕಿದೆ. ಅದು ಏನೇ ಇದ್ದರೂ ಅವರ ವೈಯಕ್ತಿಕ ವಿಚಾರ. ಆ ಬಗ್ಗೆ ಅವರು ಸಾರ್ವಜನಿಕವಾಗಿ ಮಾತನಾಡುವುದಕ್ಕೂ ಮುನ್ನವೇ ಹತ್ತಾರು ಬಗೆಯ ಗಾಸಿಪ್ಗಳು ಹರಿದಾಡಿವೆ. ಇದು ಪವಿತ್ರಾ ಲೋಕೇಶ್ ಅವರಿಗೆ ಬೇಸರ ಮೂಡಿಸಿದೆ. ಹಾಗಾಗಿ ಅವರು ಮೈಸೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪವಿತ್ರಾ ಲೋಕೇಶ್ ಅವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆಯಲಾಗಿದೆ. ಅದರ ಮೂಲಕ ಅವಹೇಳನಕಾರಿ ಪೋಸ್ಟ್ಗಳನ್ನು ಮಾಡಲಾಗಿದೆ. ಜೊತೆಗೆ, ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಕೂಡ ಅವರು ಆರೋಪಿಸಿದ್ದು, ದೂರು ನೀಡಿದ್ದಾರೆ. ಈ ಕುರಿತು ಎಫ್ಐಆರ್ ದಾಖಲಾಗಿದೆ.
ಖ್ಯಾತ ನಟ ಮೈಸೂರು ಲೋಕೇಶ್ ಅವರ ಪುತ್ರಿ ಪವಿತ್ರಾ ಲೋಕೇಶ್. ಹಲವು ವರ್ಷಗಳಿಂದ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಮತ್ತು ತೆಲುಗು ಸೇರಿ ನೂರಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪೋಷಕ ಪಾತ್ರಗಳ ಮೂಲಕ ಪವಿತ್ರಾ ಲೋಕೇಶ್ ಜನಮನ ಗೆದ್ದಿದ್ದಾರೆ. ಇಂದಿಗೂ ಅವರು ಬಹುಬೇಡಿಕೆಯ ಪೋಷಕ ನಟಿಯಾಗಿ ಚಾರ್ಮ್ ಉಳಿಸಿಕೊಂಡಿದ್ದಾರೆ. ಅವರ ಪತಿ ಸುಚೇಂದ್ರ ಪ್ರಸಾದ್ ಹಾಗೂ ಸಹೋದರ ಆದಿ ಲೋಕೇಶ್ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
ಇದನ್ನೂ ಓದಿ: ಸೈಬರ್ ಕ್ರೈಂ ಪ್ರಕರಣ ತಡೆಗಟ್ಟಲು ಪ್ರತ್ಯೇಕ CEN ಘಟಕಗಳ ಆರಂಭ
ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಅರ್ಜುನ್ ಜನ್ಯ ಎಚ್ಚರಿಕೆ! ಸೈಬರ್ ಠಾಣೆಗೆ ದೂರು