ನಿರ್ದೇಶಕ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ (Apeksha Purohit) ದಂಪತಿ ಅಭಿಮಾನಿಗಳಿಗೆ ಖಷಿ ಸುದ್ದಿ ನೀಡಿದ್ದಾರೆ. ಈ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಹೊಸ ಸದಸ್ಯೆಯ ಆಗಮನದಿಂದ ಕುಟುಂಬದಲ್ಲಿ ಖುಷಿ ಹೆಚ್ಚಿದೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಮಗು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ‘ಗೂಗ್ಲಿ’, ‘ನಟಸಾರ್ವಭೌಮ’ದಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿ ಪವನ್ ಒಡೆಯರ್ ಫೇಮಸ್ ಆಗಿದ್ದಾರೆ. ನಟಿ, ನಿರ್ಮಾಪಕಿ ಆಗಿ ಅಪೇಕ್ಷಾ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಪವನ್ ಒಡೆಯರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅಪೇಕ್ಷಾ ಬೆಡ್ ಮೇಲೆ ಮಲಗಿದ್ದಾರೆ. ಪಕ್ಕದಲ್ಲಿ ಪವನ್ ಒಡೆಯರ್ ಇದ್ದಾರೆ. ‘ಹೆಣ್ಣು ಮಗು ಜನಿಸಿದೆ’ ಎಂದು ಅವರು ಬರೆದುಕೊಂಡಿದ್ದಾರೆ. ಈ ಫೋಟೋಗೆ ಎಲ್ಲರೂ ಶುಭಾಶಯ ತಿಳಿಸಿ ಕಮೆಂಟ್ ಮಾಡಿದ್ದಾರೆ.
‘ಶುಭಾಶಯಗಳು ಅಪೇಕ್ಷಾ ಮತ್ತು ಪವನ್’ ಎಂದು ನಿಧಿ ಸುಬ್ಬಯ್ಯ ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ತಾಯಿ ಹಾಗೂ ಮಗುವಿನ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಸದ್ಯ ಈ ಪೋಸ್ಟ್ ಸಾವಿರಾರು ಲೈಕ್ಸ್ ಪಡೆದಿದೆ.
ಪವನ್ ಒಡೆಯರ್ ಅವರು 2012ರಲ್ಲಿ ಚಿತ್ರಂಗಕ್ಕೆ ಕಾಲಿಟ್ಟರು. ‘ಗೋವಿಂದಾಯ ನಮಃ’ ಅವರ ಮೊದಲ ನಿರ್ದೇಶನದ ಸಿನಿಮಾ. 2013ರಲ್ಲಿ ರಿಲೀಸ್ ಆದ ‘ಗೂಗ್ಲಿ’ ಸೂಪರ್ ಹಿಟ್ ಎನಿಸಿಕೊಂಡಿತು. ಯಶ್ ಹಾಗೂ ಕೃತಿ ಕರಬಂಧ ಈ ಚಿತ್ರದಲ್ಲಿ ನಟಿಸಿದ್ದರು. 2022ರಲ್ಲಿ ಅವರ ನಿರ್ದೇಶನದ ‘ರೆಮೋ’ ಚಿತ್ರ ರಿಲೀಸ್ ಆಯಿತು.
ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ನಿರ್ದೇಶಕ ಪವನ್ ಒಡೆಯರ್ ಪತ್ನಿ
ಅಪೇಕ್ಷಾ ಪುರೋಹಿತ್ ಅವರು ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಫ್ಯಾಷನ್ ಡಿಸೈನರ್ ಆಗಿಯೂ ಗಮನ ಸೆಳೆದಿದ್ದಾರೆ. ‘ಡೊಳ್ಳು’ ಚಿತ್ರವನ್ನು ಅವರು ನಿರ್ಮಾಣ ಮಾಡಿದ್ದರು. ಈ ಸಿನಿಮಾ ಸಾಕಷ್ಟು ಪ್ರಶಸ್ತಿ ಗೆದ್ದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ