Pooja Gandhi: ರಮ್ಯಾ ಎಲ್ಲರಿಗೂ ಇಷ್ಟ ಆಗೋದೇಕೆ? ಕನ್ನಡದಲ್ಲೇ ಪತ್ರ ಬರೆದು ವಿವರಿಸಿದ ಪೂಜಾ ಗಾಂಧಿ

‘ರಮೇಶ್ ಸರ್, ನಿಮ್ಮ ಮತ್ತು ರಮ್ಯ ಮಧ್ಯೆ ನಡೆಯುವ ಮಾತಿನ ಜುಗಲ್​ಬಂದಿ ನೋಡೋಕ್ಕೆ ಲಕ್ಷಾಂತರ ಕನ್ನಡಿಗರ ರೀತಿ ನಾನೂ ಕೂಡ ಕಾತರದಿಂದ ಕಾಯುತ್ತಿದ್ದೇನೆ’ ಎಂದು ಪತ್ರ ಆರಂಭ ಮಾಡಿದ್ದಾರೆ ಪೂಜಾ ಗಾಂಧಿ.

Pooja Gandhi: ರಮ್ಯಾ ಎಲ್ಲರಿಗೂ ಇಷ್ಟ ಆಗೋದೇಕೆ? ಕನ್ನಡದಲ್ಲೇ ಪತ್ರ ಬರೆದು ವಿವರಿಸಿದ ಪೂಜಾ ಗಾಂಧಿ
ರಮ್ಯಾ-ಪೂಜಾ ಗಾಂಧಿ

Updated on: Mar 25, 2023 | 12:16 PM

ಪೂಜಾ ಗಾಂಧಿ (Pooja Gandhi) ಅವರು ಸದ್ಯ ನಟನೆಯಿಂದ ದೂರ ಇದ್ದಾರೆ. ಅವರು ಸದ್ಯ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಈಗ ಪೂಜಾ ಗಾಂಧಿ ಅವರು ರಮ್ಯಾ ಬಗ್ಗೆ ಬರೆದುಕೊಂಡಿದ್ದಾರೆ. ‘ವೀಕೆಂಡ್ ವಿತ್ ರಮೇಶ್​ ಸೀಸನ್ 5’ಗೆ ರಮ್ಯಾ ಅತಿಥಿಯಾಗಿ ಬರುತ್ತಿದ್ದಾರೆ. ಈ ಕಾರಣಕ್ಕೆ ರಮ್ಯಾ (Ramya) ಬಗ್ಗೆ ಪೂಜಾ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅವರು ಕನ್ನಡದಲ್ಲೇ ಪತ್ರ ಬರೆದಿದ್ದಾರೆ ಅನ್ನೋದು ವಿಶೇಷ. ಸದ್ಯ ಈ ಪತ್ರ ವೈರಲ್ ಆಗುತ್ತಿದೆ. ಪೂಜಾ ಗಾಂಧಿ ಕೂಡ ಕಾರ್ಯಕ್ರಮಕ್ಕೆ ಬರ್ತಾರಾ ಅನ್ನೋದು ಕಾದುನೋಡಬೇಕಿದೆ.

‘ರಮೇಶ್ ಸರ್, ನಿಮ್ಮ ಮತ್ತು ರಮ್ಯ ಮಧ್ಯೆ ನಡೆಯುವ ಮಾತಿನ ಜುಗಲ್​ಬಂದಿ ನೋಡೋಕ್ಕೆ ಲಕ್ಷಾಂತರ ಕನ್ನಡಿಗರ ರೀತಿ ನಾನೂ ಕೂಡ ಕಾತರದಿಂದ ಕಾಯುತ್ತಿದ್ದೇನೆ. ರಮ್ಯಾ ಒಳ್ಳೆಯ ವ್ಯಕ್ತಿ. ಅವರಿಗೆ ಏನು ಅನಿಸುತ್ತದೆಯೋ ಅದನ್ನೇ ಹೇಳುತ್ತಾರೆ’ ಎಂದು ಪತ್ರ ಆರಂಭ ಮಾಡಿದ್ದಾರೆ ಪೂಜಾ ಗಾಂಧಿ.

‘ನನ್ನ ವೈಯಕ್ತಿಕವಾಗಿ ರಮ್ಯಾ ಯಾಕೆ ಇಷ್ಟ ಆಗ್ತಾರೆ ಅಂದ್ರೆ, ಅವರು ತಮ್ಮಸಹ ಕಲಾವಿದರ ಪರವಾಗಿ ನಿಲ್ಲುತ್ತಾರೆ. ಅವರಲ್ಲಿನ ಈ ಗುಣ ಇಷ್ಟಾಗುತ್ತದೆ. ನನಗೆ ಈಗಲೂ ನೆನಪಿದೆ. ರಾಯಚೂರಿನ ಚುನಾವಣೆಯಲ್ಲಿ ಕೆಟ್ಟದಾಗಿ ಸೋತಾಗ, ‘ಪೂಜಾ ಒಳ್ಳೆಯ ಪ್ರಯತ್ನ ಮಾಡಿದ್ದೀರಿ’ ಎಂದು ರಮ್ಯಾ ಹೇಳಿದ್ದರು. ರಮ್ಯಾ ನಿಮ್ಮ ಪ್ರೊಡಕ್ಷನ್ ಕಂಪನಿಗೆ ಶುಭಾವಾಗಲಿ. ನಿಮ್ಮ ಸಂಸ್ಥೆಯಿಂದ ರಾಷ್ಟ್ರಮಟ್ಟದ ಕನ್ನಡ ಸಿನಿಮಾಗಳು ಮೂಡಿಬರಲಿ’ ಎಂದು ಅವರು ಶುಭಹಾರೈಸಿದ್ದಾರೆ.

ಇದನ್ನೂ ಓದಿ: Ramya: ‘ವೀಕೆಂಡ್ ವಿತ್​ ರಮೇಶ್’ ಮೊದಲ ಎಪಿಸೋಡ್​ ಅತಿಥಿ ರಮ್ಯಾ; ‘ನಮ್ಮ ಕ್ವೀನ್​’ ಎಂದ ಫ್ಯಾನ್ಸ್

ರಮ್ಯಾ ಅವರ ವೃತ್ತಿ ಜೀವನದಲ್ಲಿ ರಾಜ್​ಕುಮಾರ್ ಕುಟುಂಬ ವಿಶೇಷವಾಗಿದೆ. ರಮ್ಯಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಪಾರ್ವತಮ್ಮ. ಅವರಿಗೆ ರಮ್ಯಾ ಎಂದು ನಾಮಕರಣ ಮಾಡಿದ್ದೂ ಅವರೇ. ಇದನ್ನು ರಮ್ಯಾ ಉಲ್ಲೇಖ ಮಾಡಿದ್ದಾರೆ. ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಅಭಿನಯದ ‘ಸಂಜು ಮತ್ತು ಗೀತ’ ಸಿನಿಮಾ ಯಶಸ್ಸು ಕಂಡಿತ್ತು. ಶ್ರೀನಗರ ಕಿಟ್ಟಿ ಕೂಡ ವೇದಿಕೆ ಏರಿದ್ದಾರೆ. ಈ ವೇಳೆ ‘ಐ ಲವ್ ಯೂ ಸಂಜು’ ಎಂದಿದ್ದಾರೆ ರಮ್ಯಾ. ಪುನೀತ್ ಹಾಗೂ ರಮ್ಯಾ ಅವರದ್ದು ಹಿಟ್ ಕಾಂಬಿನೇಷನ್. ಆ ಬಗ್ಗೆಯೂ ರಮ್ಯಾ ಮಾತನಾಡಿದ್ದಾರೆ. ರಮ್ಯಾ ಪುನೀತ್ ನೆನೆದು ಕಣ್ಣೀರು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ