Puneeth Rajkumar: ಪುನೀತ್ ನಿವಾಸಕ್ಕೆ ಪ್ರಭಾಸ್ ಭೇಟಿ; ಕುಟುಂಬದವರಿಗೆ ಸಾಂತ್ವನ ಹೇಳಿದ ನಟ
Prabhas: ಬಹುಭಾಷಾ ನಟ ಪ್ರಭಾಸ್ ನಿನ್ನೆ (ಮಂಗಳವಾರ) ಪುನೀತ್ ರಾಜ್ಕುಮಾರ್ ನಿವಾಸಕ್ಕೆ ಆಗಮಿಸಿ, ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ಭೇಟಿಯಾಗಿ, ಸಾಂತ್ವನ ಹೇಳಿದ್ದಾರೆ.
ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ನಿಧನರಾಗಿ ಎರಡು ತಿಂಗಳು ತುಂಬಿದೆ. ಕರುನಾಡು ಈ ಆಘಾತದಿಂದ ಇನ್ನೂ ಹೊರಬಂದಿಲ್ಲ. ವಿವಿಧ ಭಾಷೆಗಳ ಚಿತ್ರರಣಗದ ಗಣ್ಯರು ಪುನೀತ್ ಅವರ ನಿವಾಸಕ್ಕೆ ಆಗಮಿಸಿ ಅಶ್ವಿನಿ ಪುನೀತ್ರಾಜ್ಕುಮಾರ್ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ. ನಿನ್ನೆ ಅಂದರೆ ಡಿಸೆಂಬರ್ 28ರಂದು (ಮಂಗಳವಾರ) ಬಹುಭಾಷಾ ನಟ ಪ್ರಭಾಸ್ ಪುನೀತ್ ನಿವಾಸಕ್ಕೆ ಆಗಮಿಸಿದ್ದರು. ಬೆಂಗಳೂರಿನ ಸದಾಶಿವನಗರದಲ್ಲಿರುವ ಪುನೀತ್ ನಿವಾಸಕ್ಕೆ ಭೇಟಿ ನೀಡಿದ ಪ್ರಭಾ,ಸ್ ಪುನೀತ್ ಪತ್ನಿ ಅಶ್ವಿನಿ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ನಂತರ ರಾಘವೇಂದ್ರ ರಾಜ್ಕುಮಾರ್ ಅವರೊಂದಿಗೆ ಚರ್ಚಿಸಿ ಪ್ರಭಾಸ್ ವಾಪಸ್ಸಾಗಿದ್ದಾರೆ.
ಪ್ರಭಾಸ್ ಅವರ ಜನ್ಮದಿನಕ್ಕೆ ಶುಭಹಾರೈಸಲು ಅಕ್ಟೋಬರ್ 23ರಂದು ಪುನೀತ್ ಕರೆ ಮಾಡಿದ್ದರಂತೆ. ಅದನ್ನು ಪ್ರಭಾಸ್ ಸ್ಮರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಭಾಸ್ ಆಗಮಿಸಿದ್ದ ವೇಳೆ ಶಿವರಾಜ್ಕುಮಾರ್ ಶಕ್ತಿಧಾಮಕ್ಕೆ ತೆರಳಿದ್ದರು.
ಪುನೀತ್ ನಿಧನರಾಗಿ ಎರಡು ತಿಂಗಳು; ಸಮಾಧಿಗೆ ಪೂಜೆ ನಟ ಪುನೀತ್ ರಾಜ್ಕುಮಾರ್ ಇಹಲೋಕ ತ್ಯಜಿಸಿ ಎರಡು ತಿಂಗಳಾಗಿವೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಇಂದು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ನಂತರ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್, ‘ಪುನೀತ್ ಮಾಡುತ್ತಿದ್ದ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಲು ಅಭಿಮಾನಿಗಳೇ ನಮಗೆ ಶಕ್ತಿ ನೀಡಬೇಕು. ಅವನ ಸಿನಿಮಾಗಳೆಲ್ಲ ಈಗ ಬದಿಗೆ ಸರಿದಿವೆ. ಅವನು ಮಾಡಿದ ಸಾಮಾಜಿಕ ಕೆಲಸಗಳೇ ಮುಂದೆ ಬಂದಿವೆ’ ಎಂದು ನುಡಿದಿದ್ದಾರೆ.
ಪುನೀತ್ ಅವರು ನೇತ್ರದಾನ ಮಾಡಿದ್ದನ್ನು ನೋಡಿ ರಾಜ್ಯದ ಜನರು ಅದರಿಂದ ಪ್ರಭಾವಿತರಾಗಿದ್ದಾರೆ. ಆದ್ದರಿಂದಲೇ ಕರ್ನಾಟಕದಲ್ಲಿ ನೇತ್ರದಾನ ಏರಿಕೆಯಾಗಿದೆ. ಇದೀಗ ಶಿವರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ದೇಹದಾನದ ನಿರ್ಧಾರ ಕೈಗೊಂಡಿದ್ದಾರೆ. ಈ ಕುರಿತು ರಾಘಣ್ಣ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:
‘ಶಿವಣ್ಣ, ನಾನು ದೇಹದಾನ ಮಾಡಿದ್ದೇವೆ’: ಅಪ್ಪು ನೆನಪಲ್ಲಿ ರಾಘಣ್ಣ ಹೇಳಿದ ಮಹತ್ವದ ವಿಚಾರಗಳು ಇಲ್ಲಿವೆ
ಅಪ್ಪು ಇಲ್ಲದೇ ಕಳೆಯಿತು 2 ತಿಂಗಳು; ನೇತ್ರದಾನದ ಬಗ್ಗೆ ವಿಶೇಷ ಮಾಹಿತಿ ಹಂಚಿಕೊಂಡ ರಾಘಣ್ಣ