Veeram Movie: ರಿಲೀಸ್​ ಬಗ್ಗೆ ಅಪ್​ಡೇಟ್​ ನೀಡಿದ ‘ವೀರಂ’ ತಂಡ; ಹೆಚ್ಚಿತು ಪ್ರಜ್ವಲ್​ ದೇವರಾಜ್​ ಅಭಿಮಾನಿಗಳ ನಿರೀಕ್ಷೆ

|

Updated on: Feb 10, 2023 | 7:14 PM

Prajwal Devaraj | Veeram Kannada Movie: ‘ವೀರಂ’ ಚಿತ್ರದ ಮೂಲಕ ಪ್ರಜ್ವಲ್​ ದೇವರಾಜ್​ ಅವರು ಸಿಕ್ಕಾಪಟ್ಟೆ ಮಾಸ್​ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಭರ್ಜರಿ ಆ್ಯಕ್ಷನ್​ ದೃಶ್ಯಗಳು ಈ ಚಿತ್ರದಲ್ಲಿ ಇವೆ.

Veeram Movie: ರಿಲೀಸ್​ ಬಗ್ಗೆ ಅಪ್​ಡೇಟ್​ ನೀಡಿದ ‘ವೀರಂ’ ತಂಡ; ಹೆಚ್ಚಿತು ಪ್ರಜ್ವಲ್​ ದೇವರಾಜ್​ ಅಭಿಮಾನಿಗಳ ನಿರೀಕ್ಷೆ
ಪ್ರಜ್ವಲ್ ದೇವರಾಜ್
Follow us on

ಕನ್ನಡ ಚಿತ್ರರಂಗದಲ್ಲಿ ನಟ ಪ್ರಜ್ವಲ್​ ದೇವರಾಜ್​ (Prajwal Devaraj) ಅವರು ಆ್ಯಕ್ಟೀವ್ ಆಗಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಮಾಡುತ್ತ, ಅಭಿಮಾನಿಗಳನ್ನು ರಂಜಿಸಲು ಅವರು ಫುಲ್​ಟೈಮ್​ ಸಿದ್ಧವಾಗಿರುತ್ತಾರೆ. ಆದರೆ ಕಾರಣಾಂತರಗಳಿಂದ ಅವರು ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳದೇ ಬಹಳ ತಿಂಗಳು ಕಳೆದಿದೆ. 2022ರಲ್ಲಿ ಅವರ ಯಾವ ಚಿತ್ರಗಳೂ (Prajwal Devaraj Movies) ತೆರೆಕಾಣಲಿಲ್ಲ. ಪ್ರಜ್ವಲ್​ ದೇವರಾಜ್​ ಅವರನ್ನು ದೊಡ್ಡ ಪರದೆ ಮೇಲೆ ನೋಡಲು ಕಾದಿರುವ ಅಭಿಮಾನಿಗಳಿಗೆ ಈಗ ಗುಡ್​ ನ್ಯೂಸ್​ ಸಿಕ್ಕಿದೆ. ಅವರು ನಟಿಸಿರುವ ‘ವೀರಂ’ ಸಿನಿಮಾದ (Veeram Kannada Movie) ಬಿಡುಗಡೆ ಬಗ್ಗೆ ಹೊಸ ಅಪ್​ಡೇಟ್​ ಸಿಕ್ಕಿದೆ. ಏಪ್ರಿಲ್​ ತಿಂಗಳಲ್ಲಿ ಸಿನಿಮಾವನ್ನು ರಿಲೀಸ್​ ಮಾಡುವುದಾಗಿ ತಂಡ ಮಾಹಿತಿ ನೀಡಿದೆ. ಪಕ್ಕಾ ಡೇಟ್​ ಕೂಡ ಶೀಘ್ರದಲ್ಲೇ ಅನೌನ್ಸ್​ ಆಗಲಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ‘ವೀರಂ’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕೊವಿಡ್​ ಮುಂತಾದ ಕಾರಣಗಳಿಂದಾಗಿ ರಿಲೀಸ್​ ದಿನಾಂಕ ಮುಂದೂಡುವುದು ಅನಿವಾರ್ಯ ಆಯಿತು. ಈಗ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡಿರುವ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದ್ದೂರಿಯಾಗಿ ರಿಲೀಸ್​ ಮಾಡಲು ಸಕಲ ರೀತಿಯಲ್ಲಿ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ
ಪ್ರಜ್ವಲ್​ ದೇವರಾಜ್​-ಪ್ರಿಯಾಂಕಾ ತಿಮ್ಮೇಶ್​ ಅಭಿನಯದ ‘ಅರ್ಜುನ್​ ಗೌಡ’ ಸಿನಿಮಾ ಹೇಗಿದೆ?
‘ಮಾಫಿಯಾ’ ಚಿತ್ರಕ್ಕಾಗಿ ಗೆಟಪ್​ ಬದಲಿಸಿ ಕ್ಯಾನ್ಸರ್​ ಪೀಡಿತರಿಗೆ ಕೂದಲು ದಾನ ಮಾಡಿದ ಪ್ರಜ್ವಲ್​ ದೇವರಾಜ್​
ಪ್ರಜ್ವಲ್​ ದೇವರಾಜ್ ​- ರಾಗಿಣಿ ಚಂದ್ರನ್​ ವಿವಾಹ ವಾರ್ಷಿಕೋತ್ಸವ ಸಂಭ್ರಮ; ಮದುವೆ ವಿಡಿಯೋ ವೈರಲ್​
ಪ್ರಜ್ವಲ್​ ಹುಟ್ಟುಹಬ್ಬದಂದೇ ಹೊರಬಿತ್ತು ‘ಮಾಫಿಯಾ’ ವಿಷಯ; ಡೈನಾಮಿಕ್​ ಪ್ರಿನ್ಸ್​ ಕೈಗೆ ಬೇಡಿ

ಇದನ್ನೂ ಓದಿ: ಮೇಘನಾ ರಾಜ್​ ಕಮ್​ಬ್ಯಾಕ್​ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​; ಅಭಿಮಾನಿಗಳು ಫುಲ್​ ಖುಷ್​

ಪ್ರಜ್ವಲ್​ ದೇವರಾಜ್​ ಅವರು ಈವರೆಗೂ ಲವರ್​ ಬಾಯ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದು ಹೆಚ್ಚು. ಪೊಲೀಸ್​ ಪಾತ್ರ ಮಾಡಿ ರಂಜಿಸಿದ್ದೂ ಉಂಟು. ಆದರೆ ‘ವೀರಂ’ ಸಿನಿಮಾದಲ್ಲಿ ಅವರ ಗೆಟಪ್​ ಸಂಪೂರ್ಣ ಬದಲಾಗಿದೆ. ಸಿಕ್ಕಾಪಟ್ಟೆ ಮಾಸ್​ ಅವತಾರದಲ್ಲಿ ಅವರು ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಭರ್ಜರಿ ಆ್ಯಕ್ಷನ್​ ದೃಶ್ಯಗಳೂ ಈ ಸಿನಿಮಾದಲ್ಲಿ ಇವೆ. ಈ ಎಲ್ಲ ಕಾರಣಗಳಿಂದಾಗಿ ‘ವೀರಂ’ ಚಿತ್ರ ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ: ಟೈಮ್​ ಲೂಪ್​ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​; ‘ಮಮ್ಮಿ’ ಖ್ಯಾತಿಯ ಲೋಹಿತ್​ ನಿರ್ದೇಶನ

ಈ ಸಿನಿಮಾದ ಪಾತ್ರವರ್ಗ ಕೂಡ ಗಮನ ಸೆಳೆಯುವಂತಿದೆ. ಪ್ರಜ್ವಲ್​ ದೇವರಾಜ್​, ಶ್ರುತಿ, ಶ್ರೀನಗರ ಕಿಟ್ಟಿ, ಶಿಷ್ಯ ದೀಪಕ್​, ರಚಿತಾ ರಾಮ್​ ಮುಂತಾದವರು ನಟಿಸಿದ್ದಾರೆ. ತುಂಬ ಅದ್ದೂರಿಯಾದಂತಹ ಮೇಕಿಂಗ್​ ಈ ಸಿನಿಮಾದಲ್ಲಿದೆ ಎಂಬುದಕ್ಕೆ ಈ ಹಿಂದೆ ಬಿಡುಗಡೆಯಾದ ಟೀಸರ್​ನಲ್ಲಿ ಸುಳಿವು ಸಿಕ್ಕಿತ್ತು. ನುರಿತ ತಂತ್ರಜ್ಞರು ‘ವೀರಂ’ ತೆರೆಹಿಂದೆ ಕೆಲಸ ಮಾಡಿದ್ದಾರೆ.

ಈ ಚಿತ್ರಕ್ಕೆ ಶಶಿಧರ್​ ಕೆ.ಎಂ. ಬಂಡವಾಳ ಹೂಡಿದ್ದಾರೆ. ಕುಮಾರ್​ ರಾಜ್​ (ಖದರ್​ ಕುಮಾರ್​) ನಿರ್ದೇಶನ ಮಾಡಿದ್ದಾರೆ. ಲವಿತ್​ ಛಾಯಾಗ್ರಹಣ, ಅನೂಪ್​ ಸಿಳೀನ್​ ಸಂಗೀತ ನಿರ್ದೇಶನ, ರವಿಚಂದ್ರನ್​ ಸಂಕಲನ, ಡಿಫರೆಂಡ್​ ಡ್ಯಾನಿ ಸಾಹಸ ನಿರ್ದೇಶನ ‘ವೀರಂ’ ಚಿತ್ರಕ್ಕಿದೆ. ಈ ಸಿನಿಮಾದಲ್ಲಿ ವಿಷ್ಣುವರ್ಧನ್​ ಅಭಿಮಾನಿಯಾಗಿ ಪ್ರಜ್ವಲ್​ ದೇವರಾಜ್​ ಕಾಣಿಸಿಕೊಳ್ಳಲಿದ್ದಾರೆ. ಹೀರೋ ಕೈ ಮೇಲೆ ಇರುವ ವಿಷ್ಣು ದಾದಾ ಟ್ಯಾಟೂ ಸಖತ್ ಹೈಲೈಟ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:14 pm, Fri, 10 February 23