AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರೇಜ್ ಆಫ್ ಕಂಬಳ’ ಹಾಡಿನಿಂದ ಕುತೂಹಲ ಹೆಚ್ಚಿಸಿದ ‘ಕರಾವಳಿ’ ಸಿನಿಮಾ ತಂಡ

ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ರಾಜ್ ಬಿ. ಶೆಟ್ಟಿ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ‘ವಿಕೆ ಫಿಲ್ಮ್ಸ್’ ಮತ್ತು ‘ಗಾಣಿಗ ಫಿಲ್ಮ್ಸ್‌’ ಜೊತೆಯಾಗಿ ಈ ಸಿನಿಮಾ ನಿರ್ಮಾಣ ಮಾಡಿವೆ. ಈ ಚಿತ್ರದಿಂದ ‘ರೇಜ್ ಆಫ್ ಕಂಬಳ’ ಹಾಡು ಬಿಡುಗಡೆ ಆಗಿದೆ.

‘ರೇಜ್ ಆಫ್ ಕಂಬಳ’ ಹಾಡಿನಿಂದ ಕುತೂಹಲ ಹೆಚ್ಚಿಸಿದ ‘ಕರಾವಳಿ’ ಸಿನಿಮಾ ತಂಡ
Karavali Song
ಮದನ್​ ಕುಮಾರ್​
|

Updated on: Jul 16, 2026 | 10:41 PM

Share

ಮುಖ್ಯಾಂಶಗಳು

  • ‘ಕರಾವಳಿ’ ಚಿತ್ರದ ಪವರ್‌ಫುಲ್ ‘ರೇಜ್ ಆಫ್ ಕಂಬಳ’ (ಓಡಾ...) ಹಾಡು ಬಿಡುಗಡೆಯಾಗಿದೆ.
  • ಖ್ಯಾತ ಗಾಯಕ ಆನಂದ್ ಶ್ರೀರಾಜ್ ಈ ಹಾಡಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
  • ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ನಟನೆಯ ಈ ಸಿನಿಮಾ ಜುಲೈ 24ರಂದು ರಿಲೀಸ್ ಆಗಲಿದೆ.

ಹಲವು ಕಾರಣಗಳಿಂದಾಗಿ ‘ಕರಾವಳಿ’ (Karavali) ಸಿನಿಮಾ ನಿರೀಕ್ಷೆ ಮೂಡಿಸಿದೆ. ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ (Raj B. Shetty) ಮುಂತಾದವರು ನಟಿಸಿರುವ ಈ ಸಿನಿಮಾದ ಹಾಡುಗಳು ಗಮನ ಸೆಳೆಯುತ್ತಿವೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳನ್ನು ನೋಡಿದ ಬಳಿಕ ಸಿನಿಮಾ ಮೇಲಿನ ಹೈಪ್ ಇನ್ನಷ್ಟು ಹೆಚ್ಚಾಗಿದೆ. ಈಗ ಇನ್ನೊಂದು ಹೊಸ ಹಾಡನ್ನು ಬಿಡುಗಡೆ ಮಾಡಲಾಗಿದೆ. ಈ ಹಾಡು ಸಖತ್ ಅಗ್ರೆಸಿವ್ ಆಗಿದೆ ಎಂಬುದು ವಿಶೇಷ. ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ ಜೊತೆ ಸಂಪದಾ, ಸುಷ್ಮಿತಾ, ಮಿತ್ರ, ರಮೇಶ್ ಇಂದಿರಾ, ಶ್ರೀಧರ್ ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಶೀರ್ಷಿಕೆಗೆ ತಕ್ಕಂತೆಯೇ ಈ ಸಿನಿಮಾದಲ್ಲಿ ಕರಾವಳಿ ಭಾಗದ ಕಥೆ ಇರಲಿದೆ. ಆದ್ದರಿಂದ ನಿರೀಕ್ಷೆ ಮನೆ ಮಾಡಿದೆ. ಈಗಾಗಲೇ ಟ್ರೇಲರ್ ಹೇಗಿದೆ ಎಂಬುದನ್ನು ಜನರು ನೋಡಿದ್ದಾರೆ. ಜುಲೈ 24ಕ್ಕೆ ಅದ್ದೂರಿಯಾಗಿ ಈ ಸಿನಿಮಾ ರಿಲೀಸ್ ಆಗಲಿದೆ. ಈ ನಡುವೆ ಚಿತ್ರತಂಡದಿಂದ ಪವರ್ ಫುಲ್ ಆಗಿರುವ ಕವರ್ ಸಾಂಗ್ ರಿಲೀಸ್ ಮಾಡಲಾಗಿದೆ. ದೊಡ್ಡ ಪರದೆಯಲ್ಲಿ ಈ ಸಾಂಗ್ ನೋಡಲು ಸಿನಿಪ್ರಿಯರು ಕಾದಿದ್ದಾರೆ.

ಆನಂದ್ ಶ್ರೀರಾಜ್ ಗಾಯನದ ಹಾಡು:

‘Rage of Kambala’ ಎಂಬ ಶೀರ್ಷಿಕೆಯಲ್ಲಿ ರಿಲೀಸ್ ಆಗಿರುವ ‘ಓಡಾ…’ ಗೀತೆಗೆ ಖ್ಯಾತ ಗಾಯಕ ಆನಂದ್ ಶ್ರೀರಾಜ್ ಅವರು ಧ್ವನಿ ನೀಡಿದ್ದಾರೆ. ಮಲಯಾಳಂನ ಸೂಪರ್ ಹಿಟ್ ಸಿನಿಮಾಗಳಾದ ‘ಕಿಂಗ್ ಆಫ್ ಕೋಥ’, ‘ಎಂಪರಾನ್’ ಮುಂತಾದ ಸಿನಿಮಾದ ಹಾಡುಗಳು ಅವರ ಕಂಠದಲ್ಲಿ ಮೂಡಿಬಂದು ಜನಮನ ಗೆದ್ದಿವೆ. ಈಗ ಅವರು ‘ಕರಾವಳಿ’ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ನೀಡಿದ್ದಾರೆ.

ಕುತೂಹಲ ಹೆಚ್ಚಿಸಿದ ಹೊಸ ಗೀತೆ:

ಈ ಹಾಡಿಗೆ ಪ್ರಮೋದ್ ಮರವಂತೆ ಅವರು ಸಾಹಿತ್ಯ ಬರೆದಿದ್ದಾರೆ. ಸಚಿನ್ ಬಸ್ರೂರು ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಕಥೆಯ ಯಾವ ಹಂತದಲ್ಲಿ ಈ ಹಾಡು ಬರಲಿದೆ ಎಂಬುದನ್ನು ತಿಳಿಯುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ತಾಂತ್ರಿಕವಾಗಿ ಈ ಸಿನಿಮಾ ಸಖತ್ ಅದ್ದೂರಿಯಾಗಿ ಮೂಡಿದೆ ಎಂಬುದಕ್ಕೆ ಈ ಹಾಡು ಕೂಡ ಸಾಕ್ಷಿಯಾಗಿದೆ.

ಇದನ್ನೂ ಓದಿ: ‘ಕರಾವಳಿ’ ಕಿರಿಕ್: ಪ್ರಜ್ವಲ್​ಗೆ ಸಂಭಾವನೆ ಬಾಕಿ ಉಳಿಸಿಕೊಂಡಿದ್ದೇಕೆ? ವಿವರಿಸಿದ ಚಿತ್ರತಂಡ

ಜಯಪ್ರಿಯ ಗಾಯಕರ ಸಂಗಮ:

‘ಕರಾವಳಿ’ ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಜನಪ್ರಿಯ ಗಾಯಕರಾದ ಸಿದ್ ಶ್ರೀರಾಮ್, ಸಾಯಿ ವಿಗ್ನೇಶ್, ಆಬಿ, ಬಿ. ಜಯಶ್ರೀ ಮತ್ತು ಆನಂದ್ ಶ್ರೀರಾಜ್ ಅವರ ಕಂಠದಲ್ಲಿ ಈ ಸಿನಿಮಾದ ಹಾಡುಗಳು ಮೂಡಿಬಂದಿವೆ. ಈಗಾಗಲೇ ಬಿಡುಗಡೆ ಆಗಿರುವ ‘ಮುದ್ದು ಗುಮ್ಮ..’ ಹಾಗೂ ‘ಸೋಲ್ ಆಫ್ ಕರಾವಳಿ’ ಹಾಡುಗಳು ಜನರಿಗೆ ಇಷ್ಟ ಆಗಿವೆ. ಈಗ ‘ರೇಜ್ ಆಫ್ ಕಂಬಳ’ ಕೂಡ ಸೇರ್ಪಡೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಸಚಿವ ಸಂಪುಟ ವಿಸ್ತರಣೆ ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ
ಸಚಿವ ಸಂಪುಟ ವಿಸ್ತರಣೆ ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ
ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಮಹತ್ವದ ಸಭೆ, ಯಾರಿಗೆಲ್ಲಾ ಮಂತ್ರಿ ಸ್ಥಾನ?
ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಮಹತ್ವದ ಸಭೆ, ಯಾರಿಗೆಲ್ಲಾ ಮಂತ್ರಿ ಸ್ಥಾನ?
ಸಿಎಂ ಬದಲಾದರೂ ಬದಲಾಗದ ಮಾಹಿತಿ ಬೋರ್ಡ್
ಸಿಎಂ ಬದಲಾದರೂ ಬದಲಾಗದ ಮಾಹಿತಿ ಬೋರ್ಡ್
ಕರಾವಳಿ ಕಂಬಳಕ್ಕೆ 25 ಲಕ್ಷ ರೂ ಕೊಡಿ: ಸುನೀಲ್​ ಕುಮಾರ್ ಆಗ್ರಹ​
ಕರಾವಳಿ ಕಂಬಳಕ್ಕೆ 25 ಲಕ್ಷ ರೂ ಕೊಡಿ: ಸುನೀಲ್​ ಕುಮಾರ್ ಆಗ್ರಹ​