AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕರಾವಳಿ’ ಸಿನಿಮಾ ಹಾಡಿಗೆ ಹಿರಿಯ ಗಾಯಕಿ ಬಿ ಜಯಶ್ರೀ ಧ್ವನಿ

Karavali movie: ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಗಲಾಟೆ ನಡೆಸಿದ ಕಾರಣ ಸಖತ್ ಸುದ್ದಿ ಆಗಿತ್ತು. ಅದೇ ದಿನ ಬಿಡುಗಡೆ ಆದ ಟ್ರೈಲರ್ ಸಹ ಪ್ರೇಕ್ಷಕರ ಗಮನ ಸೆಳೆದಿತ್ತು. ಈಗಾಗಲೇ ಹಲವು ಒಳ್ಳೆಯ ಪ್ರತಿಭಾವಂತರು ಸಿನಿಮಾದ ಜೊತೆಗಿದ್ದಾರೆ. ಇದೀಗ ಆ ತಂಡಕ್ಕೆ ಮತ್ತೊಂದು ದೈತ್ಯ ಪ್ರತಿಭೆ ಸೇರ್ಪಡೆ ಆಗಿದೆ. ಅವರೇ ಬಿ ಜಯಶ್ರೀ. ಖ್ಯಾತ ಗಾಯಕಿ, ರಂಗಭೂಮಿ ಪ್ರವೀಣೆ, ನಟಿ ಜಯಶ್ರೀ ಅವರು ಇದೀಗ ‘ಕರಾವಳಿ’ ಸಿನಿಮಾಕ್ಕಾಗಿ ಹಾಡೊಂದನ್ನು ಹಾಡಿದ್ದಾರೆ.

‘ಕರಾವಳಿ’ ಸಿನಿಮಾ ಹಾಡಿಗೆ ಹಿರಿಯ ಗಾಯಕಿ ಬಿ ಜಯಶ್ರೀ ಧ್ವನಿ
Karavali Jayashree
ಮಂಜುನಾಥ ಸಿ.
|

Updated on:Jul 11, 2026 | 3:56 PM

Share

ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ‘ಕರಾವಳಿ’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಗಲಾಟೆ ನಡೆಸಿದ ಕಾರಣ ಸಖತ್ ಸುದ್ದಿ ಆಗಿತ್ತು. ಅದೇ ದಿನ ಬಿಡುಗಡೆ ಆದ ಟ್ರೈಲರ್ ಸಹ ಪ್ರೇಕ್ಷಕರ ಗಮನ ಸೆಳೆದಿತ್ತು. ಈಗಾಗಲೇ ಹಲವು ಒಳ್ಳೆಯ ಪ್ರತಿಭಾವಂತರು ಸಿನಿಮಾದ ಜೊತೆಗಿದ್ದಾರೆ. ಇದೀಗ ಆ ತಂಡಕ್ಕೆ ಮತ್ತೊಂದು ದೈತ್ಯ ಪ್ರತಿಭೆ ಸೇರ್ಪಡೆ ಆಗಿದೆ. ಅವರೇ ಬಿ ಜಯಶ್ರೀ. ಖ್ಯಾತ ಗಾಯಕಿ, ರಂಗಭೂಮಿ ಪ್ರವೀಣೆ, ನಟಿ ಜಯಶ್ರೀ ಅವರು ಇದೀಗ ‘ಕರಾವಳಿ’ ಸಿನಿಮಾಕ್ಕಾಗಿ ಹಾಡೊಂದನ್ನು ಹಾಡಿದ್ದಾರೆ.

ಈ ಹಿಂದೆ ಕೆಲವಾರು ಕನ್ನಡ ಸಿನಿಮಾಗಳನ್ನು ಹಾಡಿರುವ ಜಯಶ್ರೀ ಅವರು ಸಿನಿಮಾ ಗೀತೆಯೊಂದನ್ನು ಹಾಡಿ ಬಹಳ ವರ್ಷಗಳೇ ಆಗಿದ್ದವು. ಇದೀಗ ಹಲವು ವರ್ಷಗಳ ಬ್ರೇಕ್ ಬಳಿಕ ಜಯಶ್ರೀ ಅವರು ಮತ್ತೆ ಸಿನಿಮಾ ಹಾಡಿಗೆ ಧ್ವನಿ ನೀಡಿದ್ದಾರೆ ಅದೂ ‘ಕರಾವಳಿ’ ಸಿನಿಮಾ ಮೂಲಕ. ಜಯಶ್ರೀ ಅವರು ಸಿನಿಮಾಕ್ಕಾಗಿ ಹಾಡು ರೆಕಾರ್ಡ್ ಮಾಡುತ್ತಿರುವ ವಿಡಿಯೋ ಒಂದನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಆದರೆ ಹಾಡು ಯಾವುದೆಂಬ ಸುಳಿವು ವಿಡಿಯೋನಲ್ಲಿ ಇಲ್ಲ.

ಎಲ್ಲ ರೀತಿಯ ಹಾಡುಗಳನ್ನು ಲೀಲಾಜಾಲವಾಗಿ ಹಾಡಬಲ್ಲ ಜಯಶ್ರೀ ಅವರು ‘ಕರಾವಳಿ’ ಸಿನಿಮಾಕ್ಕೆ ಯಾವ ರೀತಿಯ ಹಾಡು ಹಾಡಿದ್ದಾರೆ ಎಂಬ ಕುತೂಹಲ ಇದೆ. ಸಚಿನ್ ಬಸ್ರೂರು ಸಂಯೋಜನೆ ಮಾಡಿರುವ ಹಾಡನ್ನು ಜಯಶ್ರೀ ಹಾಡಿದ್ದಾರೆ. ಹಾಡು ಈಗಾಗಲೇ ರೆಕಾರ್ಡ್ ಆಗಿದ್ದು, ಜಯಶ್ರೀ ಅವರು ಬಹಳ ಖುಷಿಯಿಂದಲೇ ಹಾಡು ಹಾಡಿದ್ದಾರೆ.

ಇದನ್ನೂ ಓದಿ:‘ಕರಾವಳಿ’ ಸಿನಿಮಾ ವಿವಾದ: ಪ್ರಜ್ವಲ್ ದೇವರಾಜ್ ಪರ ನಿಂತ ಮೇಘನಾ ರಾಜ್

ಕೆಲವು ಅತ್ಯುತ್ತಮ ಹಾಡುಗಳನ್ನು ಜಯಶ್ರೀ ಅವರು ಹಾಡಿದ್ದಾರೆ. ‘ಕಾರ್ ಕಾರ್’, ‘ಬೀಳ್ತಾವ್ ನೋಡೀಗ ಕವ್ವಾತಗಳು’, ‘ಚಕ್ಕೋತ ಬೇಕಿತ್ತ’, ‘ಬೋಂಡಾನ ಡುಮ್ಮಿನ’, ‘ರಂಬೆ ನಾ ವಯ್ಯಾರದ ರಂಬೆ’ ಇನ್ನೂ ಹಲವಾರು ಸೂಪರ್ ಹಿಟ್ ಕನ್ನಡ ಸಿನಿಮಾ ಹಾಡುಗಳಿಗೆ ಜಯಶ್ರೀ ಧ್ವನಿ ನೀಡಿದ್ದಾರೆ. ಆದರೆ ಕಳೆದ ಹಲವು ವರ್ಷಗಳಿಂದ ಜಯಶ್ರೀ ಅವರು ಕನ್ನಡ ಸಿನಿಮಾಗಳಿಗೆ ಹಾಡಿರಲಿಲ್ಲ. ರಂಗಗೀತೆಗಳಲ್ಲಿ ಮಾತ್ರವೇ ಅವರ ಧ್ವನಿ ಕೇಳುತ್ತಿತ್ತು. ಇದೀಗ ‘ಕರಾವಳಿ’ ಸಿನಿಮಾ ಮೂಲಕ ಅವರು ಮತ್ತೆ ಕನ್ನಡ ಸಿನಿಮಾ ಹಾಡುಗಳ ಹಾಡಲು ಮರಳಿದಂತಾಗಿದೆ.

ಈಗಾಗಲೇ ‘ಕರಾವಳಿ’ ಸಿನಿಮಾದ ಎರಡು ಹಾಡುಗಳು ಬಿಡುಗಡೆ ಆಗಿದ್ದು, ಎರಡೂ ಸಹ ಗಮನ ಸೆಳೆದಿವೆ. ‘ಕರಾವಳಿ’ ಸಿನಿಮಾಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಗಾಣಿಗ ಫಿಲ್ಮ್ಸ್‌ನಲ್ಲಿ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯರಾಗಿ ಸಂಪದಾ, ಸುಷ್ಮಿತಾ ಬಣ್ಣ ಹಚ್ಚಿದ್ದಾರೆ. ಇನ್ನು ಉಳಿದಂತೆ ಮಿತ್ರ, ರಮೇಶ್ ಇಂದಿರಾ, ಶ್ರೀಧರ್ ಸೇರಿದಂತೆ ಅನೇಕರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:36 pm, Sat, 11 July 26

Follow Us
ಖಾಸಗಿ ಕಂಪನಿ ಯಡವಟ್ಟಿಂದ ಪೈಪ್​ಲೈನ್ ಡ್ಯಾಮೇಜ್: ಕಾವೇರಿ ನೀರು ಕಲುಷಿತ
ಖಾಸಗಿ ಕಂಪನಿ ಯಡವಟ್ಟಿಂದ ಪೈಪ್​ಲೈನ್ ಡ್ಯಾಮೇಜ್: ಕಾವೇರಿ ನೀರು ಕಲುಷಿತ
ಶಿವಮೊಗ್ಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೇ ಲಕ್ಷಾಂತರ ರೂ. ವಂಚನೆ
ಶಿವಮೊಗ್ಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೇ ಲಕ್ಷಾಂತರ ರೂ. ವಂಚನೆ
ಟೊಮ್ಯಾಟೋ ಬೆಲೆ ಕುಸಿತ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಟೊಮ್ಯಾಟೋ ಬೆಲೆ ಕುಸಿತ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಆಕ್ಲೆಂಡ್​ನಲ್ಲಿ ‘ಮೋದಿ ಮೋದಿ’ ಘೋಷಣೆ: ಪ್ರಧಾನಿಯ ಸ್ವಾಗತಕ್ಕೆ ಜನಸಾಗರ
ಆಕ್ಲೆಂಡ್​ನಲ್ಲಿ ‘ಮೋದಿ ಮೋದಿ’ ಘೋಷಣೆ: ಪ್ರಧಾನಿಯ ಸ್ವಾಗತಕ್ಕೆ ಜನಸಾಗರ
ತಾಯಿ, ಅಜ್ಜಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ!
ತಾಯಿ, ಅಜ್ಜಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ!
40 ವರ್ಷಗಳಲ್ಲಿ ನ್ಯೂಜಿಲೆಂಡ್​ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ!
40 ವರ್ಷಗಳಲ್ಲಿ ನ್ಯೂಜಿಲೆಂಡ್​ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ!
ಕೆಪಿಎಸ್​ಸಿ ಚೀಫ್ ಶಿವಶಂಕರಪ್ಪ ಪುತ್ರಿ ವಿರುದ್ಧ FIR ದಾಖಲು!
ಕೆಪಿಎಸ್​ಸಿ ಚೀಫ್ ಶಿವಶಂಕರಪ್ಪ ಪುತ್ರಿ ವಿರುದ್ಧ FIR ದಾಖಲು!
ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಕೇರಳ ಸಿಎಂ ಸತೀಶನ್ ಭೇಟಿ
ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಕೇರಳ ಸಿಎಂ ಸತೀಶನ್ ಭೇಟಿ
ಇಂದು ಶನಿದೇವ, ಹನುಮಂತನನ್ನು ಆರಾಧಿಸಿದರೆ ಶುಭ
ಇಂದು ಶನಿದೇವ, ಹನುಮಂತನನ್ನು ಆರಾಧಿಸಿದರೆ ಶುಭ
ಲಂಚ ಕೊಡೋದಿಲ್ಲ ಹೇಳಿ; ಭ್ರಷ್ಟಾಚಾರದ ವಿರುದ್ಧ ಗುಡುಗಿದ ಸಿಎಂ ವಿಜಯ್
ಲಂಚ ಕೊಡೋದಿಲ್ಲ ಹೇಳಿ; ಭ್ರಷ್ಟಾಚಾರದ ವಿರುದ್ಧ ಗುಡುಗಿದ ಸಿಎಂ ವಿಜಯ್