Vairam Movie Teaser: ‘ವೈರಂ’ ಚಿತ್ರದ ಟೀಸರ್​ನಲ್ಲಿ ಗರುಡ ರಾಮ್​ ಎದುರು ದೇವರಾಜ್​ ಪುತ್ರ ಪ್ರಣಾಮ್​ ಅಬ್ಬರ

| Updated By: ಮದನ್​ ಕುಮಾರ್​

Updated on: Jan 10, 2023 | 5:23 PM

Pranam Devaraj | Garuda Ram: ಪ್ರಣಾಮ್ ದೇವರಾಜ್ ನಟನೆಯ ‘ವೈರಂ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಅವರ ಎದುರು ವಿಲನ್​ ಆಗಿ ‘ಕೆಜಿಎಫ್​’ ಖ್ಯಾತಿಯ ಗರುಡ ರಾಮ್​ ನಟಿಸಿದ್ದಾರೆ.

Vairam Movie Teaser: ‘ವೈರಂ’ ಚಿತ್ರದ ಟೀಸರ್​ನಲ್ಲಿ ಗರುಡ ರಾಮ್​ ಎದುರು ದೇವರಾಜ್​ ಪುತ್ರ ಪ್ರಣಾಮ್​ ಅಬ್ಬರ
‘ವೈರಂ’ ಸಿನಿಮಾ ತಂಡ
Follow us on

ಕನ್ನಡ ಚಿತ್ರರಂಗದ ಅನುಭವಿ ನಟ ದೇವರಾಜ್ ಅವರ ಮಕ್ಕಳು ಚಿತ್ರರಂಗದಲ್ಲಿ ಸಕ್ರಿಯಾಗಿದ್ದಾರೆ. ದೇವರಾಜ್​ ಅವರ ಎರಡನೇ ಪುತ್ರ ಪ್ರಣಾಮ್ ದೇವರಾಜ್ (Pranam Devaraj) ಕೂಡ ಹೀರೋ ಆಗಿ ಜನರಿಗೆ ಪರಿಚಿತರಾಗಿದ್ದಾರೆ. ಅವರು ನಟಿಸಿರುವ 2ನೇ ಸಿನಿಮಾದ ಟೀಸರ್ ಈಗ ಬಿಡುಗಡೆ ಆಗಿದೆ. ‘ವೈರಂ’ (Vairam Movie) ಶೀರ್ಷಿಕೆಯ ಈ ಚಿತ್ರದ ಟೀಸರ್ ರಿಲೀಸ್​ ಸಮಾರಂಭದಲ್ಲಿ ದೇವರಾಜ್, ಚಂದ್ರಕಲಾ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಹಾಜರಿದ್ದರು. ಮಗನ ಸಿನಿಮಾಗೆ ‘ಡೈನಾಮಿಕ್​ ಸ್ಟಾರ್​’ ಶುಭ ಹಾರೈಸಿದ್ದಾರೆ. ‘ಕನ್ನಡ ಚಿತ್ರರಂಗ ಈಗ ಬ್ಯುಸಿಯಾಗಿದೆ. ಇಂತಹ ಸಮಯದಲ್ಲಿ ನನ್ನ ಮಗನ 2ನೇ ಚಿತ್ರ ಬರುತ್ತಿದೆ. ನಿರ್ದೇಶಕ ಸಾಯಿಶಿವನ್ ಒಳ್ಳೆಯ ಸಿನಿಮಾ ಮಾಡಿದ್ದಾರೆ. ಈ ಸಿನಿಮಾದ ಹಾಡುಗಳನ್ನು ಕೇಳಿದ್ದೇನೆ, ತುಂಬಾ ಚೆನ್ನಾಗಿವೆ. ಈ ಚಿತ್ರ ಶತದಿನೋತ್ಸವ ಆಚರಿಸಲಿ’ ಎಂದು ದೇವರಾಜ್​ (Dynamic Hero Devaraj) ಶುಭ ಕೋರಿದ್ದಾರೆ.

ಮೊದಲ ಸಿನಿಮಾದಲ್ಲಿ ಚಾಕೊಲೇಟ್​ ಬಾಯ್​ ಆಗಿದ್ದ ಪ್ರಣಾಮ್​ ದೇವರಾಜ್​ ಅವರು ಈಗ 2ನೇ ಸಿನಿಮಾದಲ್ಲಿ ಆ್ಯಕ್ಷನ್​ ಹೀರೋ ಆಗಿದ್ದಾರೆ. ತಮ್ಮ ಸಿನಿಮಾ ಬಗ್ಗೆ ಅವರು ಮಾತನಾಡಿದ್ದಾರೆ. ‘ಚಿಕ್ಕ ವಯಸ್ಸಿನಿಂದ ಅಪ್ಪ ಹಾಗೂ ಅಣ್ಣನ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. 4 ವರ್ಷಗಳ ನಂತರ ಈ ಸ್ಟೇಜ್ ಮೇಲೆ ನಿಂತು ಮಾತನಾಡುತ್ತಿದ್ದೇನೆ. ನಿರ್ದೇಶಕ ಸಾಯಿ ಶಿವನ್ ಅವರಲ್ಲಿ ತುಂಬಾ ಆತ್ಮ ವಿಶ್ವಾಸ ಇದೆ. ನಿರ್ಮಾಪಕ ಮಲ್ಲಿಕಾರ್ಜುನ ಹಾಗೂ ವೇಮಾರೆಡ್ಡಿ ಅವರು ನನಗೆ ತುಂಬಾ ಬೆಂಬಲ ನೀಡಿದ್ದಾರೆ’ ಎಂದಿದ್ದಾರೆ ಪ್ರಣಾಮ್​.

ಇದನ್ನೂ ಓದಿ: Prajwal Devaraj: ಟೈಮ್​ ಲೂಪ್​ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​; ‘ಮಮ್ಮಿ’ ಖ್ಯಾತಿಯ ಲೋಹಿತ್​ ನಿರ್ದೇಶನ

ಇದನ್ನೂ ಓದಿ
Prajwal Devaraj: ಟೈಮ್​ ಲೂಪ್​ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​; ‘ಮಮ್ಮಿ’ ಖ್ಯಾತಿಯ ಲೋಹಿತ್​ ನಿರ್ದೇಶನ
Prajwal Devaraj: ‘ಅಬ್ಬರ’ ಸಿನಿಮಾ; ನಿಮಿಕಾ ರತ್ನಾಕರ್​ ಜೊತೆ ಪ್ರಜ್ವಲ್​ ದೇವರಾಜ್​ಗೆ ಟಪೋರಿ ಪಾತ್ರ
Meghana Raj: ಮೇಘನಾ ರಾಜ್​ ಕಮ್​ಬ್ಯಾಕ್​ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​; ಅಭಿಮಾನಿಗಳು ಫುಲ್​ ಖುಷ್​
ದೇವರಾಜ್​-ಉಮಾಶ್ರೀ ಜೋಡಿಯ ‘ಮಾನ’ ಚಿತ್ರದ ಹಿಂದಿದೆ ಹಲವು ಇಂಟರೆಸ್ಟಿಂಗ್​ ಕಹಾನಿ

‘ಕ್ಯಾಮೆರಾ ಕೆಲಸವೂ ಅದ್ಭುತವಾಗಿದೆ. ನಾನು ಇಷ್ಟು ಚೆನ್ನಾಗಿ ತೆರೆಮೇಲೆ ಕಾಣಿಸಲು ಅವರೇ ಕಾರಣ. ಒಬ್ಬ ಹೀರೋ ಗುರುತಿಸಿಕೊಳ್ಳೋದು ಅವನೆದುರು ಸ್ಟ್ರಾಂಗ್ ವಿಲನ್ ಇದ್ದಾಗ. ನನಗೆ ಎರಡನೇ ಚಿತ್ರದಲ್ಲೇ ಗರುಡ ರಾಮ್ ಅವರಂತಹ ಖಳನಟರ ಎದುರು ಅಭಿನಯಿಸುವ ಅವಕಾಶ ಸಿಕ್ತು. ಶಂಕರ್ ಅಶ್ವಥ್ ಹಾಗೂ ವೀಣಾ ಸುಂದರ್ ನನ್ನ ತಂದೆ-ತಾಯಿ ಪಾತ್ರ ಮಾಡಿದ್ದಾರೆ’ ಎಂದು ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ ಪ್ರಣಾಮ್​.

ಇದನ್ನೂ ಓದಿ: ದೇವರಾಜ್​-ಉಮಾಶ್ರೀ ಜೋಡಿಯ ‘ಮಾನ’ ಚಿತ್ರದ ಹಿಂದಿದೆ ಹಲವು ಇಂಟರೆಸ್ಟಿಂಗ್​ ಕಹಾನಿ

ಈ ಚಿತ್ರದಲ್ಲಿ 4 ಹಾಡುಗಳಿವೆ. ಕವಿರಾಜ್, ನಾಗೇಂದ್ರ ಪ್ರಸಾದ್, ರಾಮ್ ನಾರಾಯಣ್ ಸಾಹಿತ್ಯ ಬರೆದಿದ್ದಾರೆ. ಚಿತ್ರದ ನಾಯಕಿ ಮೋನಾಲ್ ಅವರಿಗೆ ಇದು ಮೊದಲ ಕನ್ನಡ ಸಿನಿಮಾ. ಇದರಲ್ಲಿ ಕ್ರಿಶ್ಚಿಯನ್ ಹುಡುಗಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ‘ಚಿತ್ರದಲ್ಲಿ ಪ್ರೇಕ್ಷಕರಿಗೆ ಒಂದು ಯೂನಿವರ್ಸಲ್ ಮೆಸೇಜ್ ಇದೆ. ಜನ ಬದಲಾಗಬೇಕು ಎಂದು ಹೇಳಲಾಗಿದೆ. ಜನ ಸಪೋರ್ಟ್ ಮಾಡುತ್ತಾರೆ ಎಂಬ ನಂಬಿಕೆ ನಮಗೆ ಇದೆ’ ಎಂಬುದು ಖಳನಟ ಗರುಡ ರಾಮ್ ಮಾತು.

ಗೋಪಿನಾಥ್ ಅವರ ಛಾಯಾಗ್ರಹಣ ಹಾಗೂ ಮಹತಿ ಸ್ವರ ಸಾಗರ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಪ್ರಣಾಮ್​ ಅವರ ಬಗ್ಗೆ ನಿರ್ದೇಶಕರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ‘ಪ್ರಣಾಮ್​ ಅವರ ಡೆಡಿಕೇಶನ್, ಪಾಲ್ಗೊಳ್ಳುವಿಕೆ ತುಂಬಾ ಚೆನ್ನಾಗಿತ್ತು. ಅವರು ಸಿಂಗಲ್ ಟೇಕ್ ಆರ್ಟಿಸ್ಟ್’ ಎಂದು ಸಾಯಿ ಶಿವನ್ ಹೊಗಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.