ಫೆ.9ಕ್ಕೆ ಚಿತ್ರಮಂದಿರದಲ್ಲಿ ‘ಪ್ರಯಣಂ’; ಟ್ರೇಲರ್​ ಮೂಲಕ ಝಲಕ್​ ತೋರಿಸಿದ ಚಿತ್ರತಂಡ

‘ಪ್ರಯಣಂ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ರಾಜವರ್ಧನ್, ನೈನಾ ಗಂಗೂಲಿ ಜೊತೆ ಗೋವಿಂದೇಗೌಡ, ಸಮೀಕ್ಷಾ, ಮಂಥನಾ, ಪ್ರಶಾಂತ್, ಪ್ರಿಯಾ ತರುಣ್ ಮುಂತಾದವರು ಅಭಿನಯಿಸಿದ್ದಾರೆ. ಎಸ್. ದತ್ತಾತ್ರೇಯ ಅವರು ಚಿತ್ರಕಥೆ ಬರೆದು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಪರಮೇಶ್ ಬಂಡವಾಳ ಹೂಡಿದ್ದಾರೆ.

ಫೆ.9ಕ್ಕೆ ಚಿತ್ರಮಂದಿರದಲ್ಲಿ ‘ಪ್ರಯಣಂ’; ಟ್ರೇಲರ್​ ಮೂಲಕ ಝಲಕ್​ ತೋರಿಸಿದ ಚಿತ್ರತಂಡ
‘ಪ್ರಯಣಂ’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭ
Follow us
ಮದನ್​ ಕುಮಾರ್​
|

Updated on: Jan 20, 2024 | 5:02 PM

2024ರ ಆರಂಭದಲ್ಲಿ ಕನ್ನಡದ ಅನೇಕ ಸಿನಿಮಾಗಳು ಸಾಲು ಸಾಲಾಗಿ ಬಿಡುಗಡೆ ಆಗುತ್ತಿವೆ. ಫೆಬ್ರವರಿ 9ರಂದು ‘ಪ್ರಯಣಂ’ ಸಿನಿಮಾ (Pranayam Movie) ತೆರೆಕಾಣಲಿದೆ. ಈ ಸಿನಿಮಾದಲ್ಲಿ ‘ಬಿಚ್ಚುಗತ್ತಿ’ ಖ್ಯಾತಿಯ ನಟ ರಾಜವರ್ಧನ್ (Rajavardan) ಹಾಗೂ ನೈನಾ ಗಂಗೂಲಿ ಅವರು ಜೋಡಿಯಾಗಿ ನಟಿಸಿದ್ದಾರೆ. ‘ಪಲ್ಲಕ್ಕಿ’, ‘ಗಣಪ’, ‘ಪಾರಿಜಾತ’, ‘ಕರಿಯ 2’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಪರಮೇಶ್ (Paramesh) ಅವರು ಈಗ ‘ಪ್ರಯಣಂ’ ಸಿನಿಮಾ ಮಾಡಿದ್ದಾರೆ. ಇದರಲ್ಲಿ ಒಂದು ಗಾಢವಾದ ಪ್ರೇಮಕಥೆ ಇರಲಿದೆ. ಅದರ ಝಲಕ್​ ಹೇಗಿರಲಿದೆ ಎಂಬುದನ್ನು ತಿಳಿಸಲು ಇತ್ತೀಚೆಗೆ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಎಸ್. ದತ್ತಾತ್ರೇಯ ಅವರು ಚಿತ್ರಕಥೆ ಬರೆದು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಮನಸ್ವಿ ವೆಂಚರ್ಸ್’ ಹಾಗೂ ‘ಪಿಟು ಪ್ರೊಡಕ್ಷನ್ಸ್’ ಮೂಲಕ ‘ಪ್ರಯಣಂ’ ನಿರ್ಮಾಣ ಆಗಿದೆ.

ಮಾಜಿ ಉಪ ಮೇಯರ್ ಮೋಹನ್ ರಾಜು ಅವರು ‘ಪ್ರಯಣಂ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಯಂತ್ ಕಾಯ್ಕಿಣಿ , ಮನೋಮೂರ್ತಿ ಮುಂತಾದವರು ಭಾಗಿ ಆಗಿದ್ದರು. ಈ ಸಿನಿಮಾಗೆ ಮನೋಮೂರ್ತಿ ಸಂಗೀತ ನೀಡಿದ್ದು, 3 ಹಾಡುಗಳಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಈ ಸಿನಿಮಾದಲ್ಲಿ ಒಟ್ಟು 5 ಹಾಡುಗಳು ಇವೆ. ವಿ. ನಾಗೇಶ್ ಆಚಾರ್ಯ ಅವರು ಛಾಯಾಗ್ರಹಣ ಮಾಡಿದ್ದಾರೆ.

ನಿರ್ಮಾಪಕ ಪರಮೇಶ್​ ಅವರಿಗೆ ಇರುವ ಸಿನಿಮಾ ಪ್ರೀತಿಯನ್ನು ಜಯಂತ ಕಾಯ್ಕಿಣಿ ಹೊಗಳಿದ್ದಾರೆ. ‘ಅವರು ತುಂಬಾ ಜೋಷ್ ಇರುವ ನಿರ್ಮಾಪಕ. ಸಿನಿಮಾಗಾಗಿ ಬಹಳ ಕಷ್ಟಪಡುತ್ತಾರೆ. ಈ ಮೊದಲು ಪರಮೇಶ್ ಅವರ ಕರಿಯ 2, ಗಣಪ, ಪಾರಿಜಾತ ಚಿತ್ರಗಳಿಗೂ ನಾನೇ ಹಾಡು ಬರೆದಿದ್ದೆ’ ಎಂದಿದ್ದಾರೆ ಜಯಂತ ಕಾಯ್ಕಿಣಿ. ಮಡಿಕೇರಿಯಲ್ಲಿ ಈ ಸಿನಿಮಾದ ಶೂಟಿಂಗ್​ ಮಾಡಲಾಗಿದೆ. ಜನರಿಗೆ ಈ ಸಿನಿಮಾ ಇಷ್ಟ ಆಗಲಿದೆ ಎಂಬ ಭರವಸೆ ಚಿತ್ರತಂಡಕ್ಕಿದೆ.

ರಾಜವರ್ಧನ್ ಅವರು ‘ಬಿಚ್ಚುಗತ್ತಿ’ ಸಿನಿಮಾ ಮಾಡುವುದಕ್ಕೂ ಮೊದಲೇ ಪರಮೇಶ್ ಅವರು ಈ ಕಥೆ ಹೇಳಿದ್ದರಂತೆ. ಈಗ ಬಿಡುಗಡೆ ಹಂತಕ್ಕೆ ಬಂದಿದೆ. ‘ಇಂದು ಕುಟುಂಬಗಳಲ್ಲಿ ಇಂಥ ಘಟನೆಗಳು ನಡೆಯುತ್ತಿವೆ. ಆ ರೀತಿಯ ಒಂದು ಗಟ್ಟಿ ಕಥಾಹಂದರ ಇಟ್ಟುಕೊಂಡು ನಾವು ಈ ಸಿನಿಮಾ ಮಾಡಿದ್ದೇವೆ. ಬಿ ಮತ್ತು ಸಿ ಸೆಂಟರ್ ಪ್ರೇಕ್ಷಕರಿಗೆ ಬೇಕಾದ ಕಾನ್ಸೆಪ್ಟ್ ಈ ಸಿನಿಮಾದಲ್ಲಿದೆ’ ಎಂದು ರಾಜವರ್ಧನ್​ ಹೇಳಿದ್ದಾರೆ.

ಇದನ್ನೂ ಓದಿ: ಸಂಜನಾ ಗಲ್ರಾನಿ ಜೊತೆ ಡ್ಯಾನ್ಸ್ ಮಾಡುತ್ತಿರುವ ಈ ಸುಂದರಾಂಗ ಯಾರು ಗೊತ್ತಾಯ್ತ?

ಈವರೆಗೂ 9 ಸಿನಿಮಾ ಮಾಡಿರುವ ಅನುಭವ ಹೊಂದಿರುವ ನಿರ್ಮಾಪಕ ಪರಮೇಶ್ ಅವರು ‘ಪ್ರಯಣಂ’ ಸಿನಿಮಾವನ್ನು ಕಷ್ಟಪಟ್ಟು ಬಿಡುಗಡೆ ಮಾಡುತ್ತಿದ್ದಾರೆ. ‘ಗಾಂಧಿನಗರದಲ್ಲಿ ನಿರ್ಮಾಪಕರಿಗೆ ನೆಲೆ ಇಲ್ಲದಾಗಿದೆ. ಹೇಗೋ ಸಿನಿಮಾ ಮಾಡಿಬಿಡಬಹುದು. ಆದರೆ ರಿಲೀಸ್ ಮಾಡೋದು ಕಷ್ಟ. ಬಿಡುಗಡೆಗೆ 2 ಕೋಟಿ ರೂಪಾಯಿ ಬೇಕಾಗುತ್ತದೆ. ಜನರು ಕೈ ಹಿಡಿಯುತ್ತಾರೆ ಎಂಬ ನಂಬಿಕೆಯಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಕಾಮಿಡಿ ಕಿಲಾಡಿಗಳು’ ನಟ ಸೀರುಂಡೆ ರಘು ಹೀರೋ ಆಗಿರುವ ‘ರಣಾಕ್ಷ’ ಚಿತ್ರದ ಆಡಿಯೋ ಬಿಡುಗಡೆ

ರಾಜವರ್ಧನ್, ನೈನಾ ಗಂಗೂಲಿ ಜೊತೆ ಗೋವಿಂದೇಗೌಡ, ಸಮೀಕ್ಷಾ, ಮಂಥನಾ, ಪ್ರಶಾಂತ್, ಪ್ರಿಯಾ ತರುಣ್ ಮುಂತಾದವರು ಅಭಿನಯಿಸಿದ್ದಾರೆ. ಮದನ್ ಹರಿಣಿ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಮಾಸ್ ಮಾದ ಅವರ ಸಾಹಸ ನಿರ್ದೇಶನ ಮಾಡಿದ್ದಾರೆ. ‘ಝಂಕಾರ್ ಮ್ಯೂಸಿಕ್’ ಮೂಲಕ ಹಾಡುಗಳು ಬಿಡುಗಡೆ ಆಗಿವೆ. ಕುನಾಲ್ ಗಾಂಜಾವಾಲ, ಶ್ರೇಯಾ ಘೋಷಾಲ್ ಮುಂತಾದವರು ಧ್ವನಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವೃದ್ಧೆಯನ್ನು ದರದರನೆ ಎಳೆದುಕೊಂಡು ಹೋಗಿ ಕಚ್ಚಿ ಕೊಂದ 7 ಬೀದಿ ನಾಯಿಗಳು
ವೃದ್ಧೆಯನ್ನು ದರದರನೆ ಎಳೆದುಕೊಂಡು ಹೋಗಿ ಕಚ್ಚಿ ಕೊಂದ 7 ಬೀದಿ ನಾಯಿಗಳು
ಚೊಚ್ಚಲ ಏಕದಿನ ಶತಕ ಸಿಡಿಸಿದ ಹರ್ಲೀನ್ ಡಿಯೋಲ್
ಚೊಚ್ಚಲ ಏಕದಿನ ಶತಕ ಸಿಡಿಸಿದ ಹರ್ಲೀನ್ ಡಿಯೋಲ್
2 ಸಮುದಾಯಗಳ ನಡುವೆ ಭೂಪಾಲ್​ನಲ್ಲಿ ಹಿಂಸಾತ್ಮಕ ಘರ್ಷಣೆ; 6 ಜನರಿಗೆ ಗಾಯ
2 ಸಮುದಾಯಗಳ ನಡುವೆ ಭೂಪಾಲ್​ನಲ್ಲಿ ಹಿಂಸಾತ್ಮಕ ಘರ್ಷಣೆ; 6 ಜನರಿಗೆ ಗಾಯ
ವಿನೋದ್ ಕಾಂಬ್ಳಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ಘೋಷಿಸಿದ ಆಸ್ಪತ್ರೆ..!
ವಿನೋದ್ ಕಾಂಬ್ಳಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ಘೋಷಿಸಿದ ಆಸ್ಪತ್ರೆ..!
ಕಲಬುರಗಿ ಬಂದ್​: ಕಿಡಿಗೇಡಿಗಳಿಂದ ಗೂಂಡಾ ವರ್ತನೆ; ಬೈಕ್ ಜಖಂ
ಕಲಬುರಗಿ ಬಂದ್​: ಕಿಡಿಗೇಡಿಗಳಿಂದ ಗೂಂಡಾ ವರ್ತನೆ; ಬೈಕ್ ಜಖಂ
ಬೀದರ್‌ನ ಜಾನುವಾರು ಸಂಶೋಧನೆ ಕೇಂದ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ
ಬೀದರ್‌ನ ಜಾನುವಾರು ಸಂಶೋಧನೆ ಕೇಂದ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ
ಅಶ್ಲೀಲ ಪದ ಬಳಕೆ ವಿಚಾರ: CT ರವಿ ಧರ್ಮಸ್ಥಳದಲ್ಲಿ ಪ್ರಮಾಣ ಮಾಡ್ಲಿ: ಲಕ್ಷ್ಮೀ
ಅಶ್ಲೀಲ ಪದ ಬಳಕೆ ವಿಚಾರ: CT ರವಿ ಧರ್ಮಸ್ಥಳದಲ್ಲಿ ಪ್ರಮಾಣ ಮಾಡ್ಲಿ: ಲಕ್ಷ್ಮೀ
ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ: ಅಭಿಮಾನಿಗಳಿಂದ ವಿಶೇಷ ಪೂಜೆ
ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ: ಅಭಿಮಾನಿಗಳಿಂದ ವಿಶೇಷ ಪೂಜೆ
22 ಫೋರ್, 11 ಸಿಕ್ಸ್: ಕೇವಲ 3 ರನ್​ಗಳಿಂದ ದ್ವಿಶತಕ ಮಿಸ್..!
22 ಫೋರ್, 11 ಸಿಕ್ಸ್: ಕೇವಲ 3 ರನ್​ಗಳಿಂದ ದ್ವಿಶತಕ ಮಿಸ್..!
ಅಮಿತ್​ ಶಾ ಹೇಳಿಕೆ ಖಂಡಿಸಿ ಗದಗ-ಬೆಟಗೇರಿ ಬಂದ್​: ಶಾಲಾ-ಕಾಲೇಜುಗಳಿಗೆ ರಜೆ
ಅಮಿತ್​ ಶಾ ಹೇಳಿಕೆ ಖಂಡಿಸಿ ಗದಗ-ಬೆಟಗೇರಿ ಬಂದ್​: ಶಾಲಾ-ಕಾಲೇಜುಗಳಿಗೆ ರಜೆ