ಬಾತ್​ ಟಬ್​ನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ಹಂಚಿಕೊಂಡ ನಟಿ ಪ್ರಣಿತಾ ಸುಭಾಷ್

|

Updated on: Jun 01, 2024 | 11:52 AM

ಮೇ 30 ಪ್ರಣಿತಾ ಹಾಗೂ ಅವರ ಪತಿ ನಿತೀನ್ ರಾಜು ಅವರ ವಿವಾಹ ವಾರ್ಷಿಕೋತ್ಸವ. ಇದರ ಜೊತೆಗೆ ಥೈಲ್ಯಾಂಡ್​ನಲ್ಲಿ ಜಾಹೀರಾತಿನ ಶೂಟ್ ಕೂಡ ಇದೆ. ಈ ಎಲ್ಲಾ ಕಾರಣದಿಂದ ಪತಿ ನಿತೀನ್ ರಾಜು ಜೊತೆ ಅವರು ಥೈಲ್ಯಾಂಡ್ ತೆರಳಿದ್ದಾರೆ. ಈ ವಿಡಿಯೋ ಹಂಚಿಕೊಂಡಿದ್ದಾರೆ.

ಬಾತ್​ ಟಬ್​ನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ಹಂಚಿಕೊಂಡ ನಟಿ ಪ್ರಣಿತಾ ಸುಭಾಷ್
ಪ್ರಣಿತಾ
Follow us on

ನಟಿ ಪ್ರಣಿತಾ ಸುಭಾಷ್ (Pranitha Subhash) ಅವರ ಸಂಪೂರ್ಣ ಗಮನ ಕುಟುಂಬದ ಮೇಲಿದೆ. ಅವರು ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಈಗ ಅವರು ಹಂಚಿಕೊಂಡಿರೋ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಪ್ರಣಿತಾ ಸುಭಾಷ್ ಹಂಚಿಕೊಂಡಿರೋ ವಿಡಿಯೋ ಏನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮೇ 30 ಪ್ರಣಿತಾ ಹಾಗೂ ಅವರ ಪತಿ ನಿತೀನ್ ರಾಜು ಅವರ ವಿವಾಹ ವಾರ್ಷಿಕೋತ್ಸವ. ಇದರ ಜೊತೆಗೆ ಥೈಲ್ಯಾಂಡ್​ನಲ್ಲಿ ಜಾಹೀರಾತಿನ ಶೂಟ್ ಕೂಡ ಇದೆ. ಈ ಎಲ್ಲಾ ಕಾರಣದಿಂದ ಪತಿ ನಿತೀನ್ ರಾಜು ಜೊತೆ ಅವರು ಥೈಲ್ಯಾಂಡ್ ತೆರಳಿದ್ದಾರೆ. ಅಲ್ಲಿ ಅವರು ಬಾತ್​ ಟಬ್​ನಲ್ಲಿ ಸ್ನಾನ ಮಾಡುತ್ತಿದ್ದಾರೆ. ಈ ವಿಡಿಯೋನ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬಹುಭಾಷಾ ನಟಿ ಪ್ರಣಿತಾ ಸುಭಾಷ್​ ಹೊಸ ಫೋಟೋಗಳು ವೈರಲ್​

ಬಾತ್ ಟಬ್​ನಲ್ಲಿ ನೊರೆಗಳ ಮಧ್ಯೆ ಮುಳುಗಿರುವ ವಿಡಿಯೋನ ಪ್ರಣಿತಾ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಎಂದಿನಂತೆ ಈ ವಿಡಿಯೋಗೆ ನೆಗೆಟಿವ್ ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಣಿತಾ ಸುಭಾಷ್ ನಟನೆಯ ‘ರಾಮನ ಅವತಾರ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ರಿಷಿ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಊರಿಗೆ ಒಳ್ಳೆಯದನ್ನು ಮಾಡಬೇಕು ಎಂದಿದ್ದ ವ್ಯಕ್ತಿ ಊರನ್ನೇ ಬಿಟ್ಟು ಹೋಗೋ ಪರಿಸ್ಥಿತಿ ಬರುತ್ತದೆ. ಆಗ ಸೀತಾಳ (ಪ್ರಣಿತಾ) ಭೇಟಿ ಆಗುತ್ತದೆ. ನಂತರ ಸಿನಿಮಾ ಕ್ರೈಮ್ ಕಡೆ ತಿರುಗುತ್ತದೆ. ಈ ರೀತಿಯಲ್ಲಿ ಚಿತ್ರದ ಕಥೆ ಮೂಡಿ ಬಂದಿದೆ. ಈ ಚಿತ್ರ ಮೊದಲೇ ಸೆಟ್ಟೇರಿತ್ತು. ಕಾರಣಾಂತರಗಳಿಂದ ಸಿನಿಮಾದ ರಿಲೀಸ್ ವಿಳಂಬ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.