ಡಿ ಬಾಸ್ ಎಂದು ಕೂಗಿದವರಿಗೆ ಖಡಕ್ ತಿರುಗೇಟು ನೀಡಿದ ಪ್ರಥಮ್
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾಗ ನಟ ಪ್ರಥಮ್ ಅವರನ್ನು ದರ್ಶನ್ ಫ್ಯಾನ್ಸ್ ಕೆಣಕಿದ್ದಾರೆ. ಆಗ ಪ್ರಥಮ್ ಖಡಕ್ ತಿರುಗೇಟು ನೀಡಿ ಎಲ್ಲರನ್ನೂ ಸೈಲೆಂಟ್ ಆಗಿಸಿದರು. ‘ಯಾವ ಸ್ಟಾರ್ ನಟನಿಗೂ ಬಾಸ್ ಎನ್ನಬೇಡಿ. ನಿಮ್ಮ ತಂದೆ-ತಾಯಿಯೇ ನಿಮಗೆ ಬಾಸ್’ ಎಂದು ಪ್ರಥಮ್ ಅವರು ಹೇಳಿದ್ದಾರೆ.

ನಟ ಪ್ರಥಮ್ ಅವರನ್ನು ದರ್ಶನ್ ಅಭಿಮಾನಿಗಳು ಆಗಾಗ ಟಾರ್ಗೆಟ್ ಮಾಡುತ್ತಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆದಾಗ ಪ್ರಥಮ್ ನೀಡಿದ್ದ ಒಂದು ಹೇಳಿಕೆಯಿಂದ ಇಷ್ಟೆಲ್ಲ ಕಿರಿಕ್ ಶುರುವಾಯಿತು. ಅದು ಈಗಲೂ ಮುಂದುವರಿದಿದೆ. ಡಾಲಿ ಧನಂಜಯ ಅವರ ರಿಸೆಪ್ಷನ್ಗೆ ಪ್ರಥಮ್ ಹಾಜರಾಗಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾಗ ದರ್ಶನ್ ಅಭಿಮಾನಿಗಳು ‘ಜೈ ಡಿ ಬಾಸ್..’ ಎಂದು ಕೂಗಿದ್ದಾರೆ. ಆಗ ಪ್ರಥಮ್ ಅವರು ಅದನ್ನು ಖಂಡಿಸಿದ್ದಾರೆ. ಅಂತಹ ಅಭಿಮಾನಿಗಳಿಗೆ ಅವರು ಖಡಕ್ ಆಗಿ ತಿರುಗೇಟು ನೀಡಿದ್ದಾರೆ.
‘ಅಣ್ಣ.. ಒಂದು ನಿಮಿಷ ಕೇಳಿಸಿಕೋ. ನನಗೆ ನೀನು ಬಾಸ್’ ಎಂದು ಪ್ರಥಮ್ ಮಾತನಾಡಲು ಶುರು ಮಾಡಿದರು. ಆದರೆ ‘ಡಿ ಬಾಸ್’ ಎಂದು ಕೂಗಿದ್ದವರು ಮುಖ ಕೊಟ್ಟು ಮಾತನಾಡಲಿಲ್ಲ. ‘ನೋಡು.. ಮುಖ ತೋರಿಸೋಕೆ ಅವನಿಗೆ ಯೋಗ್ಯತೆ ಇಲ್ಲ. ನನಗೆ ಅವನೇ ಬಾಸ್. ಅವರ ಅಪ್ಪ-ಅಮ್ಮ ಅವನಿಗೆ ಬಾಸ್ ಆಗಬೇಕು. ಯಾವನೋ ಪೆದ್ದ ಇಲ್ಲಿಗೆ ಬಂದಿದ್ದಾನೆ. ಕ್ವಾಟರ್ ಹಾಗಿದ್ದಾನೆ. ಮರೆತುಬಿಡಿ’ ಎಂದರು ಪ್ರಥಮ್.
‘ನಾವೆಲ್ಲ ಕನ್ನಡಿಗರು. ಕರ್ನಾಟಕದಲ್ಲಿ ಯಾವಾಗಲೂ ಕನ್ನಡಿಗರೇ ಬಾಸ್. ನೀವೆಲ್ಲರೂ ನನಗೆ ಬಾಸ್. ನೀವು ಸಿನಿಮಾ ನೋಡಿದರೆ ನಾನು ನಟ. ನಿಮಗೆ ನಿಮ್ಮ ಅಪ್ಪ-ಅಮ್ಮ ಬಾಸ್. ಇಲ್ಲಿ ಯಾವ ಮಗನಿಗೆ ನಿಮ್ಮ ಅಪ್ಪ-ಅಮ್ಮ ಬಾಸ್ ಅಲ್ಲವೋ ಅಂಥವರು ಮುಂದೆ ಬನ್ನಿ. ಯಾರಿದ್ದೀರಿ? ಎಲ್ಲರದ್ದೂ ಅದೇ ಪ್ರೀತಿ ಹಂಗೆ ಇರಬೇಕು. ಕರ್ನಾಟಕದಲ್ಲಿ ಕನ್ನಡವೇ ಬಾಸ್’ ಎಂದು ಪ್ರಥಮ್ ಹೇಳಿದರು.
ಇದನ್ನೂ ಓದಿ: ದರ್ಶನ್ ಹುಟ್ಟುಹಬ್ಬ, ಕಾಮನ್ ಡಿಪಿ ಬಿಡುಗಡೆ ಮಾಡಿದ ಪತ್ನಿ ವಿಜಯಲಕ್ಷ್ಮಿ
‘ನೀವೆಲ್ಲ ಕನ್ನಡಿಗರಾಗಿದ್ದರೆ ನೀವೆಲ್ಲ ನನಗೆ ಬಾಸ್. ಇಲ್ಲಿ ಯಾರಾದರೂ ಬೆರಕೆಗಳು ಇದ್ದರೆ ಅವರೆಲ್ಲ ನನಗೆ ಬಾಸ್ ಅಲ್ಲ. ಅಪ್ಪ-ಅಮ್ಮನಿಗೆ ಹೊರತುಪಡಿಸಿ ಬೇರೆ ಯಾರಿಗೂ ಬಾಸ್ ಎನ್ನಬೇಡಿ. ನಾನು ಹೇಳುವುದು ಸಾವಿರಕ್ಕೊಂದು, ಕೋಟಿಗೊಂದು ಮಾತು, ಕೇಳಿಸಿಕೊಳ್ಳಿ. ಕಲಾವಿದರು ಬಂದರೆ ತಲೆ ಮೇಲೆ ಕೂರಿಸಿಕೊಳ್ಳಬೇಡಿ. ನಾವೆಲ್ಲ ಸೊನ್ನೆಯಿಂದ ಬಂದಿರುತ್ತೀವಿ. ನೀವು ನೋಡಿದರೆ ಮಾತ್ರ ನಮಗೆ ಮರ್ಯಾದೆ ಸಿಗುವುದು. ನಿಮ್ಮಿಂದ ನಾವು ಅನ್ನ ತಿಂತೀವಿ. ಯಾವ ಸ್ಟಾರ್ ನಟನನ್ನೂ ದೇವರು ಮಾಡಬೇಡಿ. ಇದನ್ನು ತಲೆಯಲ್ಲಿ ಇಟ್ಟುಕೊಳ್ಳಿ’ ಎಂದಿದ್ದಾರೆ ಪ್ರಥಮ್.
‘ನೀವು ನಮಗೆ ಬಾಸ್ ಆಗೋದು ಯಾವಾಗ. 7 ಕೋಟಿ 35 ಲಕ್ಷ ಜನರು ಇದ್ದೀರಿ. ನೀವೆಲ್ಲರೂ ನಮಗೆ ಬಾಸ್. ನೀವು ಹೋಗಿ ಇನ್ನು ಯಾರನ್ನೋ ಬಾಸ್ ಎಂದರೆ ಎಲ್ಲಿಗೆ ಬಂತು ಸಂಸ್ಕಾರ? ಇನ್ನೊಂದು ಸಲ ನಿಮ್ಮ ಅಪ್ಪ-ಅಮ್ಮನನ್ನು ಬಿಟ್ಟು ಬೇರೆ ಯಾರನ್ನೂ ಬಾಸ್ ಅಂತ ಹೇಳಬೇಡಿ’ ಎಂದು ಜನರಿಗೆ ಪ್ರಥಮ್ ಬುದ್ಧಿಮಾತು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




