ದರ್ಶನ್ ಮಗ ವಿನೀಶ್ ಪ್ರಾಣಿ ಪ್ರಿಯ; ಇಷ್ಟವಾದ ಪ್ರಾಣಿ ಯಾವುದು ಗೊತ್ತಾ?
Darshan Thoogudeepa: ದರ್ಶನ್ಗೆ ಪ್ರಾಣಿಗಳ ಮೇಲೆ ವಿಶೇಷ ಪ್ರೀತಿ ಮತ್ತು ಕಾಳಜಿ. ದರ್ಶನ್ ಪುತ್ರ ವಿನೀಶ್ಗೂ ಸಹ ಪ್ರಾಣಿಗಳ ಮೇಲೆ ವಿಶೇಷ ಕಾಳಜಿ ಇದೆ. ಅಪ್ಪನ ಜೊತೆಗೆ ಮೈಸೂರಿನ ಫಾರಂಹೌಸ್ನಲ್ಲಿ ಪ್ರಾಣಿಗಳ ಆರೈಕೆಯಲ್ಲಿ ಸಮಯ ಕಳೆಯುತ್ತಾರೆ ವಿನೀಶ್. ದರ್ಶನ್ ಫಾರಂಹೌಸ್ನಲ್ಲಿ ಹಲವಾರು ಪ್ರಾಣಿಗಳಿವೆ. ಅವುಗಳಲ್ಲಿ ಯಾವ ಪ್ರಾಣಿ ಎಂದರೆ ವಿನೀಶ್ಗೆ ಇಷ್ಟ?

ನಟ ದರ್ಶನ್ ಅವರಿಗೆ ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ ಇದೆ. ಅವರು ಪ್ರಾಣಿಗಳ ಕುರಿತು ವಿಶೇಷ ಕಾಳಜಿ ಕೂಡ ಹೊಂದಿದ್ದಾರೆ. ಇದೇ ಗುಣ ಅವರ ಮಗ ವಿನೀಶ್ಗೂ ಬಂದಿದೆ. ಈ ಮೊದಲು ಸಂದರ್ಶನ ಒಂದರಲ್ಲಿ ದರ್ಶನ್ ಅವರು ಈ ವಿಚಾರವನ್ನು ಹೇಳಿಕೊಂಡಿದ್ದರು. ಅಲ್ಲದೆ, ವಿನೀಶ್ ಅವರ ನೆಚ್ಚಿನ ಪ್ರಾಣಿ ಯಾವುದು ಎಂದು ಕೂಡ ರಿವೀಲ್ ಮಾಡಿದ್ದರು. ಆ ಬಗ್ಗೆ ಇಲ್ಲಿದೆ ವಿವರ.
ದರ್ಶನ್ ಅವರಿಗೆ ಇಂದು (ಫೆಬ್ರವರಿ 16) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ದರ್ಶನ್ಗೆ ಎಲ್ಲರೂ ಶುಭಕೋರುತ್ತಾ ಇದ್ದಾರೆ. ಅವರ ಅಭಿಮಾನಿಗಳು ಎಲ್ಲ ಕಡೆಗಳಲ್ಲಿ ಸಂಭ್ರಮಿಸುತ್ತಾ ಇದ್ದಾರೆ. ಇದೇ ಸಂದರ್ಭದಲ್ಲಿ ಅವರ ಕುರಿತು ಹಾಗೂ ಅವರ ಕುಟುಂಬದ ಕುರಿತು ಸಾಕಷ್ಟು ವಿಚಾರಗಳು ಚರ್ಚೆ ಆಗುತ್ತಿವೆ. ಅದರಲ್ಲಿ ದರ್ಶನ್ ಮಗನ ಪ್ರಾಣಿ ಪ್ರೀತಿ ಕೂಡ ಒಂದು.
‘ಅವನಿಗೆ ಪ್ರಾಣಿಗಳ ಮೇಲೆ ಪ್ರೀತಿ. ಪ್ರಾಣಿ-ಪಕ್ಷಿ ಎಂದರೆ ಸಖತ್ ಇಷ್ಟ. ಯಾವ ಪ್ರಾಣಿ ಇಷ್ಟ ಎಂದು ಕೇಳಿದರೆ ಎಲ್ಲರೂ ನಾಯಿ ಅಂತೀರಾ. ಅವನಿಗೆ ಹಂದಿ ಅಂದ್ರೆ ಇಷ್ಟ. ಅವನ ಹತ್ತಿರ ಸಾವಿರ ಹಂದಿ ಟಾಯ್ ಇದೆ. ಅಂಗಡಿಗೆ ಹೋದರೆ ಹಂದಿ ಟಾಯ್ ತೆಗೆದುಕೊಂಡು ಬರುತ್ತಾನೆ. ಅವನಿಗಾಗಿ ತೋಟದಲ್ಲಿ ಹಂದಿ ಸಾಕಿದ್ದೇನೆ’ ಎಂದಿದ್ದರು ದರ್ಶನ್.
ಇದನ್ನೂ ಓದಿ:ದರ್ಶನ್ ಹುಟ್ಟುಹಬ್ಬ, ಕಾಮನ್ ಡಿಪಿ ಬಿಡುಗಡೆ ಮಾಡಿದ ಪತ್ನಿ ವಿಜಯಲಕ್ಷ್ಮಿ
ದರ್ಶನ್ ಅವರು ಮೈಸೂರಿನಲ್ಲಿ ಫಾರ್ಮ್ ಹೌಸ್ ಹೊಂದಿದ್ದಾರೆ. ಅಲ್ಲಿ ಅವರು ವಿವಿಧ ಪ್ರಾಣಿಗಳನ್ನು ಸಾಕಿದ್ದಾರೆ. ಅಲ್ಲಿ ಹಂದಿಯೂ ಇದೆ ಎನ್ನಲಾಗಿದೆ. ಮಕ್ಕಳು ಸಣ್ಣವರಿದ್ದಾಗ ಆಲೋಚಿಸೋದು ಬೇರೆ ದೊಡ್ಡವರಾದ ಬಳಿಕ ಆಲೋಚಿಸೋದು ಬೇರೆ. ಈಗಲೂ ವಿನೀಶ್ಗೆ ಹಂದಿಗಳೆಂದರೆ ಇಷ್ಟವೇ? ಆ ಬಗ್ಗೆ ದರ್ಶನ್ ಅವರೇ ಮಾಹಿತಿ ಹಂಚಿಕೊಳ್ಳಬೇಕು.
ವಿನೀಶ್ ಅವರು ಸಣ್ಣ ವಯಸ್ಸಿನಲ್ಲಿ ಹಾರ್ಸ್ ರೈಡಿಂಗ್ ಕಲಿತಿದ್ದಾರೆ. ಅವರು ಆರಾಮಾಗಿ ಕುದುರೆಯನ್ನು ಓಡಿಸ ಬಲ್ಲರು. ಈ ವಿಚಾರವನ್ನು ಅವರು ಅನೇಕ ಬಾರಿ ಹೇಳಿಕೊಂಡಿದ್ದು ಇದೆ. ಹಾರ್ಸ್ ರೈಡ್ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳನ್ನು ಈ ಮೊದಲು ಅವರು ಸಾಕಷ್ಟು ಬಾರಿ ಹಂಚಿಕೊಂಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ