ದರ್ಶನ್ಗೆ ಪ್ರಾಣಿಗಳ ಮೇಲೆ ವಿಶೇಷ ಪ್ರೀತಿ ಏಕೆ? ಅವರ ಬದುಕು ಬದಲಿಸಿದ ಕಥೆ ಇದು
Darshan Thoogudeepa: ದರ್ಶನ್ಗೆ ಪ್ರಾಣಿಗಳ ಮೇಲೆ ವಿಶೇಷ ಪ್ರೀತಿ ಮತ್ತು ಕಾಳಜಿ. ಕಳೆದ ವರ್ಷ ಕಾಡಾನೆ ರಕ್ಷಣೆ ವೇಳೆ ನಟ ಅರ್ಜುನ ಆನೆ ನಿಧನ ಹೊಂದಿದ್ದ ವಿಚಾರ ಗೊತ್ತೇ ಇದೆ. ಇದಕ್ಕೆ ಪ್ರಾಣಿ ಪ್ರಿಯರು ಕಂಬನಿ ಮಿಡಿದಿದ್ದರು. ಆನೆ ಸತ್ತ ವಿಚಾರ ಸಾಕಷ್ಟು ಚರ್ಚೆ ಕೂಡ ಆಗಿತ್ತು. ನಟ ದರ್ಶನ್ ಅವರು ಅರ್ಜುನನ ನಿಧನಕ್ಕೆ ಮರುಗಿದ್ದರು. ಅವರಿಗೆ ಪ್ರಾಣಿಗಳ ಮೇಲೆ ವಿಶೇಷ ಪ್ರೀತಿ ಇರುವುದಕ್ಕೆ ಕಾರಣವೂ ಇದೆ.

ಕಳೆದ ವರ್ಷ ಕಾಡಾನೆ ರಕ್ಷಣೆ ವೇಳೆ ನಟ ಅರ್ಜುನ ಆನೆ ನಿಧನ ಹೊಂದಿದ್ದ ವಿಚಾರ ಗೊತ್ತೇ ಇದೆ. ಇದಕ್ಕೆ ಪ್ರಾಣಿ ಪ್ರಿಯರು ಕಂಬನಿ ಮಿಡಿದಿದ್ದರು. ಆನೆ ಸತ್ತ ವಿಚಾರ ಸಾಕಷ್ಟು ಚರ್ಚೆ ಕೂಡ ಆಗಿತ್ತು. ನಟ ದರ್ಶನ್ ಅವರು ಅರ್ಜುನನ ನಿಧನಕ್ಕೆ ಮರುಗಿದ್ದರು. ಅವರಿಗೆ ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ ಇದೆ. ಇಂದು (ಫೆಬ್ರವರಿ 16) ದರ್ಶನ್ ಜನ್ಮದಿನ. ಈ ವೇಳೆ ಅವರ ಪ್ರಾಣಿ ಪ್ರೀತಿ ಬಗ್ಗೆ ನೆನಪಿಸಿಕೊಳ್ಳಲಾಗುತ್ತಿದೆ.
ಒಮ್ಮೆ ಆನೆ ಮೃತಪಟ್ಟು, ಅದನ್ನು ಮಣ್ಣು ಮಾಡಿದ ಬಳಿಕ ಯಾರೂ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ದರ್ಶನ್ ಹಾಗಿಲ್ಲ ಅನ್ನೋದು ಇಲ್ಲಿ ಗಮನಿಸಬೇಕು. ಆನೆಗೆ ತಾತ್ಕಾಲಿಕವಾಗಿ ಸ್ಮಾರಕ ನಿರ್ಮಾಣ ಮಾಡಲು ಕಲ್ಲುಗಳನ್ನು ಅವರು ಕಳುಹಿಸಿದ್ದರು. ಕೇವಲ ಆನೆ ಮಾತ್ರವಲ್ಲ, ಎಲ್ಲಾ ಪ್ರಾಣಿಗಳ ಮೇಲೆ ಅವರಿಗೆ ಪ್ರೀತಿ ಇದೆ.
ದರ್ಶನ್ ಅವರಿಗೆ ಮೊದಲಿನಿಂದಲೂ ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ ಇದೆ. ಅವರು ನಟನಾ ತರಬೇತಿ ಪಡೆದು ಬಂದ ನಂತರ ಕೆಲ ವರ್ಷ ಅವರು ಮೈಸೂರಿನಲ್ಲೇ ವಾಸ ಇದ್ದರು. ಆಗ ಅವರು ದನಗಳನ್ನು ಸಾಕಿದ್ದರು. ಹಾಲು ಕರೆದು, ಅದನ್ನು ಮನೆ ಮನೆಗೆ ಹಾಕಿ ಜೀವನ ನಡೆಸಿದ್ದರು. ಅವರು ಹೀರೋ ಆದ ಬಳಿಕವೂ ಪ್ರಾಣಿಗಳ ಬಗ್ಗೆ ವಿಶೇಷ ಪ್ರಿತಿಯನ್ನು ಅವರು ಇಟ್ಟುಕೊಂಡಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.
ದರ್ಶನ್ ಅವರಿಗೆ ಇತರ ಪ್ರಾಣಿಗಳ ಬಗ್ಗೆಯೂ ಪ್ರೀತಿ ಇದೆ. ಅವರು ಮೈಸೂರು ಮೃಗಾಲಯದಲ್ಲಿ ಹುಲಿ ಹಾಗೂ ಇತರ ಕೆಲವು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಕೊವಿಡ್ ಸಮಯದಲ್ಲಿ ಅವರು ಪ್ರಾಣಿಗಳನ್ನು ದತ್ತು ಪಡೆಯುವಂತೆ ಕರೆ ನೀಡಿದ್ದರು. ಅವರ ಅಭಿಮಾನಿಗಳು ಮುಂದೆ ಬಂದು ಪ್ರಾಣಿಗಳನ್ನು ದತ್ತು ಪಡೆದಿದ್ದರು.
ಇದನ್ನೂ ಓದಿ:ದರ್ಶನ್ ಹುಟ್ಟುಹಬ್ಬ, ಕಾಮನ್ ಡಿಪಿ ಬಿಡುಗಡೆ ಮಾಡಿದ ಪತ್ನಿ ವಿಜಯಲಕ್ಷ್ಮಿ
ದರ್ಶನ್ ಅವರು ಮೈಸೂರಿನಲ್ಲಿ ಫಾರ್ಮ್ಹೌಸ್ ಹೊಂದಿದ್ದಾರೆ. ಅಲ್ಲಿ ಅವರು ದನ, ಕುದುರೆಗಳನ್ನು ಸಾಕಿದ್ದಾರೆ. ದರ್ಶನ್ ಅವರು ಒಂದು ಕುದುರೆ ಸಾಕಿದ್ದು, ದರ್ಶನ್ ಮೇಲೆ ಆ ಕುದುರೆ ವಿಶೇಷ ಪ್ರೀತಿಯನ್ನು ಇಟ್ಟುಕೊಂಡಿದೆಯಂತೆ. ಈ ಮೊದಲು ಆ ಬಗ್ಗೆ ಅವರು ಹೇಳಿಕೊಂಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



