AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರೇ ತಪ್ಪು ಮಾಡಿದರೂ ತಂದೆಯಿಂದ ದರ್ಶನ್​ಗೆ ಬೀಳುತ್ತಿತ್ತು ಪೆಟ್ಟು

Darshan Birthday: ನಟ ದರ್ಶನ್ ತೂಗುದೀಪ ಹುಟ್ಟುಹಬ್ಬ ಇಂದು. ದರ್ಶನ್ ಅವರದ್ದು ಸಿನಿಮಾ ಕುಟುಂಬ. ತೂಗುದೀಪ ಶ್ರೀನಿವಾಸ್ ಬಹಳ ಶಿಸ್ತಿನ ವ್ಯಕ್ತಿತ್ವದವರು. ಮಕ್ಕಳು ಶಿಸ್ತಿನಿಂದ ಬೆಳೆಯಬೇಕು ಎಂಬುದು ಅವರ ಆಸೆಯಾಗಿತ್ತು. ತೂಗುದೀಪ ಶ್ರೀನಿವಾಸ ಅವರ ಕುಟುಂಬದಲ್ಲಿ ಯಾರೇ ತಪ್ಪು ಮಾಡಿದರೂ ದರ್ಶನ್​ಗೆ ಪೆಟ್ಟು ಕೊಡುತ್ತಿದ್ದರಂತೆ ತೂಗುದೀಪ ಶ್ರೀನಿವಾಸ್.

ಯಾರೇ ತಪ್ಪು ಮಾಡಿದರೂ ತಂದೆಯಿಂದ ದರ್ಶನ್​ಗೆ ಬೀಳುತ್ತಿತ್ತು ಪೆಟ್ಟು
Darshan Birthday
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 16, 2025 | 6:45 AM

Share

ನಟ ದರ್ಶನ್ ಅವರು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಕಳೆದ ವರ್ಷ ಸಾಕಷ್ಟು ತೊಂದರೆ ಅನುಭವಿಸಿದರು. ಈಗ ಅದೆಲ್ಲವನ್ನೂ ಮರೆತು ಮುಂದೆ ಬರುವ ಪ್ರಯತ್ನದಲ್ಲಿ ಇದ್ದಾರೆ. ‘ಡೆವಿಲ್’ ಸಿನಿಮಾದ ಕೆಲಸಗಳಲ್ಲಿ ಅವರು ತೊಡಗಿಕೊಳ್ಳಲಿದ್ದಾರೆ. ಅವರಿಗೆ ಇಂದು (ಫೆಬ್ರವರಿ 16) ಜನ್ಮದಿನ. ದರ್ಶನ್ಗೆ ಎಲ್ಲರೂ ಜನ್ಮದಿನದ ಶುಭಾಶಯ ಕೋರುತ್ತಾ ಇದ್ದಾರೆ. ದರ್ಶನ್ ಅವರ ಅಪರೂಪದ ವಿಚಾರಗಳು ಕೂಡ ಚರ್ಚೆಯಲ್ಲಿ ಇವೆ.

ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಅವರು ಖಳನಾಯಕನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಅವರು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅನೇಕ ಸ್ಟಾರ್ ಹೀರೋಗಳ ಸಿನಿಮಾಗೆ ಅವರು ವಿಲನ್ ಆಗಿ ಮಿಂಚಿದ್ದರು. ಅವರ ಮಗನಾಗಿ ಜನಿಸಿದ್ದು ದರ್ಶನ್. ತಂದೆಯಿಂದ ಸಾಕಷ್ಟು ಏಟುಗಳನ್ನು ತಿಂದಿದ್ದಾಗಿ ದರ್ಶನ್ ಅವರು ಈ ಮೊದಲು ಮಾತನಾಡಿದ್ದರು. ಆ ಸಂದರ್ಭದ ವಿಡಿಯೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ದರ್ಶನ್ ಅವರು ತಂದೆಯ ಬಳಿ ಹೊಡೆತ ತಿಂದಿದ್ದಾರಾ? ಹೀಗೊಂದು ಪ್ರಶ್ನೆಯನ್ನು ಅವರಿಗೆ ಕೇಳಲಾಗಿತ್ತು. ಇದಕ್ಕೆ ಅವರು ಹೌದು ಎನ್ನುವ ಉತ್ತರ ನೀಡಿದ್ದರು. ‘ನಮ್ಮ ತಂದೆ ಹೆಚ್ಚು ಹೊಡೆದಿದ್ದು ನನಗೆ. ದಿನಕರ್ ತಪ್ಪು ಮಾಡಿದ್ರೂ ನನಗೆ ಹೊಡೆಯುತ್ತಿದ್ದರು, ಅಕ್ಕ ತಪ್ಪು ಮಾಡಿದರೂ ನನಗೆ ಹೊಡೆಯುತ್ತಿದ್ದರು. ಅಲ್ಲಿ ಶುರುವಾದರೆ ನನಗೆ ಬಂದು ಕೊನೆ ಆಗುತ್ತಿತ್ತು’ ಎಂದು ದರ್ಶನ್ ಅವರು ಈ ಮೊದಲು ಹೇಳಿಕೊಂಡಿದ್ದರು.

ಇದನ್ನೂ ಓದಿ:ದರ್ಶನ್ ಹುಟ್ಟುಹಬ್ಬ, ಕಾಮನ್ ಡಿಪಿ ಬಿಡುಗಡೆ ಮಾಡಿದ ಪತ್ನಿ ವಿಜಯಲಕ್ಷ್ಮಿ

ದರ್ಶನ್ಗೆ ತಂದೆ ಇಷ್ಟನೋ ಅಥವಾ ತಾಯಿ ಇಷ್ಟನೋ ಎಂದು ಕೇಳಲಾಯಿತು. ಇದಕ್ಕೆ ಅವರು ನ್ಯೂಟ್ರಲ್ ಎಂಬ ಉತ್ತರ ಕೊಟ್ಟಿದ್ದರು. ‘ನಾನು ನ್ಯೂಟ್ರಲ್. ನಮ್ಮ ಅಮ್ಮನಿಗೆ ದಿನಕರ್ ತುಂಬಾ ಇಷ್ಟ. ಅಪ್ಪನಿಗೆ ಅಕ್ಕ ತುಂಬಾನೇ ಇಷ್ಟ. ನಾವು ಮಧ್ಯದವರು. ಹೀಗಾಗಿ, ಆಕಡೆ ಈಕಡೆ ಎರಡೂ ಕಡೆ ಇದ್ದೆ’ ಎಂದಿದ್ದರು ದರ್ಶನ್.

ದರ್ಶನ್ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಕೊಟ್ಟಿದ್ದು ‘ಮೆಜೆಸ್ಟಿಕ್’ ಹಾಗೂ ‘ಕರಿಯಾ’ ಸಿನಿಮಾಗಳು. ಆ ಬಳಿಕ ದರ್ಶನ್ ಹಲವು ಚಿತ್ರಗಳಲ್ಲಿ ನಟಿಸಿದರು. ಅವರು ವೃತ್ತಿ ಜೀವನದಲ್ಲಿ ಹಲವು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್