ಡಾಲಿ ಧನಂಜಯ್ ಹಾಕಿಸುತ್ತಿದ್ದಾರೆ ಭರ್ಜರಿ ಮದುವೆ ಊಟ, ಏನೇನು ಖಾದ್ಯಗಳಿರುತ್ತೆ?
Daali Dhananjay: ನಟ ಡಾಲಿ ಧನಂಜಯ್, ವೈದ್ಯೆ ಧನ್ಯತಾರ ಮದುವೆ ಬಲು ಅದ್ಧೂರಿಯಾಗಿ ಮೈಸೂರಿನಲ್ಲಿ ನಡೆಯುತ್ತಿದೆ. ಮದುವೆಗೆ ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಸೇರಿದಂತೆ ಹಲವಾರು ಗಣ್ಯರು ಆಗಮಿಸಲಿದ್ದಾರೆ. ಜೊತೆಗೆ ಅಭಿಮಾನಿಗಳು ಸಹ ಬರಲಿದ್ದಾರೆ. ಎಲ್ಲರಿಗೂ ಭರ್ಜರಿ ಊಟದ ವ್ಯವಸ್ಥೆಯನ್ನು ಡಾಲಿ ಮಾಡಿಸಿದ್ದಾರೆ. ಡಾಲಿ ಧನಂಜಯ್ ಅವರ ಮದುವೆಯ ಊಟದ ಮೆನುವಿನಲ್ಲಿ ಏನೇನೆಲ್ಲಾ ಇರಲಿದೆ? ಇಲ್ಲಿದೆ ಮಾಹಿತಿ.

ಡಾಲಿ ಧನಂಜಯ್ ಮತ್ತು ವೈದ್ಯೆ ಧನ್ಯತಾರ ಮದುವೆ ಮೈಸೂರಿನಲ್ಲಿ ಬಲು ಅದ್ಧೂರಿಯಾಗಿ ನಡೆಯುತ್ತಿದೆ. ಡಾಲಿ ಧನಂಜಯ್ ಅವರ ಕುಟುಂಬದಸ್ಥರು, ಗೆಳೆಯರು, ಅಭಿಮಾನಿಗಳು, ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಮದುವೆ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ. ಡಾಲಿ ಧನಂಜಯ್ ಮದುವೆಯ ಉಸ್ತುವಾರಿ ವಹಿಸಿರುವ ವೆಡ್ಡಿಂಗ್ ಪ್ಲ್ಯಾನರ್ ಹೇಳುವ ಪ್ರಕಾರ ಡಾಲಿ ಮೊದಲ ಆಧ್ಯತೆ ಊಟಕ್ಕೆ ನೀಡಿದ್ದಾರಂತೆ. ಅಭಿಮಾನಿಗಳಿಗೆ ಒಳ್ಳೆಯ ಊಟ ಹಾಕಿಸಬೇಕು ಎಂಬ ಆಸೆಯಂತೆ ಎಲ್ಲರಿಗೂ ಒಂದೇ ಮೆನ್ಯು ಇಡಿಸಿದ್ದಾರಂತೆ. ಅಂದಹಾಗೆ ಮೆನುನಲ್ಲಿ ಏನಿದೆ? ಡಾಲಿ ಮದುವೆ ಊಟದಲ್ಲಿ ಏನೇನು ಖಾದ್ಯಗಳಿರಲಿವೆ? ಇಲ್ಲಿದೆ ಮಾಹಿತಿ.
ಡಾಲಿ ಧನಂಜಯ್ ಅವರ ಆರತಕ್ಷತೆಗೆ ಸುಮಾರು 30 ಸಾವಿರ ಜನಕ್ಕೆ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೂರು ಕೌಂಟರ್ಗಳನ್ನು ನಿರ್ಮಿಸಿ ಮೂರರಲ್ಲೂ ಪ್ರಯತ್ಯೇಕವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. ಊರಿನವರಿಗೆ ಎಲೆ ಊಟ ವ್ಯವಸ್ಥೆ ಮಾಡಿಸಿದ್ದಾರಂತೆ. ಆದರೆ ಮದುವೆಗೆ ಬಂದ ಎಲ್ಲರಿಗೂ ಒಂದೇ ಥೆರನಾದ, ಅದರಲ್ಲೂ ಡಾಲಿಗೆ ಬಲು ಮೆಚ್ಚುಗೆ ಆಗಿರುವ ಒಬ್ಬಟ್ಟಿನ ಊಟವನ್ನೇ ಹಾಕಿಸುತ್ತಿದ್ದಾರಂತೆ.
ಇಂದು ಸಂಜೆ ನಡೆಯಲಿರುವ ಡಾಲಿ ಧನಂಜಯ್ರ ಅವರ ಆರತಕ್ಷತೆ ಕಾರ್ಯಕ್ರಮದಲ್ಲಿ ಒಬ್ಬಟ್ಟು, ಮಸಾಲೆ ದೋಸೆ, ಚಟ್ನಿ, ರೋಟಿ, ಅದಕ್ಕೆ ರುಚಿಯಾದ ಗ್ರೇವಿ, ಮೆಣಸಿನಕಾಯಿ ಬಜ್ಜಿ, ಬೆಂಡೇಕಾಯಿ ಫ್ರೈ, ರುಮಾಲಿ ರೋಟಿ, ವೆಜ್ ಬಿರಿಯಾನಿ ಮತ್ತು ಅದಕ್ಕೆ ರಾಯ್ತಾ, ಅನ್ನ, ತಿಳಿಸಾರು ಮತ್ತು ಮೊಸರು ಇರಲಿದೆ.
ಇದನ್ನೂ ಓದಿ:ಡಾಲಿ ಧನಂಜಯ್ ಮದುವೆ ಸೆಟ್ ಎಷ್ಟು ಬೃಹತ್ ಎಂಬುದು ಗೊತ್ತೆ?
ಮೂರು ಎಕರೆ ಪ್ರದೇಶದಲ್ಲಿ ಊಟದ ಹಾಲ್ ನಿರ್ಮಿಸಲಾಗಿದ್ದು, ಅದರಲ್ಲಿ ನಾಲ್ಕು ಕೌಂಟರ್ಗಳನ್ನು ನಿರ್ಮಾಣ ಮಾಡಲಾಗಿದೆ. ವೃದ್ಧರಿಗೆ, ಡಾಲಿಯ ಊರಿನವರಿಗೆ ಎಂದು ಬಾಳೆ ಎಲೆ ಊಟದ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗೆ ಒಂದು ಪ್ರತ್ಯೇಕ ಕೌಂಟರ್ ಮಾಡಲಾಗಿದೆ. ಒಂದು ಬಾರಿಗೆ ಸುಮಾರು ನಾಲ್ಕು ಸಾವಿರ ಜನ ಊಟ ಮಾಡಿ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ.
ಸುಮಾರು 500 ಜನ ಅಡುಗೆಯವರು, ಬಡಿಸುವವರು ಡಾಲಿ ಮದುವೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೆಣ್ಣು ಮಕ್ಕಳ ಕೌಂಟರ್ನಲ್ಲಿ ಊಟ ಬಡಿಸುವವರೂ ಸಹ ಹೆಣ್ಣು ಮಕ್ಕಳೇ ಆಗಿರಲಿದ್ದಾರೆ. ಸ್ವಚ್ಛತೆಗೆ ಹಲವಾರು ಮಂದಿ ಇದ್ದಾರೆ. 500 ಮಂದಿಗೆ ಬಾಳೆ ಎಲೆ ಊಟದ ಕೌಂಟರ್ ಮಾಡಲಾಗಿದೆ. ಅಭಿಮಾನಿಗಳಿಗೆ ಅಡಿಕೆ ತಟ್ಟೆಯಲ್ಲಿ ಬೊಫೆ ಸಿಸ್ಟಂನಲ್ಲಿ ಊಟ ಬಡಿಸಲಾಗುತ್ತದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:35 pm, Sat, 15 February 25




