ಸೆಲೆಬ್ರಿಟಿಗಳಿಗೆ ಕ್ರೀಡೆಯ ಬಗ್ಗೆ ಆಸಕ್ತಿ ಇರುತ್ತದೆ. ಸಿನಿಮಾ ಮತ್ತು ಸೀರಿಯಲ್ ಮಂದಿಯ ಬ್ಯಾಡ್ಮಿಂಟನ್, ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಲೇ ಇರುತ್ತವೆ. ಆದರೆ ವಿಶೇಷ ಎಂಬಂತೆ ಲುಡೋ ಆಟ ಆಯೋಜಿಸಲಾಗುತ್ತಿದೆ. ಇದರಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಲಿದ್ದಾರೆ. ಹಿರಿತೆರೆ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡ ಅನೇಕ ಸೆಲೆಬ್ರಿಟಿಗಳಿಗಾಗಿ ‘ಪ್ರೊ ಲುಡೋ ಸ್ಟಾರ್ ಲೀಗ್’ ಆಯೋಜಿಸಲಾಗುತ್ತಿದೆ. ಜನವರಿಯಲ್ಲಿ ಈ ಲೀಗ್ ನಡೆಯಲಿದೆ. ಈ ಬಗ್ಗೆ ಮಾಹಿತಿ ನೀಡಲು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಯಿತು.
‘ಪ್ರೊ ಲುಡೋ ಸ್ಟಾರ್ ಲೀಗ್’ನಲ್ಲಿ ಧಾರಾವಾಹಿ, ರಿಯಾಲಿಟಿ ಶೋ, ಸಿನಿಮಾಗಳಲ್ಲಿ ಖ್ಯಾತಿ ಪಡೆದಿರುವ ಹಲವು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಇದು ಒಂದು ವಿಶೇಷ ಮನರಂಜನಾ ಕ್ರೀಡೆಯಾಗಿ ಹೊರಹೊಮ್ಮುಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಆಸ್ತ್ರ ಪ್ರೊಡಕ್ಷನ್ಸ್ ಲಂಚು ಲಾಲ್ ಅವರು ಈ ಲೀಗ್ನ ಆಯೋಜಕರಾಗಿದ್ದಾರೆ. ಸುದೇಶ್ ಭಂಡಾರಿ ನಿರ್ದೇಶಕರಾಗಿ, ಅಜ್ಫರ್ ರಜಾಕ್ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
40×40 ಚದರ ಅಡಿ ವಿಸ್ತೀರ್ಣ ಇರುವ ವರ್ಣರಂಜಿತ ಒಳಾಂಗಣ ಅಖಾಡದಲ್ಲಿ ಇದೇ ಮೊದಲ ಬಾರಿಗೆ ಲುಡೋ ಆಟ ಆಯೋಜನೆಗೊಳ್ಳುತ್ತಿದೆ. ಇದರಲ್ಲಿ ಒಂದಷ್ಟು ವಿಶೇಷತೆಗಳು ಕೂಡ ಇರಲಿವೆ. ಈ ಲೀಗ್ನಲ್ಲಿ ಒಟ್ಟು 8 ಟೀಮ್ಗಳು ಇರಲಿವೆ. 16 ತಾರೆಯರು ಈ 8 ತಂಡಗಳಲ್ಲಿ ಜೋಡಿಯಾಗಿ ಇರುತ್ತಾರೆ. ಅವರಲ್ಲದೇ 16 ಮಾಡಲ್ಗಳು ಇರಲಿದ್ದಾರೆ. ಅವರು ಕೂಡ ಈ ಆಟದಲ್ಲಿ ಭಾಗಿಯಾಗುತ್ತಾರೆ.
ಇದನ್ನೂ ಓದಿ: ಬಿಗ್ ಬಾಸ್ ನಿರೂಪಣೆ ಬಿಟ್ಟಿದ್ದಕ್ಕೆ ನಿಜವಾದ ಕಾರಣ ತಿಳಿಸಿದ ಕಿಚ್ಚ ಸುದೀಪ್
‘ಪ್ರೊ ಲುಡೋ ಸ್ಟಾರ್ ಲೀಗ್’ ನಿರೂಪಕರಾಗಿ ಅರುಣ್ ಹರಿಹರನ್ ಹಾಗೂ ಜಾಹ್ನವಿ ಇರಲಿದ್ದಾರೆ. ಪ್ರತಿ ಪಂದ್ಯಕ್ಕೂ ಮುನ್ನ ಹಾಗೂ ನಂತರದಲ್ಲಿ ಆಟಗಾರರ ಜೊತೆ ಆಕರ್ಷಕ ಕಾಮೆಂಟರಿ, ಸಂವಾದಗಳು ಇರಲಿವೆ. ವೀಕ್ಷಕರಿಗೆ ಈ ಇವೆಂಟ್ ತುಂಬಾ ಆಕರ್ಷಕವಾಗಿರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಡೈಸ್ ಹಾಕಿದಾಗ ಕಾಯಿನ್ ಬದಲು ಕಾಯಿನ್ ಗರ್ಲ್ಸ್ ಮೂವ್ ಆಗುತ್ತಾರೆ! ರೆಗ್ಯುಲರ್ ಲುಡೋ ಆಟದ ನಿಯಮಕ್ಕಿಂತ ‘ಪ್ರೊ ಲುಡೋ ಸ್ಟಾರ್ ಲೀಗ್’ ನಿಯಮಗಳು ಡಿಫರೆಂಟ್ ಆಗಿರಲಿವೆ.
ನವೀನ್ ಡಿ. ಪಡೀಲ್, ಸುಂದರ್ ರೈ ಮಂದಾರ, ಮಿಮಿಕ್ರಿ ಗೋಪಿ, ವಿನುತಾ, ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ, ತುಕಾಲಿ ಸಂತೋಷ್, ಮಾನಸ ಸಂತೋಷ್, ಮಂಜು ಪಾವಗಡ, ಹುಲಿ ಕಾರ್ತಿಕ್, ಚಂದನ ಗೌಡ, ಅಮೃತಾ, ಕೆಂಪೇಗೌಡ, ಮಾನ್ಯ ಗೌಡ, ಸೀತಾರಾಮ್, ಸಾಕ್ಷಿ ಮೇಘನಾ ಅವರು ಈ ಲೀಗ್ನಲ್ಲಿ ಆಟ ಆಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.