AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಖಂಡಿ ಅಂದ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಸೂರಪ್ಪ ಬಾಬು ಫೈರ್

Soorappa Babu: ವಿಡಿಯೋ ಒಂದರಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಮಾತನಾಡಿದ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ನಿರ್ಮಾಪಕ ಸೂರಪ್ಪ ಬಾಬು ವಾಗ್ದಾಳಿ ನಡೆಸಿದ್ದಾರೆ.

ಶಿಖಂಡಿ ಅಂದ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಸೂರಪ್ಪ ಬಾಬು ಫೈರ್
ಚಕ್ರವರ್ತಿ ಚಂದ್ರಚೂಡ್
ಜಗದೀಶ ಬಿ.
| Edited By: |

Updated on: Jul 23, 2023 | 9:11 PM

Share

ಸುದೀಪ್ (Sudeep) ಹಾಗೂ ನಿರ್ಮಾಪಕ ಎಂಎನ್ ಕುಮಾರ್ (MN Kumar) ವಿವಾದದ ನಡುವೆ ಸೂರಪ್ಪ ಬಾಬು ಎಂಟ್ರಿ ಆಗಿದ್ದಾರೆ. ಎಂಎನ್ ಕುಮಾರ್, ಸುದೀಪ್ ವಿರುದ್ಧ ಆರೋಪ ಮಾಡಿದ ಬಳಿಕ ಸುದೀಪ್ ಪರವಾಗಿ ಸುದ್ದಿಗೋಷ್ಠಿ ನಡೆಸಿದ್ದ ಅವರ ಆಪ್ತರಾದ ಜಾಕ್ ಮಂಜು ಹಾಗೂ ಚಕ್ರವರ್ತಿ ಚಂದ್ರಚೂಡ್, ಎಂಎನ್ ಕುಮಾರ್ ಮಾಡಿದ್ದ ಆರೋಪಗಳಿಗೆ ಉತ್ತರ ನೀಡುವ ಜೊತೆಗೆ, ಈ ಪ್ರಕರಣದ ಹಿಂದೆ ನಿರ್ಮಾಪಕ ಸೂರಪ್ಪ ಬಾಬು ಕೈವಾಡವಿದೆ ಎಂದಿದ್ದರು. ಆ ಬಳಿಕ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ವಿಡಿಯೋ ಅಪ್​ಲೋಡ್ ಮಾಡಿದ್ದ ಚಕ್ರವರ್ತಿ ಚಂದ್ರಚೂಡ್ (Chakravarthy Chandrachud) ಸೂರಪ್ಪ ಬಾಬು (Soorappa Babu) ಅವರನ್ನು ಶಿಖಂಡಿ ಎಂದು ಜರಿದು ಹಲವು ಆರೋಪಗಳನ್ನು ಮಾಡಿದ್ದರು.

ಇಂದು (ಜುಲೈ 23) ಸುದ್ದಿಗೋಷ್ಠಿ ಕರೆದಿದ್ದ ನಿರ್ಮಾಪಕ ಸೂರಪ್ಪ ಬಾಬು, ”ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಮಾತನಾಡಲು ಅವನಿಗೇನು ಹಕ್ಕಿದೆ. ಯಾವುದೇ ಹಕ್ಕಿಲ್ಲದೇ ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ, ನಾನು ಉತ್ತರ ಕೊಡಬೇಕಾಗಿರೋದು ನನಗೆ ಹಣ ಕೊಟ್ಟವರಿಗೆ ಹಾಗು ನನ್ನ ಮನೆಯವರಿಗೆ. ಸತ್ಯ ಹರಿಶ್ಚಂದ್ರನ ತುಂಡು ಅಂತ ಅಂದ್ಕೊಂಡಿದ್ದಾರಾ ನನ್ನ ಶಿಖಂಡಿ ಅಂತ ಹೇಳ್ತಿದ್ದಾರೆ, ನನಗೆ ಹೆಂಡತಿ ಇದ್ದಾರೆ, ನನಗೆ ಇಬ್ಬರು ಮಕ್ಕಳು ಇದ್ದಾರೆ, 34 ವರ್ಷ ಆಯ್ತು ಇಂಡಸ್ಡ್ರಿಗೆ ಬಂದು” ಎಂದು ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಸೂರಪ್ಪ ಬಾಬು ಅಬ್ಬರಿಸಿದ್ದಾರೆ.

”ಯಾವ ನಟರಿಗೆ ಅನ್ಯಾಯ ಮಾಡಿದ್ದೀನಿ ತಾಕತ್ ಇದ್ದರೆ ಹೆಸರು ಬಹಿರಂಗಗೊಳಿಸಲಿ. ಹೆಸರು ಮುಚ್ಚಿಟ್ಟು ಮಾತನಾಡುವುದರಲ್ಲಿ ಏನಿದೆ. ವರ್ಷಾನುಗಟ್ಟಲೆಗಳಿಂದ ಚಿತ್ರರಂಗದಲ್ಲಿದ್ದೀನಿ. ಹಲವಾರು ನಟರೊಟ್ಟಿಗೆ ಸಿನಿಮಾ ಮಾಡಿದ್ದೇನೆ. ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದೇನೆ. ಒಂದೇ ನಟರೊಟ್ಟಿಗೆ ಹಲವು ಸಿನಿಮಾಗಳನ್ನು ಮಾಡಿದ್ದೀನಿ. ಈಗ ಮೂರು ಸಿನಿಮಾ ಮಾಡುತ್ತಿದ್ದೀನಿ. ಡೇಟ್ಸ್ ಸಿಕ್ಕರೆ ಇನ್ನೂ ಆರು ಜನ ಸ್ಟಾರ್ ನಟರೊಟ್ಟಿಗೆ ಸಿನಿಮಾ ಮಾಡುತ್ತೀನಿ” ಎಂದಿದ್ದಾರೆ ಸೂರಪ್ಪ ಬಾಬು.

ಇದನ್ನೂ ಓದಿ:ಸೂರಪ್ಪ ಬಾಬು ಸುದೀಪ್​ಗೆ 7.50 ಕೋಟಿ ಹಣ ಬಾಕಿ ಕೊಡಬೇಕು, ಅವರೇ ಎಲ್ಲದಕ್ಕೂ ಕಾರಣ: ಚಂದ್ರಚೂಡ್

”75 ರೂಪಾಯಿಗೆ ಕಾಫಿ ಸಪ್ಲೈ ಮಾಡುವ ಆಫೀಸ್ ಬಾಯ್ ಆಗಿದ್ದೆ. ಈಗ 65-70 ಕೋಟಿ ರೂಪಾಯಿ ಮೌಲ್ಯದ ಸಿನಿಮಾ ಮಾಡುವ ಮಟ್ಟಕ್ಕೆ ಬೆಳೆದಿದ್ದೇನೆ. ವೀರಾಸ್ವಾಮಿ ಅವರೂ ಸಹ ಯಾವುದೋ ಆಫೀಸ್​ನಲ್ಲಿ ಕೆಲಸ ಮಾಡುತ್ತಿದ್ದರು. ಆ ಬಳಿಕ ಅವರು ದೊಡ್ಡ-ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿದರು. ನಾನು ಬೆಳೆದು ಬಂದ ದಾರಿಯೂ ಹಾಗೆಯೇ ಇದೆ” ಎಂದಿದ್ದಾರೆ.

”ಕುಮಾರ್ ನನಗಿಂತ ಸೀನಿಯರ್. ಅವರಿಗೆ ಅವಶ್ಯಕತೆ ಇದ್ದಾಗ ಸಲಹೆ ಕೊಟ್ಟಿದ್ದೇನೆ. ಕುಮಾರ್ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದಾಗ ತಡೆದಿದ್ದೀನಿ. ಅವರು ನನ್ನ ಹಳೆಯ ಗೆಳೆಯರು. ಅವರು ಏನೋ ಮಾತನಾಡಿದ್ದಕ್ಕೆ ನಾನು ಹೇಗೆ ಕಾರಣ ಆಗ್ತೀನಿ? ಕುಮಾರ್ ವಿಷಯ ಇತ್ಯರ್ಥ ಮಾಡಿಸಿಕೊಡಿ ಎಂದು ಸುಮಾರು ನಾಲ್ಕು ಮಂದಿಯ ಬಳಿ ನಾನೇ ಕೇಳಿಕೊಂಡಿದ್ದೆ. ಸಾಕಷ್ಟು ನಷ್ಟದಲ್ಲಿ ಕುಮಾರ್ ಇದ್ದ ಹಾಗಾಗಿ ನಾನು ಅವನ ಪರವಾಗಿ ಕೆಲವರನ್ನು ಮನವಿ ಮಾಡಿಕೊಂಡಿದ್ದೇ” ಎಂದಿದ್ದಾರೆ. ಸುದೀಪ್ ಬಗ್ಗೆ ಮಾತನಾಡಿದ ಸೂರಪ್ಪ ಬಾಬು, ”ಸುದೀಪ್ ಬಾಯಲ್ಲಿ ನನ್ನ ಹೆಸರು ಬಂದಿಲ್ಲ. ಮಧ್ಯದಲ್ಲಿ ಇರುವವರು ನನ್ನ ಹಾಗೂ ಸುದೀಪ್ ಮಧ್ಯೆ ಹುಳಿ ಹಿಂಡುವ ಕಾರ್ಯ ಮಾಡುತ್ತಿದ್ದಾರೆ” ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್