ಮೈಸೂರು: ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಸಿನಿಮಾ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಉತ್ತಮ ಸಂದೇಶಕ್ಕಾಗಿ, ಅಪ್ಪು ಡ್ಯಾನ್ಸ್ಗಾಗಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಚಲನಚಿತ್ರವನ್ನು ಮಕ್ಕಳು, ದೊಡ್ಡವರು ಎಂಬ ಭೇದವಿಲ್ಲದೆ ಎಲ್ಲರೂ ನೋಡುತ್ತಿದ್ದಾರೆ. ಈ ನಡುವೆ, ಮೃತಪಟ್ಟ ಮಗನ ಫೊಟೋದೊಂದಿಗೆ ಪೋಷಕರು ‘ಯುವರತ್ನ’ ಸಿನಿಮಾ ನೋಡಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಡಿಆರ್ಸಿ ಮಲ್ಟಿಪ್ಲೆಕ್ಸ್ನಲ್ಲಿ ಪೋಷಕರು ಮೃತ ಮಗನ ಭಾವಚಿತ್ರದೊಂದಿಗೆ ಸಿನಿಮಾ ನೋಡಿದ್ದಾರೆ.
ಕಳೆದ ಮೂರು ತಿಂಗಳ ಹಿಂದಷ್ಟೇ ಬಾಲಕ ಹರಿಕೃಷ್ಣನ್ ಎಂಬಾತ ಮೃತಪಟ್ಟಿದ್ದ. ಪುಟ್ಟ ಹುಡುಗ ಹರಿಕೃಷ್ಣನ್ ಪುನೀತ್ ರಾಜ್ಕುಮಾರ್ ಅಭಿಮಾನಿಯೂ ಆಗಿದ್ದ. ಅಷ್ಟೇ ಅಲ್ಲದೆ, ಆತ ಯುವರತ್ನ ಸಿನಿಮಾ ನೋಡಬೇಕೆಂದು ಆಸೆ ಪಟ್ಟಿದ್ದ. ಈ ಕಾರಣದಿಂದ, ಮಗನ ಆಸೆಯಂತೆ ಪೋಷಕರು ಆತನ ಫೊಟೋದೊಂದಿಗೆ ‘ಯುವರತ್ನ’ ವೀಕ್ಷಣೆ ಮಾಡಿದ್ದಾರೆ.
ಮೈಸೂರಿನ ನಿವಾಸಿ ಮುರಳಿಧರ್ ಎಂಬುವವರ ಪುತ್ರ ಹರಿಕೃಷ್ಣನ್ ಈಜಲು ಹೋಗಿ ನೀರಲ್ಲಿ ಮುಳುಗಿ ಸಾವನಪ್ಪಿದ್ದ. ಮಗ ಪುನೀತ್ ಅಭಿಮಾನಿಯಾಗಿದ್ದು, ಯುವರತ್ನ ನೋಡಬೇಕೆಂದು ಆಸೆಪಟ್ಟಿದ್ದ. ಮಗನ ಆಸೆಯನ್ನು ತೀರಿಸುವ ಸಲುವಾಗಿ ಫೊಟೋ ಇಟ್ಟುಕೊಂಡು ಪೋಷಕರು ಸಿನಿಮಾ ವೀಕ್ಷಿಸಿದ್ದಾರೆ. ಸಾವನಪ್ಪಿದ ಮಗನಿಗೂ ಒಂದು ಟಿಕೆಟ್ ತೆಗೆದುಕೊಂಡು, ತಂದೆ-ತಾಯಿ-ಹಿರಿಯ ಮಗನ ಜೊತೆ ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ಕೌಟುಂಬಿಕ ಸಿನಿಮಾ ವೀಕ್ಷಿಸುವ ಪ್ರೇಕ್ಷಕ ವರ್ಗಕ್ಕೆ ತುಂಬಾ ಹತ್ತಿರವಾದ ನಟ ಪುನೀತ್ ರಾಜ್ಕುಮಾರ್ ಎಂದರೆ ತಪ್ಪಿಲ್ಲ. ಪುನೀತ್ ರಾಜ್ಕುಮಾರ್ಗೆ ದೊಡ್ಡ ಪ್ರಮಾಣದ ಫ್ಯಾಮಿಲಿ ಆಡಿಯನ್ಸ್ ಇದ್ದಾರೆ. ಮಕ್ಕಳು, ವಯಸ್ಕರು ಎನ್ನದೆ ತುಂಬಾ ಫ್ಯಾನ್ ಫಾಲೋವರ್ಸ್ ಪುನೀತ್ಗೆ ಇದ್ದಾರೆ.
ಇದನ್ನೂ ಓದಿ: Yuvarathnaa Collection: ಯುವರತ್ನ ಬಾಕ್ಸ್ ಆಫೀಸ್ ಗಳಿಕೆ ಎಷ್ಟು? ಇಲ್ಲಿದೆ ಮಾಹಿತಿ
ಇದನ್ನೂ ಓದಿ: ಯುವರತ್ನ ನೋಡಬೇಕು, ಥಿಯೇಟರ್ ಹೌಸ್ ಫುಲ್ ಮಾಡೋಕೆ ಅವಕಾಶ ಕೊಡಿ; ಸಿಎಂಗೆ ಮಕ್ಕಳಿಂದ ಮನವಿ
Published On - 8:12 pm, Sun, 4 April 21