Puneeth Rajkumar: ಅಪ್ಪು ಆಹಾರವನ್ನು ಪ್ರೀತಿಸುತ್ತಿದ್ದ ಪರಿಯೇ ಬೇರೆ; ಇಲ್ಲಿದೆ ನೋಡಿ ಸಾಕ್ಷಿ

| Updated By: ಮದನ್​ ಕುಮಾರ್​

Updated on: Oct 29, 2023 | 9:17 AM

Puneeth Rajkumar Death Anniversary: ಪುನೀತ್ ರಾಜ್​ಕುಮಾರ್​ ಚಿಕ್ಕಂದಿನಿಂದಲೂ ಆಹಾರದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಫುಡ್ ಬಗ್ಗೆ ವಿಶೇಷ ಪ್ರೀತಿ ಮೂಡಲು ಅವರ ತಂದೆ ರಾಜ್​ಕುಮಾರ್ ಕೂಡ ಕಾರಣ. ಪುನೀತ್ ವಿವಿಧ ಕಡೆಗಳಲ್ಲಿ ತೆರಳಿ ಹೊಸ ಹೊಸ ರೀತಿಯ ತಿಂಡಿ ತಿನಿಸುಗಳನ್ನು ಸವಿಯುತ್ತಿದ್ದರು. ಸ್ಟಾರ್ ಹೀರೋ ಆದರೂ ಅವರಿಗೆ ಸ್ಟ್ರೀಟ್​ ಫುಡ್ ಸಖತ್ ಇಷ್ಟ ಆಗಿತ್ತು.

Puneeth Rajkumar: ಅಪ್ಪು ಆಹಾರವನ್ನು ಪ್ರೀತಿಸುತ್ತಿದ್ದ ಪರಿಯೇ ಬೇರೆ; ಇಲ್ಲಿದೆ ನೋಡಿ ಸಾಕ್ಷಿ
ಪುನೀತ್​ ರಾಜ್​ಕುಮಾರ್
Follow us on

ಪುನೀತ್ ರಾಜ್​ಕುಮಾರ್ (Puneeth Rajkumar) ಅವರು ನಮ್ಮನ್ನು ಅಗಲಿ ಇಂದಿಗೆ (ಅಕ್ಟೋಬರ್ 29) ಎರಡು ವರ್ಷ ಕಳೆದಿದೆ. ಅವರಿಲ್ಲ ಎನ್ನುವ ನೋವು ಅಭಿಮಾನಿಗಳ ಮನದಲ್ಲಿ, ಕುಟುಂಬದವರಲ್ಲಿ ಇನ್ನೂ ಹಾಗೆಯೇ ಇದೆ. ಅದು ಎಂದಿಗೂ ಕಡಿಮೆ ಆಗುವಂಥದ್ದಲ್ಲ. ಪುನೀತ್ ರಾಜ್​ಕುಮಾರ್ ಅವರನ್ನು ಹಲವು ರೀತಿಯಲ್ಲಿ ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ. ಕೆಲವು ರಸ್ತೆ, ವೃತ್ತ, ಪಾರ್ಕ್​​ಗಳಿಗೆ ಪುನೀತ್ ರಾಜ್​ಕುಮಾರ್ ಅವರ ಹೆಸರನ್ನು ಇಡಲಾಗಿದೆ. ಅನೇಕರು ತಮ್ಮ ಮಕ್ಕಳಿಗೆ ಪುನೀತ್ ಎಂದು ನಾಮಕರಣ ಮಾಡಿದ್ದಾರೆ. ಅವರ ಪುಣ್ಯಸ್ಮರಣೆಯ ದಿನ (Puneeth Rajkumar Death Anniversary) ನಾನಾ ರೀತಿಯ ಸಾಮಾಜಿಕ ಕೆಲಸಗಳನ್ನು ಅವರ ಅಭಿಮಾನಿಗಳು ಮಾಡುತ್ತಿದ್ದಾರೆ. ರಕ್ತದಾನ, ಅನ್ನದಾನ ಕಾರ್ಯಕ್ರಮಗಳು ರಾಜ್ಯದ ವಿವಿಧ ಕಡೆಗಳಲ್ಲಿ ನಡೆಯಲಿವೆ. ಪುನೀತ್ (Puneeth) ಕುಟುಂಬ ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಪೂಜೆ ಸಲ್ಲಿಸಲಿದೆ. ಪುನೀತ್ ರಾಜ್​ಕುಮಾರ್ ಅವರಿಗೆ ಆಹಾರದ ಬಗ್ಗೆ ವಿಶೇಷ ಪ್ರೀತಿ ಇತ್ತು. ಅನೇಕ ಸಂದರ್ಶನಗಳಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದರು.

ಪುನೀತ್ ಚಿಕ್ಕಂದಿನಿಂದಲೂ ಆಹಾರದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಫುಡ್ ಬಗ್ಗೆ ವಿಶೇಷ ಪ್ರೀತಿ ಮೂಡಲು ಅವರ ತಂದೆ ರಾಜ್​ಕುಮಾರ್ ಕೂಡ ಕಾರಣ. ಪುನೀತ್ ವಿವಿಧ ಕಡೆಗಳಲ್ಲಿ ತೆರಳಿ ಹೊಸ ಹೊಸ ರೀತಿಯ ತಿಂಡಿ ತಿನಿಸುಗಳನ್ನು ಸವಿಯುತ್ತಿದ್ದರು. ಸ್ಟಾರ್ ಹೀರೋ ಆದರೂ ಅವರಿಗೆ ಸ್ಟ್ರೀಟ್​ ಫುಡ್ ಸಖತ್ ಇಷ್ಟ ಆಗಿತ್ತು. ಇದನ್ನು ಅವರು ಕೆಲವು ಬಾರಿ ಹೇಳಿಕೊಂಡಿದ್ದಿದೆ. ಬೆಂಗಳೂರಲ್ಲಿ 60-70 ವರ್ಷ ಹಳೆಯ ಹೋಟೆಲ್​ಗಳು ಇವೆ. ಹೋಟೆಲ್​ಗಳು ಚಿಕ್ಕದಾದರೂ ರುಚಿಯಲ್ಲಿ ಯಾವುದೇ ಕಾಂಪ್ರಮೈಸ್ ಮಾಡುವುದಿಲ್ಲ. ಈ ಕಾರಣಕ್ಕೆ ಪುನೀತ್ ಇವುಗಳನ್ನು ಹೆಚ್ಚು ಇಷ್ಟಪಡುತ್ತಿದ್ದರು.

ಲಾಕ್​ಡೌನ್ ಸಂದರ್ಭದಲ್ಲಿ ಪುನೀತ್ ರಾಜ್​ಕುಮಾರ್ ಅವರು ಫುಡ್​ಬ್ಲಾಗರ್​ಗಳ ವಿಡಿಯೋನ ಹೆಚ್ಚು ವೀಕ್ಷಿಸಿದ್ದರಂತೆ. ಕೊವಿಡ್ ಮುಗಿದ ತಕ್ಷಣ ಈ ಹೋಟೆಲ್​ಗಳಿಗೆ ಭೇಟಿ ನೀಡಬೇಕು ಎಂಬುದು ಅವರ ಆಲೋಚನೆ ಆಗಿತ್ತು. ‘ಕನ್ನಡದ ಕೋಟ್ಯಧಿಪತಿ’ ಶೋನಲ್ಲಿ ಅವರು ಈ ರೀತಿ ಫುಡ್ ಬಗ್ಗೆ ಅದೆಷ್ಟು ಬಾರಿ ಮಾತನಾಡಿದ್ದರೋ ಅದು ಲೆಕ್ಕಕ್ಕೇ ಇಲ್ಲ. ‘ನನ್ನ ತಂದೆ ರಾಜ್​ಕುಮಾರ್ ಅವರು ಯಾವಾಗಲೂ ಆಹಾರ ವೇಸ್ಟ್ ಮಾಡುತ್ತಿರಲಿಲ್ಲ. ಶೂಟಿಂಗ್ ಸಂದರ್ಭದಲ್ಲಿ ಬೇರೆ ಬೇರೆ ಕಡೆ ತೆರಳುತ್ತಿದ್ದರು. ನಾವು ಮೈಸೂರಿನವರು. ನಮಗೆ ಮುದ್ದೆ ಅಂದರೆ ಹೆಚ್ಚು ಇಷ್ಟ. ಆದಾಗ್ಯೂ ತಂದೆ ಇದ್ದಾಗ ವಾರದಲ್ಲಿ ಎರಡು ದಿನವಾದರೂ ಮನೆಯಲ್ಲಿ ಜೋಳದ ರೊಟ್ಟಿ ಮಾಡಲಾಗುತ್ತಿತ್ತು. ನಾವು ಎಲ್ಲಾ ರೀತಿಯ ತಿನಿಸುಗಳನ್ನು ಪ್ರಯತ್ನಿಸುತ್ತೇವೆ’ ಎಂದು ಪುನೀತ್ ಅವರು ಹೇಳಿದ್ದರು.

ಇದನ್ನೂ ಓದಿ: Puneeth Rajkumar: ಪುನೀತ್ ರಾಜ್​ಕುಮಾರ್ ಇಲ್ಲದೆ ಕಳೆಯಿತು ಎರಡು ವರ್ಷ; ಇನ್ನೂ ಕಡಿಮೆ ಆಗಿಲ್ಲ ದುಃಖ

ಪುನೀತ್ ರಾಜ್​ಕುಮಾರ್ ಅವರು ಎಂದಿಗೂ ವರ್ಕೌಟ್ ತಪ್ಪಿಸಿದವರಲ್ಲ. ಅವರು ಜಿಮ್​ನಲ್ಲಿ ಹೆಚ್ಚು ಹೊತ್ತು ಕಳೆಯುತ್ತಿದ್ದರು. ‘ನಾನು ಆಹಾರವನ್ನು ಎಂದಿಗೂ ಅವಾಯ್ಡ್ ಮಾಡಿಲ್ಲ. ಹೆಚ್ಚು ವರ್ಕೌಟ್ ಮಾಡಲು ಪ್ರಯತ್ನಿಸುತ್ತೇನೆ’ ಎಂದು ಅವರು ಹೇಳಿದ್ದರು. ಈ ಮೂಲಕ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದರು. ಪುನೀತ್ ರಾಜ್​ಕುಮಾರ್ ನಡೆಸಿಕೊಡುತ್ತಿದ್ದ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮಕ್ಕೆ ಒಮ್ಮೆ ಜಗ್ಗೇಶ್ ಆಗಮಿಸಿದ್ದರು. ಈ ವೇಳೆ ಅಪ್ಪು ಮಾತನಾಡಿದ್ದರು. ‘ನಾನು ರೋಡ್​ಸೈಡ್​ನಲ್ಲಿ ನಿಂತು ಪಾನೀಪುರಿ ತಿಂತೀನಿ. ಜನ ತೊಂದರೆ ಕೊಟ್ಟರೂ ನಾನು ತಲೆಕೆಡಿಸಿಕೊಳ್ಳಲ್ಲ. ನಾನು ಇಷ್ಟಪಡೋದನ್ನು ಬಿಟ್ಟುಕೊಡಲ್ಲ’ ಎಂದು ಹೇಳಿದ್ದರು. ಇದಕ್ಕೆ ಉತ್ತರಿಸಿದ್ದ ಜಗ್ಗೇಶ್ ಅವರು, ‘ನನಗೆ ಎಲ್ಲವೂ ಗೊತ್ತು. ಸಣ್ಣ ಅಂಗಡೀಲಿ ಟೀ ಕುಡಿದಿದ್ದನ್ನು ನಾನು ನೋಡಿದ್ದೀನಿ’ ಎಂದಿದ್ದರು ಜಗ್ಗೇಶ್.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ ಹುಟ್ಟುಹಬ್ಬವನ್ನು ಸ್ಪೂರ್ತಿ ದಿನವಾಗಿ ಆಚರಣೆ: ಸಿದ್ದರಾಮಯ್ಯ

ಪುನೀತ್​ ರಾಜ್​ಕುಮಾರ್ ಅವರು ಮೃತಪಟ್ಟ ನಂತರದಲ್ಲಿ ‘ಕಲರ್ಸ್ ಕನ್ನಡ’ ವಾಹಿನಿ ವಿಡಿಯೋ ಒಂದನ್ನು ಹಂಚಿಕೊಂಡಿತ್ತು. ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಅವರು ಆಹಾರದ ಬಗ್ಗೆ ಮಾತನಾಡಿದ್ದರು. ಈ ವೀಡಿಯೊ ಸಖತ್ ವೈರಲ್ ಆಗಿತ್ತು. ಈಗ ಅವರಿಲ್ಲ ಎಂಬ ನೋವು ಕಾಡುತ್ತಿದೆ. ಪುನೀತ್ ಅವರನ್ನು ಎಲ್ಲರೂ ನೆನಪಿಸಿಕೊಳ್ಳುತ್ತಿದ್ದಾರೆ. ‘ವಿ ಮಿಸ್ ಯೂ’ ಎನ್ನುವ ಪೋಸ್ಟ್ ಹಾಕುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.