‘ಪುನೀತ್​ ಆಸ್ಪತ್ರೆಗೆ ಬಂದಾಗ ಸಹಜವಾಗಿಯೇ ಇದ್ದರು’; ಹಾಗಿದ್ದರೆ ತಪ್ಪು ನಡೆದಿದ್ದೆಲ್ಲಿ? ವೈದ್ಯರು ವಿವರಿಸಿದ್ದು ಹೀಗೆ

| Updated By: ರಾಜೇಶ್ ದುಗ್ಗುಮನೆ

Updated on: Oct 31, 2021 | 5:27 PM

‘ಪುನೀತ್ ಅವರು ತಮ್ಮ ನಿಯಮಿತ ಜಿಮ್ ಸೆಷನ್ ಅನ್ನು ಪೂರ್ಣಗೊಳಿಸಿ, ನಂತರ ಬಾಕ್ಸಿಂಗ್ ಮತ್ತು ಸ್ಟೀಮ್ ಸೆಷನ್​ ಪೂರ್ಣಗೊಳಿಸಿದರು. ಇದಾದ ನಂತರ ಅವರಿಗೆ ತುಂಬಾನೇ ದಣಿವಾದಂತೆ ಭಾಸವಾಗಿತ್ತು.

‘ಪುನೀತ್​ ಆಸ್ಪತ್ರೆಗೆ ಬಂದಾಗ ಸಹಜವಾಗಿಯೇ ಇದ್ದರು’; ಹಾಗಿದ್ದರೆ ತಪ್ಪು ನಡೆದಿದ್ದೆಲ್ಲಿ? ವೈದ್ಯರು ವಿವರಿಸಿದ್ದು ಹೀಗೆ
ನಟ ಪುನೀತ್ ರಾಜಕುಮಾರ್
Follow us on

ಪುನೀತ್​ ರಾಜ್​ಕುಮಾರ್​ ಇಷ್ಟು ಸಣ್ಣ ವಯಸ್ಸಿನಲ್ಲಿ ಏಕಾಏಕಿ ಮೃತಪಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಬಹುಶಃ ಅವರು ಕೂಡ ಈ ಬಗ್ಗೆ ಕನಸಿನಲ್ಲೂ ಅಂದುಕೊಂಡಿರಲಿಕ್ಕಿಲ್ಲ. ಶುಕ್ರವಾರ (ಅಕ್ಟೋಬರ್​ 29) ಮುಂಜಾನೆ ಪುನೀತ್​ ಎರಡು ಗಂಟೆಗೂ ಅಧಿಕ ಕಾಲ ಜಿಮ್​ನಲ್ಲಿ ವರ್ಕೌಟ್​ ಮಾಡಿದ್ದರು ಎನ್ನಲಾಗಿದೆ. ತುಂಬಾನೇ ಸುಸ್ತು ಕಾಣಿಸಿಕೊಂಡಿದ್ದರಿಂದ ಅವರು ಮೊಟ್ಟ ಮೊದಲ ಬಾರಿಗೆ ಭೇಟಿಯಾಗಿದ್ದು ಫ್ಯಾಮಿಲಿ ಡಾಕ್ಟರ್​ ರಮಣ್ ರಾವ್​ ಅವರನ್ನು. ಆಗ ಪುನೀತ್​ ತುಂಬಾನೇ ಸಹಜವಾಗಿ ಕಾಣಿಸುತ್ತಿದ್ದರು ಎಂದು ಡಾ. ರಮಣ್​ ರಾವ್​ ಹೇಳಿದ್ದಾರೆ.

‘ಪುನೀತ್ ಅವರು ತಮ್ಮ ನಿಯಮಿತ ಜಿಮ್ ಸೆಷನ್ ಅನ್ನು ಪೂರ್ಣಗೊಳಿಸಿ, ನಂತರ ಬಾಕ್ಸಿಂಗ್ ಮತ್ತು ಸ್ಟೀಮ್ ಸೆಷನ್​ ಪೂರ್ಣಗೊಳಿಸಿದರು. ಇದಾದ ನಂತರ ಅವರಿಗೆ ತುಂಬಾನೇ ದಣಿವಾದಂತೆ ಭಾಸವಾಗಿತ್ತು. ತೀವ್ರ ಹೃದಯ ಸ್ತಂಭನದಿಂದ ಅವರು ಮೃತಪಟ್ಟಿರಬಹುದು. ಏಕಾಏಕಿ ಈ ರೀತಿ ಸಾವು ಸಂಭವಿಸುವ ಸಾಧ್ಯತೆ ದೈಹಿಕ ಚಟುವಟಿಕೆಯ ಸಮಯದಲ್ಲಿ, ಆಟ ಆಡುವ ಸಂದರ್ಭದಲ್ಲಿ ಅಥವಾ ದೈಹಿಕವಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಹೆಚ್ಚಿರುತ್ತದೆ. ಇದು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು’ ಎಂದಿದ್ದಾರೆ ರಮಣ್​.

‘ಪುನೀತ್ ಹೆಚ್ಚು ಶ್ರಮದಾಯಕ ವರ್ಕೌಟ್​ಗಳನ್ನು ಮಾಡಿರುವುದರಿಂದ ಅದು ಹೃದಯದ ಪರಿಧಮನಿ ಮತ್ತು  ಅಪಧಮನಿಗಳನ್ನು ಛಿದ್ರಗೊಳಿಸಿರಬಹುದು. ಹೀಗಾಗಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೃದಯ ಸ್ತಂಭನಕ್ಕೆ ಕಾರಣವಾಗಿರಬಹುದು ಎಂದು ವೈದ್ಯರು ಹೇಳಿದ್ದಾರೆ. ‘ಪುನೀತ್​ ಪತ್ನಿ ಅಶ್ವಿನಿಯೊಂದಿಗೆ ಬೆಳಗ್ಗೆ 11.15ರ ಸುಮಾರಿಗೆ ನಮ್ಮ ಆಸ್ಪತ್ರೆಗೆ ಬಂದರು. ಆಗ ಅವರ ಆರೋಗ್ಯ ತುಂಬಾ ಸಾಮಾನ್ಯವಾಗಿತ್ತು. ಪುನೀತ್ ಅವರು ನೋವಾಗುತ್ತಿದೆ ಎಂದು ಹೇಳಿರಲಿಲ್ಲ. ಇಸಿಜಿ ಮಾಡಿದಾಗ ಎನೋ ತಪ್ಪಾಗಿದೆ ಅನಿಸಿತು. ಪುನೀತ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಅಶ್ವಿನಿ ಅವರಿಗೆ ಸೂಚಿಸಿದೆ’ ಎಂಬುದಾಗಿ ಡಾ.ರಮಣ್​ ಹೇಳಿದ್ದಾರೆ.

‘ಐದು ನಿಮಿಷಗಳಲ್ಲಿ ವಿಕ್ರಂ ಆಸ್ಪತ್ರೆಗೆ ತಲುಪಿದ್ದೆವು’ ಎಂದು ಡಾ. ರಮಣ್​ ಹೇಳಿದ್ದಾರೆ. ಆದರೆ, ಆಗಲೇ ತಡವಾಗಿತ್ತು. ಪುನೀತ್ ಅವರಿಗೆ ಹೃದಯ ಸಂಬಂಧಿ ಕಾಯಿಲೆ, ಬಿಪಿ ಅಥವಾ ಮಧುಮೇಹ ಇರಲಿಲ್ಲ. ಅವರು ಸಂಪೂರ್ಣವಾಗಿ ಫಿಟ್ ಆಗಿದ್ದರು. ಪುನೀತ್ ಸಾಯುವ ಹಿಂದಿನ ರಾತ್ರಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ವೇಳೆಯೂ ಅವರು ತುಂಬಾನೇ ಸಹಜವಾಗಿದ್ದರು.

ಇದನ್ನೂ ಓದಿ: ಡಿಫರೆಂಟ್​ ಪಾತ್ರದಲ್ಲಿ ಪುನೀತ್​; ‘ಮಿಷನ್​ ಕೊಲಂಬಸ್​’ ಚಿತ್ರಕ್ಕಾಗಿ ಮಂಸೋರೆ ಕಂಡಿದ್ದ ಕನಸು ಭಗ್ನ

ಪುನೀತ್​ ರಾಜ್​ಕುಮಾರ್​ ಒಪ್ಪಿಕೊಂಡಿದ್ದ ಸಿನಿಮಾಗಳು ಯಾವವು? ಇಲ್ಲಿದೆ ಸಂಪೂರ್ಣ ಮಾಹಿತಿ