‘ಜೇಮ್ಸ್​’ ತಂಡದಿಂದ ಬಂಪರ್ ಆಫರ್​; ಒಂದು ವಾರ ಮೊದಲೇ ಟಿಕೆಟ್​ ಬುಕಿಂಗ್​ ಓಪನ್

‘ಜೇಮ್ಸ್​’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಮಾರ್ಚ್​ 17ರಂದು ತೆರೆಗೆ ಬರುತ್ತಿದೆ. ಈಗ ಒಂದು ವಾರ ಮೊದಲೇ ಬುಕಿಂಗ್​ ಓಪನ್​ ಮಾಡಲಾಗಿದೆ.

‘ಜೇಮ್ಸ್​’ ತಂಡದಿಂದ ಬಂಪರ್ ಆಫರ್​; ಒಂದು ವಾರ ಮೊದಲೇ ಟಿಕೆಟ್​ ಬುಕಿಂಗ್​ ಓಪನ್
Puneeth
Updated By: ರಾಜೇಶ್ ದುಗ್ಗುಮನೆ

Updated on: Mar 12, 2022 | 7:14 AM

ಪುನೀತ್​ ರಾಜ್​ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್​’ ಸಿನಿಮಾ (James Movie) ಮಾರ್ಚ್​ 17ರಂದು ತೆರೆಗೆ ಬರುತ್ತಿದೆ. ಅಂದು ಪುನೀತ್​ ರಾಜ್​ಕುಮಾರ್ ಬರ್ತ್​ಡೇ. ಈ ದಿನಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಹಲವು ಚಿತ್ರಮಂದಿರಗಳಲ್ಲಿ ಈಗಾಗಲೇ ಪುನೀತ್​ ಕಟೌಟ್​ ತಲೆ ಎತ್ತಿದೆ. ಈಗ ಚಿತ್ರತಂಡ ಅಭಿಮಾನಿಗಳಿಗೆ ಬಂಪರ್​ ಆಫರ್ ಒಂದನ್ನು ನೀಡಿದೆ. ಬೆಂಗಳೂರಿನಲ್ಲಿ ‘ಜೇಮ್ಸ್​’ ಸಿನಿಮಾದ ಮುಂಗಡ ಬುಕಿಂಗ್​ ಓಪನ್​ ಮಾಡಲಾಗಿದೆ. ಅಭಿಮಾನಿಗಳು ಮುಗಿಬಿದ್ದು ಟಿಕೆಟ್​ ಬುಕ್​ ಮಾಡುತ್ತಿದ್ದಾರೆ. ವಿಶ್ವಾದ್ಯಂತ 4 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ಈ ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡೋ ಸಾಧ್ಯತೆ ಇದೆ. ​

ಅಕ್ಟೋಬರ್​ 29ರಂದು ಪುನೀತ್​ ರಾಜ್​ಕುಮಾರ್ ನಿಧನ ಹೊಂದಿದ್ದರು. ಅದಾಗಲೇ ಅವರು ‘ಜೇಮ್ಸ್​’ ಸಿನಿಮಾ ಕೆಲಸಗಳನ್ನು ಬಹುತೇಕ ಪೂರ್ಣಗೊಳಿಸಿದ್ದರು. ಒಂದು ಹಾಡಿನ ಶೂಟಿಂಗ್​ ಮಾತ್ರ ಬಾಕಿ ಇತ್ತು. ಆದರೆ, ವಿಧಿಯಾಟವೇ ಬೇರೆ ಆಗಿತ್ತು. ಪುನೀತ್ ಅವರನ್ನು ದೇವರು ಬೇಗ ಕರೆಸಿಕೊಂಡರು. ಈಗ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಮಾರ್ಚ್​ 17ರಂದು ತೆರೆಗೆ ಬರುತ್ತಿದೆ. ಈಗ ಒಂದು ವಾರ ಮೊದಲೇ ಬುಕಿಂಗ್​ ಬಿಡಲಾಗಿದೆ.

ಈ ಮೊದಲು ‘ಜೇಮ್ಸ್​’ ಸಿನಿಮಾದ ಟೀಸರ್​ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಟೀಸರ್​ನಲ್ಲಿ ಪುನೀತ್​ ಸಖತ್​ ಮಾಸ್​ ಆಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ‘ಟ್ರೇಡ್​ಮಾರ್ಕ್​..’ ಸಾಂಗ್​ ರಿಲೀಸ್​ ಮಾಡಲಾಯಿತು. ಇದನ್ನು ನೋಡಿ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ. ಈ ಹಾಡು ಯೂಟ್ಯೂಬ್​ನಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಂಡಿದೆ.  ಈ ಎಲ್ಲಾ ಕಾರಣಕ್ಕೆ ಪುನೀತ್​ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ.

‘ಜೇಮ್ಸ್​’ ಸಿನಿಮಾದಲ್ಲಿ ಪುನೀತ್​ ಪಾತ್ರಕ್ಕೆ ಅವರ ಸಹೋದರ ಶಿವರಾಜ್​ಕುಮಾರ್ ಡಬ್​ ಮಾಡಿದ್ದಾರೆ. ಟೀಸರ್​ನಲ್ಲಿ ಇದರ ಝಲಕ್​ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಪ್ರೀ ರಿಲೀಸ್​ ಕಾರ್ಯಕ್ರಮ ನಡೆಸಲು ಚಿತ್ರತಂಡ ನಿರ್ಧರಿಸಿದೆ.

ಇದನ್ನೂ ಓದಿ: ‘ಈ ಥರ ಪ್ರಚಾರ ಯಾವ ಕಲಾವಿದರ ಜೀವನದಲ್ಲೂ ಬರಬಾರದು’: ‘ಜೇಮ್ಸ್​’ ಬಗ್ಗೆ ಚಿಕ್ಕಣ್ಣ ನೋವಿನ ನುಡಿ

ಪುನೀತ್​ ಫ್ಯಾನ್ಸ್​ ಕುತ್ತಿಗೆ ಮೇಲೆ ‘ಜೇಮ್ಸ್​’ ಟ್ಯಾಟೂ; ವೈರಲ್​ ಆಗ್ತಿದೆ ಅಭಿಮಾನದ ಫೋಟೋ

Published On - 4:22 pm, Thu, 10 March 22