Puneeth Rajkumar Birthday: ಪುನೀತ್ ಬರ್ತ್ಡೇಗೆ ಖುಷಿ ಸುದ್ದಿ; ರೀ ರಿಲೀಸ್ ಆಗ್ತಿದೆ ಈ ಸಿನಿಮಾ
‘ಜಾಕಿ’ ಚಿತ್ರ ಬಿಡುಗಡೆ ಆಗಿದ್ದು 2010ರಲ್ಲಿ. ಈ ಸಿನಿಮಾನ ದುನಿಯಾ ಸೂರಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಪುನೀತ್ಗೆ ಜೊತೆಯಾಗಿ ನಟಿಸಿದ್ದು ಭಾವನಾ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲೂ ಉತ್ತಮ ಗಳಿಕೆ ಮಾಡಿತ್ತು. ಈ ಚಿತ್ರವನ್ನು ಪುನೀತ್ ತಾಯಿ ಪಾರ್ವತಮ್ಮ ರಾಜ್ಕುಮಾರ್ ಅವರು ನಿರ್ಮಾಣ ಮಾಡಿದ್ದರು.
ಪುನೀತ್ ರಾಜ್ಕುಮಾರ್ (Puneeth Rajkumar) ಅವರು ನಮ್ಮೊಂದಿಗೆ ಇಲ್ಲ. ಅವರನ್ನು ನಿತ್ಯ ನೆನಪಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಮಾರ್ಚ್ 17ರಂದು ಅವರ ಬರ್ತ್ಡೇ. ಅವರು ಇಲ್ಲದೇ ಅಭಿಮಾನಿಗಳು ಮೂರನೇ ಬಾರಿಗೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ಬಾರಿ ಅವರ ಜನ್ಮದಿನಕ್ಕೆ ಒಂದು ವಿಶೇಷತೆ ಇರುತ್ತದೆ. ಈ ಬಾರಿಯೂ ಪುನೀತ್ ಬರ್ತ್ಡೇಗೆ ಒಂದು ವಿಶೇಷತೆ ಇದೆ. ಅವರ ನಟನೆಯ ‘ಜಾಕಿ’ ಸಿನಿಮಾ ರೀ-ರಿಲೀಸ್ ಆಗುತ್ತಿದೆ.
‘ಜಾಕಿ’ ಸಿನಿಮಾ ರಿಲೀಸ್ ಆಗಿದ್ದು 2010ರಲ್ಲಿ. ಈ ಚಿತ್ರವನ್ನು ದುನಿಯಾ ಸೂರಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಪುನೀತ್ಗೆ ಜೊತೆಯಾಗಿ ನಟಿಸಿದ್ದು ಭಾವನಾ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲೂ ಉತ್ತಮ ಗಳಿಕೆ ಮಾಡಿತ್ತು. ಈ ಚಿತ್ರವನ್ನು ಪುನೀತ್ ತಾಯಿ ಪಾರ್ವತಮ್ಮ ರಾಜ್ಕುಮಾರ್ ಅವರು ನಿರ್ಮಾಣ ಮಾಡಿದ್ದರು. ವಿ. ಹರಿಕೃಷ್ಣ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾ ಈಗ ರೀ ರಿಲೀಸ್ ಆಗುತ್ತಿದೆ.
‘ಜಾಕಿ’ ಚಿತ್ರವನ್ನು ಅಪ್ಗ್ರೇಡ್ ಮಾಡುವ ಕೆಲಸ ನಡೆಯುತ್ತಿದೆ. 4K ರೀ ಮಾಸ್ಟರ್ಡ್ ವರ್ಷನ್ನಲ್ಲಿ ಸಿನಿಮಾ ಮರುಬಿಡುಗಡೆ ಆಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಪುನೀತ್ ಬರ್ತ್ಡೇ ದಿನ ಅನ್ನದಾನ, ರಕ್ತದಾನ ಮತ್ತು ನೇತ್ರಾದಾನ ಮಾಡಲು ಫ್ಯಾನ್ಸ್ ಸಿದ್ದತೆ ಮಾಡಿಕೊಂಡಿದ್ದಾರೆ. ಈ ಸಿನಿಮಾ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.
“64 ವಿದ್ಯೆಗೆಲ್ಲ ಇರೋದೊಬ್ರೆ ನಮ್ಮ ಬಾಸು” 👑🫡#DrPuneethRajkumar #Jackie #Jackie4KRelease #JackieRerelease #PuneethRajkumar #AppuBoss #PuneethRajkumarLivesOn pic.twitter.com/0cfKXwOEWY
— Nimma Pradeepa (@nimma_pradeepa_) February 26, 2024
‘ಜಾಕಿ’ ಸಿನಿಮಾದಲ್ಲಿ ಮಧ್ಯಮವರ್ಗದ ಯುವಕನಾಗಿ ಪುನೀತ್ ಕಾಣಿಸಿಕೊಂಡಿದ್ದಾರೆ. ಹಳ್ಳಿಯಲ್ಲಿ ರಿಯಲ್ ಎಸ್ಟೇಟ್ ಮಾಡೋ ಜಾಕಿ (ಪುನೀತ್ ರಾಜ್ಕುಮಾರ್) ಅನಿವಾರ್ಯವಾಗಿ ಸಿಟಿಗೆ ತೆರಳುತ್ತಾನೆ. ಅಲ್ಲಿಂದ ಸಿನಿಮಾದ ಕಥೆ ಶುರುವಾಗುತ್ತದೆ. ಈ ಚಿತ್ರವನ್ನು ಅಪ್ಗ್ರೇಡ್ ವರ್ಷನ್ನಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ: ಅಪ್ಪು ಸ್ಮಾರಕಕ್ಕೆ ನಮಿಸಲು ಬಂದ ಅಭಿಮಾನಿಗಳ ದಂಡು
ಪುನೀತ್ ರಾಜ್ಕುಮಾರ್ 2021ರ ಅಕ್ಟೋಬರ್ನಲ್ಲಿ ಮೃತಪಟ್ಟರು. 2022ರ ಮಾರ್ಚ್ 17ರಂದು ಅವರು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’ ರಿಲೀಸ್ ಆಯಿತು. ಈಗ 2024ರಲ್ಲಿ ‘ಜಾಕಿ’ ಚಿತ್ರ ಥಿಯೇಟರ್ನಲ್ಲಿ ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ