ತೆಲುಗು ಸ್ಟಾರ್​ ನಟನ ಎದುರು ಪುನೀತ್​ ಬಾಕ್ಸ್​ ಆಫೀಸ್​ ವಾರ್​! ಯುವರತ್ನ ಚಿತ್ರದ ಎದುರಾಳಿ ಯಾರು?

ಕನ್ನಡ ಸಿನಿಮಾಗಳು ಕರ್ನಾಟಕದ ಗಡಿದಾಡಿ ಅಬ್ಬರಿಸುತ್ತಿವೆ. ಪರಭಾಷೆಯ ಸ್ಟಾರ್​ ನಟರ ಎದುರು ಸ್ಯಾಂಡಲ್​ವುಡ್​ ಹೀರೋಗಳು ಹಣಾಹಣಿ ನಡೆಸಬೇಕಿದೆ.

ತೆಲುಗು ಸ್ಟಾರ್​ ನಟನ ಎದುರು ಪುನೀತ್​ ಬಾಕ್ಸ್​ ಆಫೀಸ್​ ವಾರ್​! ಯುವರತ್ನ ಚಿತ್ರದ ಎದುರಾಳಿ ಯಾರು?
ಪುನೀತ್​ ರಾಜ್​ಕುಮಾರ್​
Edited By: ಆಯೇಷಾ ಬಾನು

Updated on: Mar 17, 2021 | 6:33 AM

ಚಂದನವನದಲ್ಲೀಗ ಪ್ಯಾನ್​ ಇಂಡಿಯಾ ಸಿನಿಮಾಗಳ ಟ್ರೆಂಡ್​ ಹೆಚ್ಚುತ್ತಿದೆ. ಕನ್ನಡದ ಜೊತೆ ಬೇರೆ ಭಾಷೆಗಳಿಗೆ ಡಬ್​ ಮಾಡಿ ಬಿಡುಗಡೆ ಮಾಡುವ ಸೂತ್ರಕ್ಕೆ ನಿರ್ಮಾಪಕರು ಗಂಟು ಬಿದ್ದಿದ್ದಾರೆ. ಪುನೀತ್​ ರಾಜ್​ಕುಮಾರ್​ ನಟನೆಯ ‘ಯುವರತ್ನ’ ಸಿನಿಮಾ ಕೂಡ ಟಾಲಿವುಡ್​ ಮಂದಿಗೆ ಪೈಪೋಟಿ ನೀಡಲು ಸಜ್ಜಾಗಿದೆ.

ಕನ್ನಡದ ಸ್ಟಾರ್​ ನಟರ ಚಿತ್ರಗಳು ತಮಿಳು, ತೆಲುಗಿಗೆ ಡಬ್​ ಆಗುತ್ತಿವೆ. ಇತ್ತೀಚೆಗೆ ‘ಪೊಗರು’ ಸಿನಿಮಾ ಈ ಮಾರ್ಗ ಅನುಸರಿಸಿತ್ತು. ರಾಬರ್ಟ್​ ಚಿತ್ರ ತೆಲುಗಿನಲ್ಲೂ ಬಿಡುಗಡೆ ಆಯಿತು. ಹಾಗೆಯೇ ಯುವರತ್ನ ಸಿನಿಮಾ ಸಹ ತೆಲುಗಿಗೆ ಡಬ್​ ಆಗಿದೆ. ಏಪ್ರಿಲ್​ 1ರಂದು ಈ ಚಿತ್ರದ ಕನ್ನಡ ಮತ್ತು ತೆಲುಗು ವರ್ಷನ್​ ತೆರೆ ಕಾಣಲಿದೆ. ಕರ್ನಾಟಕದಲ್ಲಿ ಪುನೀತ್​ಗೆ ಯಾರೂ ಪೈಪೋಟಿ ನೀಡುತ್ತಿಲ್ಲ. ಆದರೆ ಆಂಧ್ರ ಮತ್ತು ತೆಲಂಗಾಣದಲ್ಲಿ ಗಲ್ಲಾ ಪೆಟ್ಟಿಗೆ ಸಮರ ಖಂಡಿತಾ ಆಗಲಿದೆ.

ಏ.1ರಂದು ‘ಯುವರತ್ನ’ ತೆರೆಕಂಡರೆ, ಮರುದಿನವೇ (ಏ.2) ತೆಲುಗಿನ ‘ವೈಲ್ಡ್​ ಡಾಗ್​​’ ಚಿತ್ರ ಬಿಡುಗಡೆ ಆಗಲಿದೆ. ಆ ಸಿನಿಮಾದಲ್ಲಿ ಅಕ್ಕಿನೇನಿ ನಾಗಾರ್ಜುನ ಹೀರೋ. ಸಸ್ಪೆನ್ಸ್​ ಥ್ರಿಲ್ಲರ್​ ಮಾದರಿಯಲ್ಲಿ ಈ ಚಿತ್ರ ಮೂಡಿಬಂದಿದೆ. ಭಯೋತ್ಪಾದಕ ನಿಗ್ರಹ ದಳದ ಆಫೀಸರ್​ ಆಗಿ ನಾಗಾರ್ಜುನ ನಟಿಸಿದ್ದಾರೆ. ದಿಯಾ ಮಿರ್ಜಾ, ಅತುಲ್​ ಕುಲಕರ್ಣಿ ಮುಂತಾದ ಖ್ಯಾತ ಕಲಾವಿದರು ಸಾಥ್​ ನೀಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್​ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

ಕನ್ನಡದ ಸಿನಿಮಾಗಳಿಗೆ ಆಂಧ್ರ ಮತ್ತು ತೆಲಂಗಾಣದಲ್ಲಿ ಈಗ ಚಿತ್ರಮಂದಿರಗಳು ಸಿಗುತ್ತಿವೆ. ಆದರೆ ಅಲ್ಲಿನ ಸ್ಟಾರ್​ ನಟರ ಚಿತ್ರಗಳ ಜೊತೆ ಕನ್ನಡ ಸಿನಿಮಾಗಳು ಪೈಪೋಟಿ ನೀಡಬೇಕು. ಈಗ ಏಪ್ರಿಲ್​ ಮೊದಲ ವಾರದಲ್ಲಿ ನಾಗಾರ್ಜುನ ನಟನೆಯ ವೈಲ್ಡ್​ ಡಾಗ್​ ಚಿತ್ರದ ಎದುರು ಯುವರತ್ನ ಸಿನಿಮಾ ಸ್ಪರ್ಧಿಸಬೇಕಿದೆ.

ಇದನ್ನೂ ಓದಿ: ಬೆಟ್ಟದಷ್ಟು ಆಸೆ ಇಟ್ಟುಕೊಂಡಿದ್ದ ಪುನೀತ್​ ಫ್ಯಾನ್ಸ್​ಗೆ ಭಾರೀ ನಿರಾಸೆ! ಆದರೂ ಒಂದು ಗುಡ್​ ನ್ಯೂಸ್​

Puneeth Rajkumar: ಯುವರತ್ನ ರಿಲೀಸ್​ಗೂ ಮುನ್ನವೇ ಧಾರಾವಾಹಿ ಕಡೆಗೆ ಗಮನ ಹರಿಸಿದ ಪುನೀತ್​ ರಾಜ್​ಕುಮಾರ್​! ಅಭಿಮಾನಿಗಳಿಗೆ ಸರ್ಪ್ರೈಸ್​

Published On - 6:29 am, Wed, 17 March 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us