ಇಂದು (ಮಾರ್ಚ್ 17) ಪುನೀತ್ ರಾಜ್ಕುಮಾರ್ ಅವರ ಜನ್ಮದಿನ. ಅವರು ಬದುಕಿದ್ದರೆ ಇಂದು ನಮ್ಮ ಜೊತೆ ಅವರು 50ನೇ ವರ್ಷದ ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿದ್ದರು. ಆದರೆ, ಇಂದು ಅವರು ನಮ್ಮ ಜೊತೆ ಇಲ್ಲ ಎಂಬುದು ನೋವಿನ ಸಂಗತಿ. ಈ ನೋವು ಎಂದಿಗೂ ಮರೆಯಾಗುವಂಥದ್ದು ಅಲ್ಲ. ಪುನೀತ್ (Puneeth Rajkumar) ಅವರು ಕೇವಲ ನಟನಲ್ಲ. ಅವರು ಒಳ್ಳೆಯ ಉದ್ಯಮಿಯೂ ಆಗಿದ್ದರು. ಅವರಿಗೆ ಬಿಸ್ನೆಸ್ನಲ್ಲಿ ಒಳ್ಳೆಯ ಹಿಡಿತ ಇತ್ತು ಎಂದೇ ಹೇಳಬಹುದು. ಅವರು ಈ ಮೊದಲು ಗ್ರಾನೈಟ್ ಬಿಸ್ನೆಸ್ ಮಾಡುತ್ತಿದ್ದರು. ಇದನ್ನು ಮಾಡದಂತೆ ರಾಜ್ಕುಮಾರ್ ಕೋರಿದ್ದರಂತೆ.
ಅಪ್ಪು ಅವರು ಉದ್ಯಮದ ಕಡೆಗೂ ಆಸಕ್ತಿ ಹೊಂದಿದ್ದರು. ಅವರಿಗೆ ಮೊದಲು ನಟನಾಗಬೇಕು ಎನ್ನುವ ಆಸಕ್ತಿಯೇ ಇರಲಿಲ್ಲ. ಅವರಿಗೆ ಉದ್ಯಮಿ ಆಗಬೇಕು ಎಂಬ ಆಸೆ ಇತ್ತು. ಅವರು ‘ಪಿಆರ್ಕೆ’ ನಿರ್ಮಾಣ ಸಂಸ್ಥೆ ಈಗಲೂ ಕಾರ್ಯನಿರ್ವಹಿಸುತ್ತಿದೆ. ಪುನೀತ್ ರಾಜ್ಕುಮಾರ್ ಗ್ರಾನೈಟ್ ಬಿಸ್ನೆಸ್ ಮಾಡುತ್ತಿದ್ದರು. ಹೀಗಾಗಿ ರಾಜ್ಕುಮಾರ್ನ ವೀರಪ್ಪನ್ ಅರೆಸ್ಟ್ ಮಾಡಿದ್ದರು ಎಂದು ಕೆಲವರು ಹೇಳಿದ್ದರು.
‘ನಮ್ಮ ತಂದೆ ರಾಜ್ಕುಮಾರ್ ಅರೆಸ್ಟ್ ಆದ ಬಳಿಕ ಕೆಲವು ರೀತಿಯ ಸುದ್ದಿಗಳು ಹರಿದಾಡಿದ್ದವು. ಆಗ ನಾನು ಗ್ರಾನೈಟ್ ಬಿಸ್ನೆಸ್ ಮಾಡುತ್ತಿದ್ದೆ. ಈ ಕಾರಣದಿಂದಲೇ ತಂದೆಯವರು ವೀರಪ್ಪನ್ನಿಂದ ಕಿಡ್ನ್ಯಾಪ್ ಆದರು ಎಂಬ ಸುದ್ದಿ ಹರಿದಾಡಿತ್ತು. ಈ ರೀತಿ ಹಲವು ಸುದ್ದಿಗಳು ಹುಟ್ಟಿಕೊಂಡವು’ ಎಂದಿದ್ದರು ಪುನೀತ್.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ 50ನೇ ವರ್ಷದ ಜನ್ಮದಿನ; ಎಂದಿಗೂ ಕಮ್ಮಿ ಆಗಲ್ಲ ಅಪ್ಪು ಮೇಲಿನ ಅಭಿಮಾನ
‘ನಾನು ಮಾಡುತ್ತಿದ್ದ ಗ್ರಾನೈಟ್ ಬಿಸ್ನೆಸ್ ಅಕ್ರಮ ಗ್ರಾನೈಟ್ ಬಿಸ್ನೆಸ್ ಎಂದು ನನ್ನ ಫೋಟೋ ಪೇಪರ್ನಲ್ಲಿ ಬಂದಿತ್ತು. ಅದು ನನಗೆ ಬೇಸರ ಮೂಡಿಸಿತ್ತು. ಇದು ಅಕ್ರಮವಾಗಿದ್ದರೆ ಕಾನೂನು ಇದೆ. ಹೊರಗಡೆ ಇದ್ದವರು ಕಮೆಂಟ್ ಮಾಡೋದೇಕೆ ಎಂದು ನನ್ನ ಮನಸ್ಸಿಗೆ ಅನಿಸಿತ್ತು. ನಾನು ಬಿಸ್ನೆಸ್ ಮಾಡ್ತಾ ಇದ್ದಿದ್ದು ಕನಕಪುರದಲ್ಲಿ. ಕುಟುಂಬದವರಿಗೆ ಸತ್ಯ ಏನು ಎಂಬುದು ಗೊತ್ತಿತ್ತು’ ಎಂದಿದ್ದರು ಪುನೀತ್. ಈ ರೀತಿಯ ಸುದ್ದಿಯಿಂದ ಬೇಸರಗೊಂಡಿದ್ದ ರಾಜ್ಕುಮಾರ್ ಅವರು ಒಮ್ಮೆ ಪುನೀತ್ಗೆ ಇದೆಲ್ಲ ನಿಲ್ಲಿಸುವಂತೆ ಕೋರಿಕೊಂಡಿದ್ದರು.
ಪುನೀತ್ ಕೆಲವು ಸಂದರ್ಶನಗಳಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಹುಟ್ಟುಕೊಂಡಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:30 am, Mon, 17 March 25