
ಸುಕುಮಾರ್ (Sukumar) ನಿರ್ದೇಶನ ಅನೇಕ ಸಿನಿಮಾಗಳು ಬ್ಲಾಕ್ಬಸ್ಟರ್ ಆಗಿವೆ. ಅದರಲ್ಲೂ ‘ಪುಷ್ಪ 2’ ಚಿತ್ರ ಮಾಡಿರೋ ದಾಖಲೆಗಳು ಒಂದೆರಡಲ್ಲ. ಸುಕುಮಾರ್ ನಿರ್ದೇಶನ ಚಿತ್ರದ ಚಿತ್ರಕಥೆ ಸಾಕಷ್ಟು ಮೆಚ್ಚುಗೆ ಪಡೆಯುವ ರೀತಿಯಲ್ಲಿ ಇರುತ್ತವೆ. ಇದಕ್ಕೆ ಕಾರಣ ಕನ್ನಡದ ಚಿತ್ರಗಳು ಎಂದು ಸುಕುಮಾರ್ ಅವರು ರಿವೀಲ್ ಮಾಡಿದ್ದಾರೆ. ಈ ವಿಚಾರ ಅನೇಕರಿಗೆ ಅಚ್ಚರಿ ಮೂಡಿಸಿದೆ. ತೆಲುಗು ವೇದಿಕೆ ಮೇಲೆಯೇ ಅವರು ಈ ವಿಚಾರ ಹೇಳಿಕೊಂಡಿದ್ದು ಮತ್ತೊಂದು ವಿಶೇಷ.
ಸಾಮಾನ್ಯವಾಗಿ ಎಲ್ಲಾ ನಿರ್ದೇಶಕರು ಮತ್ತೋರ್ವ ನಿರ್ದೇಶಕನಿಂದ ಸ್ಫೂರ್ತಿ ಪಡೆಯುತ್ತಾರೆ. ಅದೇ ರೀತಿ ಸುಕುಮಾರ್ ಅವರು ಉಪೇಂದ್ರ ಹಾಗೂ ಅವರು ಮಾಡಿರೋ ಸಿನಿಮಾಗಳಿಂದ ಸ್ಫೂರ್ತಿ ಪಡೆದು ಚಿತ್ರಕಥೆ ಬರೆಯುತ್ತಿದ್ದಾರೆ. ಇದನ್ನು ಅವರು ಯಾವುದೇ ಅಂಜಿಕೆ ಇಲ್ಲದೆ ಹೇಳಿದ್ದಾರೆ. ಈ ರಹಸ್ಯವನ್ನು ರಿವೀಲ್ ಮಾಡಿದ್ದು ಸಾಕಷ್ಟು ಜನರಿಗೆ ಅಚ್ಚರಿ ಮೂಡಿಸಿದೆ.
ಅರ್ಜುನ್ ಸರ್ಜಾ ನಿರ್ದೇಶನದ ‘ಸೀತಾ ಪಯಣಂ’ ಚಿತ್ರದಲ್ಲಿ ಅವರ ಮಗಳು ಐಶ್ವರ್ಯಾ ಅರ್ಜುನ್ ನಟಿಸುತ್ತಿದ್ದಾರೆ. ಈ ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ಸುಕುಮಾರ್ ಹಾಗೂ ಕನ್ನಡದ ನಟ ಉಪೇಂದ್ರ ಅತಿಥಿಯಾಗಿ ಆಗಮಿಸಿದ್ದರು. ತಮ್ಮ ಚಿತ್ರಗಳಿಗೆ ಸ್ಫೂರ್ತಿಯಾಗಿರೋ ಉಪೇಂದ್ರ ಅವರನ್ನು ನೋಡಿ ಸುಕುಮಾರ್ ಸಂತೋಷಗೊಂಡರು ಮತ್ತು ಮನಸ್ಸಿನ ಮಾತನ್ನು ಆಡಿದರು.
Director Sukumar about Uppi 🐐🔥#Upendra #Sukumar #Sandalwood #KFI #Pushpa2 pic.twitter.com/pYWKOCBjmV
— 𝐑𝐞𝐯𝐚𝐧𝐭𝐡 (@ImRevanthRaj) May 28, 2025
‘ಅಷ್ಟು ಮ್ಯಾಡ್ ನಿರ್ದೇಶಕನ ಮತ್ತೋರ್ವನನ್ನು ನೋಡಿಲ್ಲ. ಎ, ಓಂ, ಉಪೇಂದ್ರ ಈ ಮೂರು ಸಿನಿಮಾ ಮಾಡಿದ ಯಾವುದೇ ನಿರ್ದೇಶಕನಾದರೂ ನಿವೃತ್ತಿ ಪಡೆಯುತ್ತಿದ್ದರು. ನಾನಾಗಿದ್ದರೆ ಖಂಡಿತವಾಗಿಯೂ ನಿವೃತ್ತಿ ಪಡೆಯುತ್ತಿದೆ. ಅಂತ ಕಲ್ಟ್ ಸಿನಿಮಾಗಳು ಅವು. ನನ್ನ ಸಿನಿಮಾಗಳ ಚಿತ್ರಕಥೆ ಇಷ್ಟು ಅದ್ಭುತವಾಗಿ ಇರುತ್ತದೆ ಎಂದರೆ ಅದಕ್ಕೆ ಕಾರಣ ಆ ಮೂರು ಕಲ್ಟ್ ಚಿತ್ರಗಳು. ನಿಮ್ಮಿಂದ ಆ ವಿಚಾರವನ್ನು ಕದ್ದಿದ್ದೇನೆ. ನಿಮ್ಮ ಜೊತೆ ವೇದಿಕೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಖುಷಿ ಇದೆ’ ಎಂದಿದ್ದಾರೆ. ಅಲ್ಲದೆ, ಯಾವುದೇ ನಾಚಿಕೆ ಇಲ್ಲದೆ ನಿಮ್ಮಿಂದ ವಿಷಯಗಳನ್ನು ಸ್ಫೂರ್ತಿ ಪಡೆಯುತ್ತೇನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಎ ಹಾಗೂ ಓಂ ಚಿತ್ರವನ್ನು ನಾನು ಮಾಡಿದ್ದರೆ ಈಗಾಗಲೇ ನಿವೃತ್ತಿ ಪಡೆದಿರುತ್ತಿದ್ದೆ’; ‘ಪುಷ್ಪ’ ನಿರ್ದೇಶಕ ಸುಕುಮಾರ್
ಉಪೇಂದ್ರ ಅವರು ‘ಓಂ’, ‘ಉಪೇಂದ್ರ’ ಹಾಗೂ ‘ಎ’ ಚಿತ್ರಗಳನ್ನು ನಿರ್ದೇಶನ ಮಾಡಿ ಫೇಮಸ್ ಆದವರು. ಇದಲ್ಲದೆ, ‘ತರ್ಲೆ ನನ್ಮಗ’, ‘ಶ್’ ರೀತಿಯ ಚಿತ್ರಗಳನ್ನು ಕೂಡ ಅವರು ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.