AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬರೀಷ್​ಗೆ ಅನೇಕ ಮಹಾಪುರುಷರ ಗುಣ ಇದೆ ಎಂದಿದ್ದ ರಜನಿಕಾಂತ್

Ambareesh Birthday: ರಜನಿಕಾಂತ್ ಅವರು ಅಂಬರೀಶ್ ಅವರನ್ನು ಮಹಾಪುರುಷರ ಸಾಲಿಗೆ ಸೇರಿಸಿ, ಅವರಲ್ಲಿನ ವಿವಿಧ ಗುಣಗಳನ್ನು ಹೋಲಿಸಿ ಹೇಳಿದ್ದರು. ರಾಮ, ಕೃಷ್ಣ, ಭೀಮ, ದುರ್ಯೋಧನನ ಗುಣಗಳು ಅಂಬರೀಶ್‌ರಲ್ಲಿದ್ದವು ಎಂದು ಅವರು ಹೇಳಿದ್ದರು. ಅವರ ಗೆಳೆತನ, ಉದಾರತೆ, ಮತ್ತು ಜೀವನದ ಬಗೆಗಿನ ಅವರ ಸಕಾರಾತ್ಮಕ ದೃಷ್ಟಿಕೋನವನ್ನು ರಜನಿಕಾಂತ್ ಪ್ರಶಂಸಿಸಿದ್ದರು.

ಅಂಬರೀಷ್​ಗೆ ಅನೇಕ ಮಹಾಪುರುಷರ ಗುಣ ಇದೆ ಎಂದಿದ್ದ ರಜನಿಕಾಂತ್
ಅಂಬರೀಷ್​-ರಜಿನಿ
 ಶ್ರೀಲಕ್ಷ್ಮೀ ಎಚ್
| Edited By: |

Updated on:May 30, 2025 | 8:45 AM

Share

ಅಂಬರೀಷ್ (Ambareesh) ಅವರಿಗೆ ಇಂದು (ಮೇ 29) ಜನ್ಮದಿನ. ಅವರ ಜನ್ಮದಿನವನ್ನು ಸೋಶಿಯಲ್ ಮೀಡಿಯಾ ಮೂಲಕ ನೆನಪಿಸಿಕೊಳ್ಳಲಾಗುತ್ತಿದೆ. ಅವರು ಇಲ್ಲ ನೋವು ಬಹುವಾಗಿ ಕಾಡಿದೆ. ಅವರ ಹೆಸರಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಕೂಡ ಮಾಡಲಾಗುತ್ತಿದೆ. ಅಂಬರೀಷ್ ಓರ್ವ ಖ್ಯಾತ ನಟರಾಗಿದ್ದರು. ಪರಭಾಷೆಯವರೂ ಅಂಬರೀಷ್​ಗೆ ಅಭಿಮಾನಿ ಆಗಿದ್ದರು. ರಜನಿಕಾಂತ್ ಹಾಗೂ ಅಂಬರೀಷ್ ಮಧ್ಯೆ ಗೆಳೆತನ ಇತ್ತು. ಆ ಬಗ್ಗೆ ಅವರು ಅನೇಕ ಬಾರಿ ಹೇಳಿಕೊಂಡಿದ್ದರು. ವೇದಿಕೆ ಮೇಲೆ ಅಂಬರೀಷ್​ನ ಹೊಗಳುವ ಕೆಲಸ ಮಾಡಿದ್ದರು. ಆ ಸಂದರ್ಭವನ್ನು ಈಗ ನೆನಪಿಸಿಕೊಳ್ಳೋಣ.

‘ಎಲ್ಲಾ ಭಾಷೆಯವರಿಗೂ ಅಂಬರೀಷ್ ಗೊತ್ತಿತ್ತು. ಅಂಬರೀಷ್ ಮಹಾ ಪುರುಷರ ಅಂಶ ಇದೆ. ರಾಮನ ಅಂಶ ಇದೆ, ಕೃಷ್ಣ, ಭೀಮ, ದುರ್ಯೋಧನನ ಅಂಶ ಇದೆ’ ಎಂದ ಅವರು ‘ಶಕುನಿಯ ಅಂಶ..’ ಎಂದು ಮಾತು ನಿಲ್ಲಿಸಿದರು. ಆಗ ಎಲ್ಲರೂ ಚಪ್ಪಾಳೆ ತಟ್ಟಿದ್ದನ್ನು ವಿಡಿಯೋದಲ್ಲಿ ಕಾಣಬಹುದು.

‘ಸಿನಿಮಾ ಜಗತ್ತಿಗೆ ಅವನು ಪಾಳೆಗಾರ. ಏನೇ ಕಷ್ಟ ಬಂದರೂ ನಿಲ್ಲುತ್ತಾನೆ. ಕರ್ಣನ ಅಂಶ ಅವನಲ್ಲಿ ಅಷ್ಟಿದೆ. ಭೀಮನ ಅಂಶವೂ ಇದೆ. ಅವರ ಮನೆಗೆ ಕೈಮಾ ಹಾಗೂ ಬಿರಿಯಾನಿ ತೊನ್ನೋಕೂ ಹೋಗೋದು. ಅವನು ದುರ್ಯೋಧನ. ಅವನು ಕಿಂಗ್. ಎಲ್ಲ ವಿಚಾರವೂ ಅವನಿಗೆ ಗೊತ್ತಿದೆ. ಸಿಗರೇಟ್ ಬಿಟ್ಟು ಬಿಡಿ ಎಂದು ನಾನು ಹೇಳಿದ್ದೇನೆ. ಆದರೆ, ಅವನು ದುರ್ಯೋಧನ. ಅವನೇ ಬಿಡಬೇಕು’ ಎಂದಿದ್ದರು ಅವರು.

ಇದನ್ನೂ ಓದಿ
Image
ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದು ಕರೆದ ಅಭಿಮಾನಿ; ನಟಿಯ ಪ್ರತಿಕ್ರಿಯೆ ಏನು?
Image
ಕಿಚ್ಚ ಸುದೀಪ್-ರಾಜೇಶ್ ಕೃಷ್ಣನ್ ಹಾಡಿನ್ ಜುಗಲ್​ಬಂದಿ; ಅಪರೂಪದ ವಿಡಿಯೋ
Image
ಎ,ಓಂ ಚಿತ್ರವನ್ನು ನಾನು ಮಾಡಿದ್ದರೆ ನಿವೃತ್ತಿ ಪಡೆಯುತ್ತಿದ್ದೆ; ಸುಕುಮಾರ್
Image
ಪವನ್ ಕಲ್ಯಾಣ್ ನಟನೆಯ ‘ಒಜಿ’ ಚಿತ್ರಕ್ಕೆ ಸೊಳ್ಳೆ ಕಾಟ; ಶೂಟಿಂಗ್ ಸ್ಥಗಿತ

‘ನಾನು ಅಂಬರೀಷ್ ಜೊತೆ ಹೆಚ್ಚು ಸಿನಿಮಾ ಮಾಡಿರಲಿಲ್ಲ. 30 ದಿನ ಸಿಂಗಾಪುರ್​ನಲ್ಲಿ ಇದ್ದೆ. ಆ ಗೆಳೆತನ ಈಗಲೂ ಇದೆ. ಅವನಿಗಿಂತ ಹಣ ಎಷ್ಟೋ ಜನ ಇದ್ದಾರೆ. ಅವನಿಗೆ ಇರುವಷ್ಟು ಗೆಳೆತನ ಯಾರಿಗೂ ಇಲ್ಲ. ಅವನ ಬಳಿ ಇರೋ ಪಾಸಿಟಿವ್ ಅಂಶವೇ ಇದಕ್ಕೆ ಕಾರಣ. ಅವರು ಯಾವಾಗಲೂ ಇವತ್ತಿಗೆ ಬಾಳುತ್ತಾನೆ. ಇದಕ್ಕೆ ಅವನು ಚಿನ್ನದ ಮನುಷ್ಯ’ ಎಂದಿದ್ದರು ರಜನಿ.

ಇದನ್ನೂ ಓದಿ: ‘ಒಡಹುಟ್ಟಿದವರು’ ಸಿನಿಮಾ ಮಾಡಲು ರಾಜ್​ಕುಮಾರ್​ಗೆ ಎರಡು ಷರತ್ತು ಹಾಕಿದ್ದ ಅಂಬರೀಷ್

ಅಂಬರೀಷ್ ಅವರು 1952 ಮೇ 29ರಂದು ಜನಿಸಿದರು.  2018ರ ನವೆಂಬರ್ 24ರಂದು ನಿಧನ ಹೊಂದಿದರು. ಅವರಿಗೆ ಅಭಿಷೇಕ್ ಹೆಸರಿನ ಮಗ ಇದ್ದಾರೆ. ಅವರು ಮಾಡಿದ್ದು ಕೆಲವೇ ಸಿನಿಮಾ. ಅಂಬಿಗೆ ಈಗ ಮೊಮ್ಮೊಗ ಜನಿಸಿದ್ದಾನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:03 am, Thu, 29 May 25

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ