AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

R Chandru: ತೆಲುಗು ಚಿತ್ರರಂಗದಲ್ಲಿ ಎದುರಿಸಿದ್ದ ಅವಮಾನ ಬಿಚ್ಚಿಟ್ಟ ಆರ್.ಚಂದ್ರು

2015 ರಲ್ಲಿ ತೆಲುಗು ಸಿನಿಮಾ ಒಂದನ್ನು ನಿರ್ದೇಶಿಸಿದ್ದ ಆರ್.ಚಂದ್ರು ಅದೇ ಸಂದರ್ಭದಲ್ಲಿ ಟಾಲಿವುಡ್​ನಲ್ಲಿ ತಮಗೆ ಆಗಿದ್ದ ಅವಮಾನದ ಬಗ್ಗೆ ಮಾತನಾಡಿದ್ದಾರೆ.

R Chandru: ತೆಲುಗು ಚಿತ್ರರಂಗದಲ್ಲಿ ಎದುರಿಸಿದ್ದ ಅವಮಾನ ಬಿಚ್ಚಿಟ್ಟ ಆರ್.ಚಂದ್ರು
ಆರ್.ಚಂದ್ರು-ಅಲ್ಲು ಅರ್ಜುನ್
ಮಂಜುನಾಥ ಸಿ.
|

Updated on:Mar 19, 2023 | 8:54 PM

Share

ಕಬ್ಜ (Kabzaa) ಸಿನಿಮಾದ ಗೆಲುವಿನ ಮೂಲಕ ಕನ್ನಡ ಚಿತ್ರರಂಗದ ಯಶಸ್ವಿ ಪ್ಯಾನ್ ಇಂಡಿಯಾ (Pan India) ನಿರ್ದೇಶಕರ ಸಾಲಿಗೆ ಆರ್.ಚಂದ್ರು (R Chandru) ಸೇರಿದ್ದಾರೆ. ಆರ್.ಚಂದ್ರು ಕಬ್ಜ ಮೂಲಕ ಬಿಗ್ ಬಜೆಟ್, ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಹೊರಟಾಗ ಹಲವರು ಅನುಮಾಸಿದ್ದರು, ಆದರೆ ಅದೆಲ್ಲವನ್ನೂ ಮೀರಿ ಈಗ ಆರ್.ಚಂದ್ರು ಯಶಸ್ವಿಯಾಗಿದ್ದಾರೆ. ಸಿನಿಮಾದ ಯಶಸ್ವಿಯಾದ ಬೆನ್ನಲ್ಲೆ (ಮಾರ್ಚ್ 19) ರಂದು ಚಿತ್ರತಂಡವು ಸಂಭ್ರಮಾಚರಣೆ ಮಾಡಿದ್ದು ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಚಂದ್ರು, ತಮಗೆ ತೆಲುಗು ಚಿತ್ರರಂಗದಲ್ಲಿ ಆಗಿದ್ದ ಅವಮಾನವನ್ನು ನೆನಪು ಮಾಡಿಕೊಂಡಿದ್ದಾರೆ.

ತಾಜ್ ಮಹಲ್, ಪ್ರೇಮ್ ಕಹಾನಿ, ಚಾರ್ಮಿನಾರ್​ ಅಂಥಹಾ ಹಿಟ್​ಗಳನ್ನು ನೀಡಿದ ಬಳಿಕ ಆರ್.ಚಂದ್ರು ತೆಲುಗು ಚಿತ್ರರಂಗಕ್ಕೆ ಹೋಗಿದ್ದರು. ಅಲ್ಲಿ ಅದ್ಭುತವಾದ ಸಿನಿಮಾ ಮಾಡುವ ಆಸೆಯಿಂದ ಹೋಗಿದ್ದ ಚಂದ್ರುಗೆ ಕನ್ನಡದ ನಿರ್ದೇಶಕ ಎಂಬ ಕಾರಣಕ್ಕೆ ಸಣ್ಣ ಬಜೆಟ್ ನೀಡಿ ಸಿನಿಮಾ ಮಾಡುವಂತೆ ಸೂಚಿಸಲಾಯ್ತಂತೆ. ಮೂರು ಕೋಟಿ ಬಜೆಟ್​ನಲ್ಲಿ ಕೃಷ್ಣಮ್ಮ ಕಲಿಪಿಂದಿ ಇದ್ದರನಿ ಹೆಸರಿನ ಸಿನಿಮಾ ಮಾಡಿದರು. 2015 ರಲ್ಲಿ ಬಿಡುಗಡೆ ಆದ ಆ ಸಿನಿಮಾ ಹಿಟ್ ಸಹ ಆಯಿತು. ಚಲನಚಿತ್ರೋತ್ಸವ ಒಂದರಲ್ಲಿ ಉತ್ತಮ ನಿರ್ದೇಶಕ ಪ್ರಶಸ್ತಿ ಸಹ ಪಡೆದುಕೊಂಡರು ಚಂದ್ರು.

ನನಗೆ ಅಲ್ಲು ಅರ್ಜುನ್​ಗೆ ಸಿನಿಮಾ ಮಾಡುವ ಆಸೆಯಿತ್ತು.ಮೊದಲ ತೆಲುಗು ಸಿನಿಮಾ ಹಿಟ್ ಆದ ಬಳಿಕ ಒಬ್ಬ ನಿರ್ಮಾಪಕರಿಗೆ ಈ ವಿಷಯ ಹೇಳಿದೆ. ಅವರು, ‘ಯಾರು ಕನ್ನಡದ ನಿರ್ದೇಶಕರಾ? ಆಗಲ್ಲ ಬಿಡಿ’ ಎಂದು ಬಹಳ ತುಚ್ಛವಾಗಿ ಹೇಳಿಬಿಟ್ಟು. ನನ್ನ ಕತೆಯನ್ನೂ ಅವರು ಕೇಳಲಿಲ್ಲ. ಅದು ನನಗೆ ಬಹಳ ಬೇಸರ ತರಿಸಿತು. ಆಗಲೇ ಅಂದುಕೊಂಡೆ ನಾವು ಟೆಕ್ನಿಕಲಿ ಸ್ಟ್ರಾಂಗ್ ಆಗಬೇಕು ಎಂದು. ಅವರು ಹಾಗೆ ಹೇಳಿದ್ದು ನನಗೆ ಬಹಳ ನೋವಾಗಿತ್ತು. ಆದರೆ ಆ ನೋವನ್ನು ಹೋಗಲಾಡಿಸಿದ್ದು ಕನ್ನಡದ ಕೆಜಿಎಫ್ ತಂಡ” ಎಂದರು ಚಂದ್ರು.

ನಾನು ಇಂಥಹಾ ಸಿನಿಮಾ ಮಾಡಬೇಕೆಂದು ಕನಸು ಕಂಡೆ. ಅದನ್ನು ಉಪೇಂದ್ರ ಅವರ ಬಳಿ ಹೇಳಿಕೊಂಡಾಗ ಬೆನ್ನಿಗೆ ನಿಂತು ಮೂರು ವರ್ಷ ನನಗೆ ಡೇಟ್ಸ್ ನೀಡಿದರು. ಸುದೀಪ್ ಸಹ ಬೆಂಬಲ ನೀಡಿದರು. ಶಿವಣ್ಣನಂತೂ ಇಂಥಹಾ ಒಳ್ಳೆಯ ಸಿನಿಮಾಕ್ಕೆ ಬೆಂಬಲಿಸಬೇಕು ಎಂದು ಜೊತೆಗೆ ಬಂದರು. ಎಲ್ಲರಿಗೂ ನಾನು ಋಣಿ, ಅದರಲ್ಲಿಯೂ ಉಪೇಂದ್ರ ಅವರಿಗೆ ಜೀವನಪರ್ಯಂತ ಋಣಿಯಾಗಿರುತ್ತೇನೆ. ಈ ಸಿನಿಮಾದ ಯಶಸ್ಸು ಉಪೇಂದ್ರ ಅವರಿಗೆ ಸಲ್ಲಬೇಕು ಎಂದರು ಚಂದ್ರು.

ಈ ಸಿನಿಮಾಕ್ಕಾಗಿ ಬಹಳ ಕಷ್ಟಪಟ್ಟಿದ್ದೇವೆ. ಮೂರು ವರ್ಷ ನಾವು ಬರೀಯ ದೂಳಕ್ಕೆ ಉಸಿರಾಡಿದ್ದೇವೆ. ನಮಗೆ ಚಿತ್ರೀಕರಣ ಮಾಡಲು ಮೂರು ವರ್ಷ ಬೇಕಾಗಲಿಲ್ಲ. ಮಧ್ಯದಲ್ಲಿ ಬಂದ ಎರಡು ಕೋವಿಡ್ ಹೊಡೆತಗಳಿಂದ ತಡವಾಯ್ತು. ನಿರ್ಮಾಪಕನಾಗಿ ಬಹಳ ಜರ್ಜರಿತನಾಗಿದ್ದೆ. ಹತಾಶನಾಗಿದ್ದೆ, ಹಾಕಿದ್ದ ಸೆಟ್ ಒಂದು ಮಳೆಯಲ್ಲಿ ಕೊಚ್ಚಿಹೋಯಿತು ಎಲ್ಲವನ್ನೂ ತಡೆದುಕೊಂಡೆ ಈಗ ಸಿನಿಮಾ ಯಶಸ್ಸು ಗಳಿಸಿರುವುದು ಬಹಳ ಖುಷಿಯಾಗಿದೆ ಎಂದರು ಚಂದ್ರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:49 pm, Sun, 19 March 23

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!