AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಧಿಕಾ ಕುಮಾರಸ್ವಾಮಿಗೆ ಜೊತೆಯಾದ ಬಾಲಿವುಡ್ ಹೀರೋ; ಏಳು ಭಾಷೆಗಳಲ್ಲಿ ಶೂಟ್​ ಆಗಲಿದೆ ಸಿನಿಮಾ

Radhika Kumaraswamy: ಸಾಮಾನ್ಯವಾಗಿ ಸಿನಿಮಾನ ಒಂದು ಭಾಷೆಯಲ್ಲಿ ಶೂಟ್ ಮಾಡಿ ಉಳಿದ ಭಾಷೆಯಲ್ಲಿ ಡಬ್ ಮಾಡಲಾಗುತ್ತದೆ. ಆದರೆ, ಇದೊಂದು ಭಿನ್ನ ಪ್ರಯತ್ನ. ಸಿನಿಪ್ರಿಯರ ಗಮನ ಸೆಳೆಯಲು ಇದನ್ನು ಏಳೂ ಭಾಷೆಗಳಲ್ಲಿ ಏಕಕಾಲಕ್ಕೆ ಶೂಟಿಂಗ್ ಮಾಡಲಾಗುತ್ತಿದೆ.

ರಾಧಿಕಾ ಕುಮಾರಸ್ವಾಮಿಗೆ ಜೊತೆಯಾದ ಬಾಲಿವುಡ್ ಹೀರೋ; ಏಳು ಭಾಷೆಗಳಲ್ಲಿ ಶೂಟ್​ ಆಗಲಿದೆ ಸಿನಿಮಾ
ಶ್ರೇಯಸ್-ರಾಧಿಕಾ
ರಾಜೇಶ್ ದುಗ್ಗುಮನೆ
|

Updated on:May 06, 2023 | 8:07 AM

Share

ರಾಧಿಕಾ ಕುಮಾರಸ್ವಾಮಿ (Radhika Kumaraswamy) ಅವರು ಸಿನಿಮಾ ರಂಗದಲ್ಲಿ ಬ್ಯುಸಿ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಈಗ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅವರು ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ‘ಅಜಾಗ್ರತ’ ಎಂದು ಹೆಸರು ಇಡಲಾಗಿದೆ. ಬಾಲಿವುಡ್​​​ನ ಶ್ರೇಯಸ್ ತಲಪಡೆ ನಾಯಕ ನಟನಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೇಯಸ್ (Shreyas Talpade) ಅವರು ‘ಗೋಲ್​ಮಾಲ್’ ಮೊದಲಾದ ಹಾಸ್ಯ ಸಿನಿಮಾಗಳ ಮೂಲಕ ಫೇಮಸ್ ಆಗಿದ್ದಾರೆ. ಮೇ13ರಂದು ಹೈದರಾಬಾದ್​​ನ ರಾಮನಾಯ್ಡು ಸ್ಟುಡಿಯೋದಲ್ಲಿ ಚಿತ್ರಕ್ಕೆ ಮುಹೂರ್ತ ನಡೆಯಲಿದೆ‌. ವಿಶೇಷ ಎಂದರೆ ಈ ಚಿತ್ರ 7 ಭಾಷೆಗಳಲ್ಲಿ ಸಿದ್ಧಗೊಳ್ಳಲಿದೆ. ರವಿರಾಜ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಯುವ ನಿರ್ದೇಶಕ ಎಂ. ಶಶಿಧರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಅವರು ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ತಮ್ಮ ಪಾಲಿಗೆ ಬಂದ ಎಲ್ಲ ಚಿತ್ರಗಳನ್ನು ಅವರು ಒಪ್ಪಿಕೊಳ್ಳುವುದಿಲ್ಲ. ಪಾತ್ರ ಹಾಗೂ ಕಥೆ ಚೆನ್ನಾಗಿದ್ದರೆ ಮಾತ್ರ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡುತ್ತಾರೆ. ‘ಅಜಾಗ್ರತ’ ಸಿನಿಮಾದ ಕಥೆ ಹಾಗೂ ಪಾತ್ರ ಅವರಿಗೆ ಇಷ್ಟ ಆಗಿದೆ. ಹೀಗಾಗಿ, ಸಿನಿಮಾ ಒಪ್ಪಿಕೊಂಡಿದ್ದಾರೆ. ‘ಅಜಾಗ್ರತ’ ಸೈಕಾಲಜಿಕಲ್ ಕ್ರೈಂ ಥ್ರಿಲರ್ ಶೈಲಿಯಲ್ಲಿ ಮೂಡಿ ಬರುತ್ತಿದೆ.

ಸಾಮಾನ್ಯವಾಗಿ ಸಿನಿಮಾನ ಒಂದು ಭಾಷೆಯಲ್ಲಿ ಶೂಟ್ ಮಾಡಿ ಉಳಿದ ಭಾಷೆಯಲ್ಲಿ ಡಬ್ ಮಾಡಲಾಗುತ್ತದೆ. ಆದರೆ, ‘ಅಜಾಗ್ರತ’ ಹಾಗಲ್ಲ. ಇದೊಂದು ಭಿನ್ನ ಪ್ರಯತ್ನ. ಸಿನಿಪ್ರಿಯರ ಗಮನ ಸೆಳೆಯಲು ಇದನ್ನು ಏಳೂ ಭಾಷೆಗಳಲ್ಲಿ ಏಕಕಾಲಕ್ಕೆ ಶೂಟಿಂಗ್ ಮಾಡಲಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿ ಇತರ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ: ನ್ಯೂ ಇಯರ್​​ ಪಾರ್ಟಿಗೆ ರಾಧಿಕಾ ಕುಮಾರಸ್ವಾಮಿ ರಂಗು; ಕಲರ್ಸ್​ ಕನ್ನಡದಲ್ಲಿ ಮಸ್ತ್​ ಡ್ಯಾನ್ಸ್​

ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ವಿವಿಧ ಚಿತ್ರರಂಗದ ಕಲಾವಿದರು ಸಿನಿಮಾದಲ್ಲಿದ್ದಾರೆ. ಕನ್ನಡ ಚಿತ್ರರಂಗದಿಂದ ರಾಧಿಕಾ ಕುಮಾರಸ್ವಾಮಿ, ಸ್ಪರ್ಶ ರೇಖಾ, ದೇವರಾಜ್, ಸುಚೇಂದ್ರ ಪ್ರಸಾದ್, ವಿನಯ್ ಪ್ರಸಾದ್, ಚಿತ್ರ ಶೆಣೈ, ಮುಂತಾದವರು ಸಿನಿಮಾದಲ್ಲಿ ನಟಿಸಲಿದ್ದಾರೆ. ತೆಲುಗು ಚಿತ್ರರಂಗದ  ರಾವ್ ರಮೇಶ್, ಪುಷ್ಪ ಸುನಿಲ್, ರಾಘವೇಂದ್ರ ಶ್ರವಣ್ ಬಣ್ಣ ಹಚ್ಚುತ್ತಿದ್ದಾರೆ. ತಮಿಳಿನಿಂದ ಆದಿತ್ಯ ಮೆನನ್, ಸಮುದ್ರ ಕಣಿ, ಜಯ್ ಪ್ರಕಾಶ್ ಚಿತ್ರದಲ್ಲಿ ಇರಲಿದ್ದಾರೆ.

ನಿರ್ದೇಶಕ ಶಶಿಧರ್ ಅವರು ಫಿಲಂ ಮೇಕಿಂಗ್​​ನಲ್ಲಿ ಎಂ.ಎಸ್.ಸಿ ಮಾಡಿದ್ದಾರೆ. ವಿಎಫ್​​ಎಕ್ಸ್​ನಲ್ಲೂ ಪರಿಣತಿ ಹೊಂದಿದ್ದಾರೆ. ಈ ಮೊದಲು ಅವರು ‘ಘಾರ್ಗ’ ಹೆಸರಿನ ಚಿತ್ರವನ್ನು ನಿರ್ದೇಶಿಸಿದ್ದರು. ಎರಡನೇ ಚಿತ್ರದಲ್ಲೇ ಅವರು ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:07 am, Sat, 6 May 23