ರಾಧಿಕಾ ಪಂಡಿತ್ ತಂದೆ-ತಾಯಿಯ ಮದುವೆ ವಾರ್ಷಿಕೋತ್ಸವ; ಆಯ್ರಾ-ಯಥರ್ವ್​ ಜತೆ ಕೇಕ್ ಕತ್ತರಿಸಿದ ಕುಟುಂಬ

ರಾಧಿಕಾ ಪಂಡಿತ್ ಅವರು ತಂದೆ-ತಾಯಿಯ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ತೆಗೆದ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.

ರಾಧಿಕಾ ಪಂಡಿತ್ ತಂದೆ-ತಾಯಿಯ ಮದುವೆ ವಾರ್ಷಿಕೋತ್ಸವ; ಆಯ್ರಾ-ಯಥರ್ವ್​ ಜತೆ ಕೇಕ್ ಕತ್ತರಿಸಿದ ಕುಟುಂಬ
ರಾಧಿಕಾ ಕುಟುಂಬ
Edited By:

Updated on: Jun 20, 2022 | 1:41 PM

ನಟಿ ರಾಧಿಕಾ ಪಂಡಿತ್ (Radhika Pandit) ಅವರಿಗೆ ಕುಟುಂಬದ ಮೇಲೆ ಹೆಚ್ಚು ಪ್ರೀತಿ ಇದೆ. ನಟನೆಯಿಂದ ಅಂತರ ಕಾಯ್ದುಕೊಂಡಿರುವ ಅವರು ಈಗ ಕುಟುಂಬದ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಹಾಗಂತ ಅವರು ಅಭಿಮಾನಿಗಳ ಜತೆ ಸಂಪರ್ಕ ಕಳೆದುಕೊಂಡಿಲ್ಲ. ಹೊಸಹೊಸ ಫೋಟೋಗಳ ಮೂಲಕ ಅವರು ಗಮನ ಸೆಳೆಯುತ್ತಾರೆ. ಕುಟುಂಬದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಅಪ್​ಡೇಟ್ ನೀಡುತ್ತಾರೆ. ಈಗ ರಾಧಿಕಾ ಪಂಡಿತ್ ಅವರು ತಂದೆ-ತಾಯಿಯ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ತೆಗೆದ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.

ರಾಧಿಕಾ ಪಂಡಿತ್ ಅವರ ತಂದೆ ಹೆಸರು ಕೃಷ್ಣಪ್ರಸಾದ್ ಪಂಡಿತ್. ತಾಯಿ ಹೆಸರು ಮಂಗಳಾ ಪಂಡಿತ್. ಇವರ ವಿವಾಹ ವಾರ್ಷಿಕೋತ್ಸವವನ್ನು ಮನೆಯಲ್ಲೇ ಆಚರಿಸಲಾಗಿದೆ. ಕೇಕ್ ತಂದು ಕತ್ತರಿಸಿ ಈ ವಿಶೇಷ ದಿನವನ್ನು ಸಂಭ್ರಮಿಸಲಾಗಿದೆ. ಕೃಷ್ಣಪ್ರಸಾದ್ ಹಾಗೂ ಮಂಗಳಾ ಅವರು ಕೇಕ್ ಕತ್ತರಿಸುವ ಸಂದರ್ಭದಲ್ಲಿ ಆಯ್ರಾ, ಯಥರ್ವ್​ ಹಾಗೂ ರಾಧಿಕಾ ಪಂಡಿತ್ ಅವರ ಸೋದರ ಸಂಬಂಧಿಯ ಮಕ್ಕಳು ಹಾಜರಿ ಹಾಕಿದ್ದರು. ಈ ಫೋಟೋವನ್ನು ರಾಧಿಕಾ ಪಂಡಿತ್ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

‘ನನ್ನ ಫೇವರಿಟ್ ಫ್ರೇಮ್. ಅಮ್ಮ-ಅಪ್ಪ ನಿಮಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು’ ಎಂದು ರಾಧಿಕಾ ಪಂಡಿತ್ ಫೋಟೋಗೆ ಕ್ಯಾಪ್ಶನ್ ನೀಡಿದ್ದಾರೆ. ಈ ಫೋಟೋ 14 ಗಂಟೆಗಳಲ್ಲಿ ಲಕ್ಷ ಲಕ್ಷ ಲೈಕ್ಸ್ ಪಡೆದುಕೊಂಡಿದೆ. ಅಭಿಮಾನಿಗಳು ಕೂಡ ರಾಧಿಕಾ ಪಂಡಿತ್ ಕುಟುಂಬಕ್ಕೆ ಶುಭಾಶಯ ತಿಳಿಸುತ್ತಿದ್ದಾರೆ.

ಇದನ್ನೂ ಓದಿ
ಸಂಡೇ ಸ್ಪೆಷಲ್​; ಯಶ್ ಜತೆಗಿನ ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್
Radhika Pandit: ನಾಚಿ ನೀರಾದ ರಾಧಿಕಾ ಪಂಡಿತ್; ವೈರಲ್ ಆಯ್ತು ಫೋಟೋ
Radhika Pandit: ಪತ್ನಿ ರಾಧಿಕಾ ಪಂಡಿತ್ ಕೆನ್ನೆಗೆ ಮುತ್ತಿಟ್ಟ ಯಶ್; ಫೋಟೋ ವೈರಲ್
Radhika Pandit: ಕುಟುಂಬದೊಂದಿಗೆ ಜನ್ಮದಿನ ಆಚರಿಸಿದ ರಾಧಿಕಾ ಪಂಡಿತ್; ಇಲ್ಲಿವೆ ಮುದ್ದಾದ ಫೋಟೋಗಳು

ಇದನ್ನೂ ಓದಿ: ಸಂಡೇ ಸ್ಪೆಷಲ್​; ಯಶ್ ಜತೆಗಿನ ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

ಯಶ್ ಅವರು ‘ಕೆಜಿಎಫ್ 2’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅವರ ಹೊಸ ಸಿನಿಮಾ ಘೋಷಣೆ ಆಗಿಲ್ಲ. ಈಗ ಅವರು ಕುಟುಂಬದ ಜತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ ರಾಧಿಕಾ ಪಂಡಿತ್, ಯಶ್, ಆಯ್ರಾ, ಯಥರ್ವ್ ಹಾಗೂ ಕುಟುಂಬದ ಇತರ ಸದಸ್ಯರು ಕನಕಪುರ ರಸ್ತೆಯಲ್ಲಿರುವ ಖಾಸಗಿ ಝೂಗೆ ತೆರಳಿದ್ದರು. ಈ ವೇಳೆ ಅಲ್ಲಿ ಸೆರೆ ಹಿಡಿಯಲಾದ ಫೋಟೋಗಳನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದರು. ಯಶ್ ಅವರು ಇದರ ವಿಶೇಷ ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.