‘ನಾನಿರುವವರೆಗೂ ಈ ಹಾಡು ನನ್ನ ಜತೆ ಇರುತ್ತದೆ’; ‘ಪುನೀತ ಪರ್ವ’ ವೇದಿಕೆ ಮೇಲೆ ರಾಘಣ್ಣ ಭಾವುಕ ನುಡಿ

| Updated By: ರಾಜೇಶ್ ದುಗ್ಗುಮನೆ

Updated on: Oct 21, 2022 | 7:37 PM

‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ..’ ಹಾಡು ಈಗಲೂ ಅನೇಕರ ಫೇವರಿಟ್. ಈ ಹಾಡನ್ನು ಸ್ವತಃ ಪುನೀತ್ ರಾಜ್​ಕುಮಾರ್ ಅವರು ಹಾಡಿದ್ದರು. ಈ ಹಾಡಿನ ಬಗ್ಗೆ ರಾಘವೇಂದ್ರ ರಾಜ್​ಕುಮಾರ್ ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ.

‘ನಾನಿರುವವರೆಗೂ ಈ ಹಾಡು ನನ್ನ ಜತೆ ಇರುತ್ತದೆ’; ‘ಪುನೀತ ಪರ್ವ’ ವೇದಿಕೆ ಮೇಲೆ ರಾಘಣ್ಣ ಭಾವುಕ ನುಡಿ
ರಾಘವೇಂದ್ರ-ಅಪ್ಪು
Follow us on

ಪುನೀತ್ ರಾಜ್​ಕುಮಾರ್ (Puneeth Rajkumar) ಅವರ ಕನಸಿನ ಪ್ರಾಜೆಕ್ಟ್ ‘ಗಂಧದ ಗುಡಿ’ ಸಾಕ್ಷ್ಯಚಿತ್ರ ರಿಲೀಸ್​ಗೆ ರೆಡಿ ಇದೆ. ಇದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ. ಇದರ ಬಗ್ಗೆ ಅಭಿಮಾನಿಗಳಿಗೆ ವಿಶೇಷ ಪ್ರೀತಿ ಇದೆ. ‘ಗಂಧದ ಗುಡಿ’ ಪ್ರೀ-ರಿಲೀಸ್ ಇವೆಂಟ್ ‘ಪುನೀತ ಪರ್ವ’ ಇಂದು (ಅಕ್ಟೋಬರ್ 21) ನಡೆದಿದೆ. ಈ ಕಾರ್ಯಕ್ರಮಕ್ಕೆ ಹಲವು ಸೆಲೆಬ್ರಿಟಿಗಳು, ಲಕ್ಷಾಂತರ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಈ ವೇದಿಕೆ ಮೇಲೆ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar)  ಅವರು ವಿಶೇಷ ಕಥೆ ಹೇಳಿದ್ದಾರೆ.

1981ರಲ್ಲಿ ರಿಲೀಸ್ ಆದ ‘ಭಾಗ್ಯವಂತ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಪುನೀತ್ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದರು. ಈ ಚಿತ್ರದ ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ..’ ಹಾಡು ಈಗಲೂ ಅನೇಕರ ಫೇವರಿಟ್ ಹಾಡು. ಈ ಹಾಡನ್ನು ಸ್ವತಃ ಪುನೀತ್ ರಾಜ್​ಕುಮಾರ್ ಅವರು ಹಾಡಿದ್ದರು. ಈ ಹಾಡಿನ ಬಗ್ಗೆ ರಾಘವೇಂದ್ರ ರಾಜ್​ಕುಮಾರ್ ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ.

‘ಪುನೀತ ಪರ್ವ’ ವೇದಿಕೆ ಏರಿದ ರಾಘವೇಂದ್ರ ರಾಜ್​ಕುಮಾರ್ ಈ ಬಗ್ಗೆ ಮಾತನಾಡಿದ್ದಾರೆ. ‘1980ರ ಸಮಯ. ನನ್ನ ತಮ್ಮನಿಗೆ 5 ವರ್ಷವೂ ಆಗಿರಲಿಲ್ಲ. ಅಪ್ಪು ಬಳಿ ಹಾಡಿಸಬೇಕು ಎಂಬುದು ಅಪ್ಪಾಜಿ ಅವರ ಆಸೆ ಆಗಿತ್ತು. ಇಷ್ಟು ಸಣ್ಣವನ ಬಳಿ ಯಾಕೆ ಹಾಡಿಸಬೇಕು ಅಂತ ಪ್ರಶ್ನೆ ಬಂತು. ಭಾಗ್ಯವಂತರು ಸಿನಿಮಾದಲ್ಲಿ ಒಂದು ಹಾಡಿತ್ತು. ಇದನ್ನು ಪುನೀತ್ ಹಾಡಿದರೆ ಚೆನ್ನಾಗಿರುತ್ತದೆ ಎಂದು ಅಮ್ಮನ ಬಳಿ ಅಪ್ಪಾಜಿ ಹೇಳಿದರು. ಮಲಗುವುದಕ್ಕೂ ಮೊದಲು ಈ ಹಾಡನ್ನು ನಮ್ಮ ತಂದೆ ಹೇಳುತ್ತಿದ್ದರು. ಪುನೀತ್ ಧ್ವನಿಗೂಡಿಸುತ್ತಿದ್ದ. ಹೀಗೆ ಅವನಿಗೆ ಹಾಡು ರೂಢಿ ಆಯಿತು’ ಎಂದು ಮಾತು ಆರಂಭಿಸಿದರು ಅವರು.

ಇದನ್ನೂ ಓದಿ
Puneeth Rajkumar: ಪುನೀತ್​ ರಾಜ್​ಕುಮಾರ್​ ಸಮಾಧಿ ಬಳಿ 75 ಕಟೌಟ್​; ಮೊದಲ ವರ್ಷದ ಪುಣ್ಯಸ್ಮರಣೆಗೆ ಫ್ಯಾನ್ಸ್​ ಸಿದ್ಧತೆ
Puneeth Rajkumar: ‘ಗಂಧದ ಗುಡಿ’ಗೆ ತೆರಿಗೆ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಅಪ್ಪು ಫ್ಯಾನ್ಸ್​ ಮನವಿ; ‘ಪುನೀತ ಪರ್ವ’ಕ್ಕೆ ತಯಾರಿ ಜೋರು
Puneeth Rajkumar: ‘ಗಂಧದ ಗುಡಿ’ ಪ್ರೀ-ರಿಲೀಸ್ ಇವೆಂಟ್​; ಸಿಎಂಗೆ ಆಹ್ವಾನ ನೀಡಿದ ಡಾ. ರಾಜ್​ಕುಮಾರ್ ಕುಟುಂಬ
Gandhada Gudi: ಅ.21ರಂದು ‘ಗಂಧದ ಗುಡಿ’ ಪ್ರೀ-ರಿಲೀಸ್​ ಇವೆಂಟ್​; ವಿಶೇಷವಾಗಿ ಸಿದ್ಧವಾಗಿದೆ ಆಮಂತ್ರಣ ಪತ್ರಿಕೆ

ಇದನ್ನೂ ಓದಿ: ನ. 1ರಂದು ನಟ ದಿ. ಪುನೀತ್ ರಾಜ್​ಕುಮಾರ್​ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ: ಸಿಎಂ ಬೊಮ್ಮಾಯಿ

‘ಸ್ಟುಡಿಯೋದಲ್ಲಿ ಈ ಹಾಡು ಹೇಳುವ ದಿನ ಬಂತು. ಅಪ್ಪಾಜಿ ಶೂಟಿಂಗ್​ನಲ್ಲಿ ಇದ್ದ ಕಾರಣ ಸ್ಟುಡಿಯೋಗೆ ಬಂದಿರಲಿಲ್ಲ. ಟೆಲಿಫೋನ್​ಬೂತ್​ಗೆ ಆಗಾಗ ಬಂದು ಅಪ್ಪು ಹಾಡಿದ್ನ ಎಂದು ಕೇಳುತ್ತಿದ್ದರು. ಚೆನ್ನಾಗಿ ಹಾಡಿದ ಎಂದು ಅಮ್ಮ ಹೇಳಿದರು. ಮರುದಿನ ಮನೆಗೆ ಬಂದು ಅಪ್ಪಾಜಿ ಖುಷಿಪಟ್ಟರು. ಈ ಹಾಡಿನ ಶೂಟಿಂಗ್ ಸಂದರ್ಭದಲ್ಲಿ ನಾನು ಅಪ್ಪು ಜತೆ ಇದ್ದೆ. ಈ ಹಾಡಿನ ಶೂಟ್ 3 ದಿನ ನಡೆಯಿತು. ನಾನಿರುವವರೆಗೂ ಈ ಹಾಡು ನನ್ನ ಜತೆ ಇರುತ್ತದೆ’ ಎಂದು ಭಾವುಕರಾದರು ರಾಘವೇಂದ್ರ ರಾಜ್​ಕುಮಾರ್. ನಂತರ ಈ ಹಾಡನ್ನು ಹಾಡಿದರು.

Published On - 7:37 pm, Fri, 21 October 22