AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tanisha Kuppanda: ನಟಿ ತನಿಷಾ ಕುಪ್ಪಂಡ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ರಾಜಾಹುಲಿ ಹರ್ಷ

ನಟಿ ತನಿಷಾ ಕುಪ್ಪಂಡ ತಮ್ಮ ವಿರುದ್ಧ ಮಾಡಿರುವ ಆರೋಪಕ್ಕೆ ನಟ ರಾಜಾಹುಲಿ ಹರ್ಷ ಪ್ರತಿಕ್ರಿಯೆ ನೀಡಿದ್ದಾರೆ.

Tanisha Kuppanda: ನಟಿ ತನಿಷಾ ಕುಪ್ಪಂಡ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ರಾಜಾಹುಲಿ ಹರ್ಷ
ಹರ್ಷ-ತನಿಷಾ
ಮಂಜುನಾಥ ಸಿ.
|

Updated on: Apr 09, 2023 | 9:02 PM

Share

ನಟಿ ತನಿಷಾ ಕುಪ್ಪಂಡ (Tanisha Kuppanda) ಅವರನ್ನು ಯೂಟ್ಯೂಬರ್ ಒಬ್ಬ ಅಸಭ್ಯ ಪ್ರಶ್ನೆ ಕೇಳಿದ ವಿಚಾರ ಕಳೆದ ವಾರ ಸಖತ್ ಸದ್ದಾಗಿತ್ತು. ಪೆಂಟಗನ್ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ತನಿಷಾ ಕುಪ್ಪಂಡ ಅವರನ್ನು ಸಂದರ್ಶನ ಮಾಡಿದ್ದ ಯೂಟ್ಯೂಬರ್ ಒಬ್ಬಾತ, ನೀವು ನೀಲಿ ಚಿತ್ರಗಳಲ್ಲಿ ನಟಿಸಲು ತಯಾರಿದ್ದೀರ ಎಂದಿದ್ದ. ತಮ್ಮನ್ನು ಹೀಗೆ ಅಸಭ್ಯವಾಗಿ ಪ್ರಶ್ನೆ ಕೇಳಿದ ಯೂಟ್ಯೂಬರ್ ಅನ್ನು ಅಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದ ನಟಿ ತನಿಷಾ ಆ ಬಳಿಕ ಯೂಟ್ಯೂಬರ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಸಹ ಏರಿದ್ದರು.

ಘಟನೆ ನಡೆದ ಎರಡು ದಿನದ ಬಳಿಕ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟಿ ತನಿಷಾ, ಆ ಘಟನೆಯಿಂದಾಗಿ ಗೆಳೆಯರೇ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುವಂತಾಗಿದೆ ಎಂದು, ಚಿತ್ರರಂಗದ ನಟರೊಬ್ಬರು ನನ್ನ ಇನ್​ಸ್ಟಾಗ್ರಾಂ ಸ್ಟೋರಿಗೆ ರಿಪ್ಲೈ ಮಾಡಿ ಬ್ಲೂ ಫಿಲಂನಲ್ಲಿ ನಟಿಸುತ್ತೀಯ? ಎಂದು ಕೇಳಿದ ಎಂದಿದ್ದರು. ಯೂಟ್ಯೂಬರ್ ಮಾಡಿದ ಕೃತ್ಯದಿಂದ ತಮಗೆ ಆಗಿರುವ ನೋವಿನ ಬಗ್ಗೆ ಮಾತನಾಡುತ್ತಾ, ಅವನಾದರೂ ಹೊರಗಿನವರು, ಅವನಿಂದಾಗಿ ಈಗ ನಮ್ಮವರೇ ನನ್ನನ್ನು ಕೆಟ್ಟದಾಗಿ ನೋಡುವಂತಾಗಿದೆ. ಸಹನಟನೇ ಒಬ್ಬ ನನ್ನನ್ನು ಬ್ಲೂ ಫಿಲಂನಲ್ಲಿ ನಟಿಸುತ್ತೀಯಾ ಎಂದು ಕೇಳಿ ಮೆಸೇಜ್ ಮಾಡಿದ್ದಾನೆ ಎಂದು ಕಣ್ಣೀರು ಹಾಕಿದ್ದರು.

ಯಾರು ಹಾಗೆ ಮೆಸೇಜ್ ಮಾಡಿದ್ದು ಹೆಸರು ಹೇಳಿ ಎಂದಾಗ, ಮೊದಲಿಗೆ, ಆತ ಗುರುದೇಶಪಾಂಡೆ ಸಿನಿಮಾದಲ್ಲಿ ನಟಿಸಿದ್ದಾನೆ ಎಂದಷ್ಟೆ ಹೇಳಿದರು, ಬಳಿಕ ಪತ್ರಕರ್ತರು ಒತ್ತಾಯ ಮಾಡಿದಾಗ ಹರ್ಷ ಹೆಸರು ಹೇಳಿದರು ನಟಿ ತನಿಷಾ. ಇನ್​ಸ್ಟಾಗ್ರಾಂನಲ್ಲಿ ನಾನು ಹಾಕಿದ್ದ ಸ್ಟೋರಿಗೆ ಪ್ರತಿಕ್ರಿಯೆ ನೀಡಿ, ಬ್ಲೂ ಫಿಲಂನಲ್ಲಿ ನಟಿಸಿದ್ದೀಯ ಎಂದು ಮೆಸೇಜ್ ಮಾಡಿದ್ದಾನೆ, ಅದಕ್ಕೆ ಸ್ಮೈಲಿ ಇಮೇಜು ಬೇರೆ ಹಾಕಿದ್ದಾನೆ. ನಾನು ಗೆಳೆಯರು ಎಂದುಕೊಂಡವರೇ ಹೀಗೆ ಕೀಳಾಗಿ ನೋಡುತ್ತಿದ್ದಾರೆ ಎಂದು ಅತ್ತಿದ್ದರು.

ಇದನ್ನೂ ಓದಿ: ಅಸಭ್ಯ ಸಂದೇಶ ಕಳಿಸಿದ ರಾಜಾಹುಲಿ ಹರ್ಷ: ನಟಿ ತನಿಷಾ ಆರೋಪ

ಇದೀಗ ತನಿಷಾ ತಮ್ಮ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಹರ್ಷಾ, ನಾನು ಹಾಗೂ ತನಿಷಾ ಇಬ್ಬರೂ ಸ್ನೇಹಿತರೇ, ನಮ್ಮಿಬ್ಬರಿಗೂ ಚೆನ್ನಾಗಿಯೇ ಪರಿಚಯ, ಭೇಟಿ ಆದಾಗೆಲ್ಲ ನಾನು ಅವರನ್ನು, ಅವರು ನನ್ನನ್ನು ರೇಗಿಸುತ್ತಾ ಇರುತ್ತಾರೆ. ನಾನೂ ಸಹ ರೇಗಿಸುತ್ತಾ ಇರುತ್ತೇನೆ, ಒಳ್ಳೆಯ ಸ್ನೇಹ ನಮ್ಮಿಬ್ಬರ ನಡುವೆ ಇದೆ. ಆ ಒಂದು ಸಲುಗೆ ಹಾಗೂ ಸದರದಿಂದ ನಾನು ಆ ವ್ಯಕ್ತಿ ಪ್ರಶ್ನೆ ಮಾಡಿದ್ದನ್ನು ಹಾಕಿ ಈ ಥರಹ ಕೇಳಿದ್ದಾನಲ್ಲ ಎಂದು ನಾನೂ ಸಹ ಅದೇ ಪ್ರಶ್ನೆ ಕೇಳಿದೆ. ಆದರೆ ಆ ವ್ಯಕ್ತಿಗೆ ಒಂದು ಕಾಮನ್‌ಸೆನ್ಸ್ ಬೇಡ್ವಾ ಎಂದು ಒಂದು ವಾಯ್ಸ್ ಮೆಸೇಜ್ ಅನ್ನು ಸಹ ಮಾಡಿದ್ದೆ. ಇದನ್ನು ನಾನು ನಗ್ತಾ ಕೇಳಿದ್ದೆ. ಸಾಮಾನ್ಯವಾಗಿ ಸ್ನೇಹಿತರು ಸೀರಿಯಸ್ ಆಗಿ ಏಕೆ ಮಾತನಾಡ್ತಾರೆ, ತಮಾಷೆಯಾಗಿ ಮಾತಾಡ್ತಾರೆ, ಆ ಒಂದು ಲೆಕ್ಕದಲ್ಲಿಯೇ ನಾನು ಕೇಳಿದ್ದೆ. ಆದರೆ ತನಿಷಾ ಅವರು ಅದನ್ನು ಸೀರಿಯಸ್ ಆಗಿ ತೆಗೆದುಕೊಂಡು ಇದನ್ನು ದೊಡ್ಡದಾಗಿ ಕಾಣುವಂತೆ ಹೇಳಿದ್ದಾರೆ ಅಷ್ಟೇ, ಮನಸ್ಸಲ್ಲಿ ಒಂದು ಇಟ್ಟುಕೊಂಡು ಆಚೆ ಒಂದು ಇಟ್ಟುಕೊಂಡು ಮಾತನಾಡಿಲ್ಲ ಎಂದು ಹರ್ಷ ತಿಳಿಸಿದ್ದಾರೆ. ಹರ್ಷ ನೀಡಿರುವ ಈ ಪ್ರತಿಕ್ರಿಯೆಗೆ ನಟಿ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಪೆಂಟಗನ್ ಸಿನಿಮಾದಲ್ಲಿ ಕಾಮನಬಿಲ್ಲು ಹೆಸರಿನ ಹಾಡೊಂದರಲ್ಲಿ ನಟಿ ತನಿಷಾ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಆ ಹಾಡು ವೈರಲ್ ಆದ ಬೆನ್ನಲ್ಲೆ ಆ ಯೂಟ್ಯೂಬರ್ ನಟಿಯ ಬಗ್ಗೆ ಅಸಭ್ಯವಾಗಿ ಪ್ರಶ್ನೆ ಕೇಳಿದ್ದ. ಕಳೆದ ಶುಕ್ರವಾರ ಆ ಸಿನಿಮಾ ಬಿಡುಗಡೆ ಆಗಿದ್ದು ಆ ಹಾಡನ್ನು ಸಿನಿಮಾದಲ್ಲಿ ಉಳಿಸಿಕೊಳ್ಳಲಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ