AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ನಟಿಗೆ ನೀಲಿ ಚಿತ್ರದಲ್ಲಿ ನಟಿಸ್ತೀರಾ ಎಂದು ಕೇಳಿದ ಯೂಟ್ಯೂಬರ್‌ಗೆ ಹಿಗ್ಗಾ-ಮುಗ್ಗಾ ಕ್ಲಾಸ್

ನಟಿ ತನಿಷಾ ಅವರಿಗೆ ಯೂಟ್ಯೂಬರ್‌, ನೀವು ನ್ಯೂಡ್ ಫಿಲಂ ಮಾಡ್ತೀರಾ ಅಂತ ಪ್ರಶ್ನೆ ಕೇಳಿ ಕೆರಳಿಸಿದ್ದಾನೆ. ನ್ಯೂಡ್ ಮಾಡೋದು ಪೋರ್ನ್ ಸ್ಟಾರ್ ಮಾಡ್ತಾರೆ ಅಂತ ನಟಿ ತನಿಷಾ ಗರಂ ಆಗಿದ್ದಾರೆ.

ಕನ್ನಡ ನಟಿಗೆ ನೀಲಿ ಚಿತ್ರದಲ್ಲಿ ನಟಿಸ್ತೀರಾ ಎಂದು ಕೇಳಿದ ಯೂಟ್ಯೂಬರ್‌ಗೆ ಹಿಗ್ಗಾ-ಮುಗ್ಗಾ ಕ್ಲಾಸ್
ನಟಿ ತನಿಷಾ ಕುಪ್ಪಂಡ
Follow us
ಆಯೇಷಾ ಬಾನು
|

Updated on:Apr 02, 2023 | 7:46 AM

ಮಂಗಳ ಗೌರಿ ಮದುವೆ ಧಾರಾವಾಹಿ ಮೂಲಕ ಪ್ರೇಕ್ಷಕರ ಮನಗೆದ್ದ ನಟಿ ತನಿಷಾ ಕುಪ್ಪಂಡ(Tanisha kuppada) ಇದೀಗ ‘ಪೆಂಟಗನ್'(Pentagan)  ಸಿನಿಮಾದಲ್ಲಿ ಹಾಟ್‌ ಆಗಿ, ಬೋಲ್ಡ್ ಲುಕ್‌ನಲ್ಲಿ ಲಿಪ್‌ಲಾಕ್‌, ಬ್ಯಾಕ್‌ಲೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಐದು ಕತೆಗಳಿರುವ, ಐದು ಮಂದಿ ನಿರ್ದೇಶಕರಿಂದ ಮೂಡಿಬಂದಿರುವ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸದ್ಯ ಈಗ ನಟಿ ತನಿಷಾ ಮುಜುಗರದ ಸನ್ನಿವೇಶವನ್ನು ಎದುರಿಸಿದ್ದಾರೆ. ಹಾಗೂ ಯೂಟ್ಯೂಬರ್‌ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ನಟಿ ತನಿಷಾ ಅವರಿಗೆ ಯೂಟ್ಯೂಬರ್‌, ನೀವು ನ್ಯೂಡ್ ಫಿಲಂ ಮಾಡ್ತೀರಾ ಅಂತ ಪ್ರಶ್ನೆ ಕೇಳಿ ಕೆರಳಿಸಿದ್ದಾನೆ. ನ್ಯೂಡ್ ಮಾಡೋದು ಪೋರ್ನ್ ಸ್ಟಾರ್ ಮಾಡ್ತಾರೆ ಅಂತ ನಟಿ ತನಿಷಾ ಗರಂ ಆಗಿದ್ದಾರೆ. ಏಪ್ರಿಲ್ 7ರಂದು ತನಿಷಾ ನಟನೆಯ ಪೆಂಟಗನ್ ಸಿನಿಮಾ ರಿಲೀಸ್ ಆಗುತ್ತಿದ್ದು ನಟಿಯ ಇಂಟರ್ವೀವ್ ಮಾಡಲು ಬಂದಿದ್ದ ಯೂಟ್ಯೂಬರ್‌ ಈ ರೀತಿ ಪ್ರಶ್ನೆ ಕೇಳಿ ಪೇಜೆಗೆ ಸಿಲುಕಿದ್ದಾನೆ. ಈ ವೇಳೆ ನಟಿ ಗರಂ ಆಗಿದ್ದು ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಮಾತ್ರಕ್ಕೆ ನ್ಯೂಡ್ ಫಿಲಂ ಮಾಡೋಕೆ ಆಗುತ್ತಾ? ನಾವು ಪೋರ್ನ್ ಸ್ಟಾರ್ ಅಲ್ಲ. ಮಾತನಾಡುವ ಮುನ್ನ ಎಚ್ಚರ ಇರಲಿ. ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಯಾವ ನಟಿಯೂ ಪೋರ್ನ್ ಮಾಡಿಲ್ಲ. ಈ ರೀತಿ ಅಸಭ್ಯವಾಗಿ ಮಾತನಾಡಬೇಡಿ ಎಂದಿದ್ದಾರೆ.

ಇನ್ನು ಕಾಮನ ಬಿಲ್ಲು ಹಾಡಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದ ನಟಿ ತನಿಷಾಗೆ ಬೆತ್ತಲೆ ಸಿನಿಮಾ ಮಾಡ್ತೀರಾ ಅಂತ ಯೂಟ್ಯೂಬರ್‌ ಕೇಳಿದ್ದು ಅನೇಕರನ್ನು ಕೆರಳಿಸಿದೆ. ಈ ವೇಳೆ ತನಿಷಾ ಹಾಗು ಚಿತ್ರತಂಡ ಯೂಟ್ಯೂಬರ್‌ ಮೇಲೆ ಆಕ್ರೊಶ ವ್ಯಕ್ತಪಡಿಸಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ‘ವೀರಂ’ ಹಿಂದೆಯೇ ಬರಲಿದೆ ‘ಮಾಫಿಯಾ’, ಒಂದರಹಿಂದೊಂದು ಪ್ರಜ್ವಲ್ ದೇವರಾಜ್ ಸಿನಿಮಾ

ಐದು ಕತೆಗಳಿರುವ, ಐದು ಮಂದಿ ನಿರ್ದೇಶಕರಿಂದ ಮೂಡಿಬಂದಿರುವ ಪೆಂಟಗನ್ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಸಾಮಾಜಿಕ ಜಾಲತಾಣದ ಮೂಲಕ ಆಗುವ ಮೋಸ, ಅಪರಾಧ ಜಗತ್ತು, ಯವ ಪೀಳಿಗೆಯ ಭವಿಷ್ಯದ ಕುರಿತು ಈ ಸಿನಿಮಾ ಬೆಳಕು ಚೆಲ್ಲಿದೆ.

ಮೈಸೂರು ಪಾಕ್, ಕಾಮಾತುರಾಣಾ ನಭಯಂ, ನಲಜ್ಜ, ದೋಣಿಸಾಗಲಿ, ಮಿಸ್ಟರ್ ಗೋಪಿ ಕೆಫೆ ಸೇರಿ ಐದು ಕಥೆಗಳನ್ನು ಈ ಚಿತ್ರ ಹೊಂದಿದೆ. ಹಾಗೂ ಹಿರಿಯ ನಟ ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ಅನುಷಾ ರೈ, ವಂಶಿಕೃಷ್ಣ, ಅಪೂರ್ವ ಮೊದಲಾದವರು ನಟಿಸಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:46 am, Sun, 2 April 23

ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ