AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ಸಮಂತಾರ ಹೊಸ ಚಿತ್ರಕ್ಕೆ ಮೆಚ್ಚುಗೆಯ ಜೊತೆಗೆ ಟೀಕೆಯೂ ವ್ಯಕ್ತ

ಕೂಲಿಂಗ್ ಗ್ಲಾಸ್ ಧರಿಸಿ ಕಾರಿನಲ್ಲಿ ಕೂತು ಧ್ಯಾನ ಮಾಡುತ್ತಿರುವ ಸಮಂತಾ, ಕೆಲವರಿಂದ ಮೆಚ್ಚುಗೆ, ಕೆಲವರಿಂದ ಟೀಕೆ.

Samantha: ಸಮಂತಾರ ಹೊಸ ಚಿತ್ರಕ್ಕೆ ಮೆಚ್ಚುಗೆಯ ಜೊತೆಗೆ ಟೀಕೆಯೂ ವ್ಯಕ್ತ
ಸಮಂತಾ
ಮಂಜುನಾಥ ಸಿ.
|

Updated on: Apr 01, 2023 | 8:34 PM

Share

ಕಳೆದ ಮೂರು ವರ್ಷಗಳಲ್ಲಿ ನಾನಾ ಕಷ್ಟಗಳನ್ನು ಎದುರಿಸಿರುವ ಸಮಂತಾ (Samantha), ತಮ್ಮ ವೈಯಕ್ತಿಕ ಬಾದೆಗಳಿಂದ, ನೋವುಗಳಿಂದ ಹೊರಗೆ ಬರಲು ವ್ಯಾಯಾಮ ಹಾಗೂ ಅಧ್ಯಾತ್ಮಕ ಬೆಂಬಲ ಪಡೆದುಕೊಂಡಿದ್ದಾರೆ. ವಿಚ್ಛೇದನದ (Divorce) ಬಳಿಕ ನಟನೆ ಮೇಲೆ ಹೆಚ್ಚಿನ ಗಮನವಹಿಸಿರುವ ಸಮಂತಾ ಹೆಚ್ಚು ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ ಮಾತ್ರವಲ್ಲ ಭಿನ್ನ-ಭಿನ್ನ ಪಾತ್ರಗಳ ಮೂಲಕ ಪ್ರಯೋಗವನ್ನೂ ಮಾಡುತ್ತಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್​ನಲ್ಲಿ ಸಮಯ ನಿರ್ವಹಣೆ ಸಮಂತಾಗೆ ಕ್ಲಿಷ್ಟವಾಗಿದ್ದು, ತಾವು ಹೇಗೆ ಸಮಯ ನಿರ್ವಹಣೆ ಮಾಡುತ್ತೇನೆಂದು ಸೂಚಿಸಲು ಚಿತ್ರವೊಂದನ್ನು ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ಚಿತ್ರಕ್ಕೆ ಮೆಚ್ಚುಗೆಯ ಜೊತೆಗೆ ಟೀಕೆಯೂ ವ್ಯಕ್ತವಾಗಿದೆ.

ನಟಿಯರೆಂದ ಮೇಲೆ ಸೌಂದರ್ಯದ ಬಗ್ಗೆ ತ್ವಚೆಯ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಾಗುತ್ತದೆ. ಬ್ಯುಸಿ ನಟಿಯರೆಂದರೆ ಶೂಟಿಂಗ್​ಗಾಗಿ ಓಡಾಟವೂ ಸಾಕಷ್ಟಿರುತ್ತದೆ. ನಟಿ ಸಮಂತಾ ಸಹ ಇದರಿಂದ ಹೊರತೇನಲ್ಲ. ವೈಯಕ್ತಿಕ ಜೀವನದ ಜಂಜಡಗಳಿಂದ ಝರ್ಜರಿತವಾಗಿದ್ದ ಸಮಂತಾ ಮನಸ್ಸನ್ನು ಶಾಂತವಾಗಿರಿಸಲು ಧ್ಯಾನ, ಪೂಜೆಗಳನ್ನು ಸಹ ಮಾಡುತ್ತಾರೆ. ಆದರೆ ಇವುಗಳನ್ನೆಲ್ಲ ಪ್ರತ್ಯೇಕವಾಗಿ ಮಾಡಲು ಪಾಪ ಸಮಂತಾಗೆ ಸಮಯದ ಅಭಾವ ಹಾಗಾಗಿ ಇವೆಲ್ಲವನ್ನೂ ಒಟ್ಟೊಟ್ಟಿಗೆ ಮಾಡುತ್ತಾರೆ!

ಹೌದು, ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದು, ಬಿಳಿ ಬಣ್ಣದ ಕುರ್ತಾ ಮಾದರಿಯ ಉಡುಗೆ ತೊಟ್ಟಿರುವ ಸಮಂತಾ, ಮುಖದ ತ್ವಚೆಯ ಆರೋಗ್ಯಕ್ಕಾಗಿ ಫೇಸ್ ಮಾಸ್ಕ್ ಹಾಕಿಕೊಂಡು ಕಾರಿನಲ್ಲಿ ಕುಳಿತಿರುವ ಚಿತ್ರ ಹಂಚಿಕೊಂಡಿದ್ದಾರೆ. ವಿಶೇಷತೆಯೆಂದರೆ ಕಾರಿನಲ್ಲಿ ಪ್ರಯಾಣಿಸುತ್ತಲೇ ಅವರು ಜಪಮಾಲೆ ಹಿಡಿದುಕೊಂಡು ಧ್ಯಾನ ಸಹ ಮಾಡುತ್ತಿದ್ದಾರೆ. ತಾವು ಸಮಯದ ನಿರ್ವಹಣೆ ಮಾಡುವ ವಿಧಾನವನ್ನು ಸಮಂತಾ ಚಿತ್ರದ ಮೂಲಕ ತಿಳಿಸಿದ್ದಾರೆ.

ಸಮಂತಾರ ಈ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಿತ್ರಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರಿನಲ್ಲಿ ಹೋಗುವಾಗಲು ಧ್ಯಾನ ಮಾಡುತ್ತಿರುವ ಸಮಂತಾರ ಅಧ್ಯಾತ್ಮ ಪ್ರೀತಿಗೆ ಭೇಷ್ ಎಂದಿದ್ದಾರೆ ಆದರೆ ಕೆಲವರು ಟೀಕೆಯನ್ನು ಮಾಡಿದ್ದಾರೆ. ಹಲವರಿಗೆ ಸಮಂತಾ ಧರಿಸಿರುವ ಕೂಲಿಂಗ್ ಗ್ಲಾಸ್ ಕಣ್ಣು ಕುಕ್ಕಿದೆ. ಧ್ಯಾನ ಮಾಡುವಾಗ ಸನ್​ಗ್ಲಾಸ್​ ಏತಕ್ಕೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಧ್ಯಾನ ಮಾಡಲು ಸೂಕ್ತವಾದ ಸ್ಥಳವಿರಬೇಕು, ಇದು ಧ್ಯಾನಕ್ಕೆ ಮಾಡಿದ ಅಪಮಾನ ಎಂದಿದ್ದಾರೆ.

ಇದನ್ನೂ ಓದಿ: Samantha: ಪ್ರತಿದಿನವೂ ಭಯದಲ್ಲಿಯೇ ಬದುಕುತ್ತಿದ್ದೇನೆ, ಆದರೆ…: ನಟಿ ಸಮಂತಾ

ಸಮಂತಾ ದೈವ ಭಕ್ತೆ, ವಿಚ್ಛೇದನ ಘೋಷಿಸುವ ಮುನ್ನವೂ ಅವರು ಹಲವು ದೇವಾಲಯಗಳನ್ನು ಸುತ್ತಿದ್ದರು. ಮನೆಯಲ್ಲಿಯೂ ಪ್ರತಿನಿತ್ಯ ಪೂಜೆಗಳನ್ನು ಮಾಡುವುದಾಗಿ, ಧ್ಯಾನ ಮಾಡುವುದಾಗಿ ಹೇಳಿಕೊಂಡಿದ್ದರು. ಮನೆಯಲ್ಲಿ ದೇವರ ಮುಂದೆ ಕೂತು ಧ್ಯಾನ ಮಾಡುತ್ತಿರುವ ಚಿತ್ರವನ್ನು ಸಮಂತಾ ಕೆಲ ದಿನಗಳ ಹಿಂದೆ ಹಂಚಿಕೊಂಡಿದ್ದರು.

ಸಿನಿಮಾಗಳ ವಿಷಯಕ್ಕೆ ಮರಳವುದಾದರೆ ಸಮಂತಾ ನಟನೆಯ ಶಾಕುಂತಲಂ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಅದರ ಹಿಂದೆಯೇ ವಿಜಯ್ ದೇವರಕೊಂಡ ಜೊತೆ ನಟಿಸಿರುವ ಖುಷಿ ಸಿನಿಮಾ ತೆರೆಗೆ ಬರಲಿದೆ. ಬಾಲಿವುಡ್​ನ ಹೊಸ ವೆಬ್ ಸರಣಿ ಸಿಟಾಡೆಲ್​ನಲ್ಲಿಯೂ ಸಮಂತಾ ನಟಿಸಿದ್ದು, ಅದೂ ಸಹ ಇದೇ ವರ್ಷದಲ್ಲಿ ಬಿಡುಗಡೆ ಆಗಲಿದೆ. ಇವುಗಳ ನಡುವೆ ಇಂಗ್ಲೀಷ್ ಸಿನಿಮಾ ಅರೇಂಜ್​ಮೆಂಟ್ಸ್ಆಫ್ ಲವ್ ಗೂ ಒಪ್ಪಿಗೆ ಸೂಚಿಸಿದ್ದು, ಆ ಸಿನಿಮಾದ ಚಿತ್ರೀಕರಣ ಇನ್ನಷ್ಟೆ ಆರಂಭವಾಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ