AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಐಟಂ ಸಾಂಗ್ ಮಾಡಬೇಡ, ಮನೆಯಲ್ಲೇ ಇರು ಎಂದಿದ್ರು‘; ವಿಚ್ಛೇದನದ ದಿನಗಳನ್ನು ನೆನಪಿಸಿಕೊಂಡ ಸಮಂತಾ

ಸಮಂತಾ ಆಗತಾನೇ ವಿಚ್ಛೇದನ ಘೋಷಿಸಿದ್ದರು. ಸಮಂತಾ ತೆಗೆದುಕೊಂಡ ಕಠಿಣ ನಿರ್ಧಾರಗಳಲ್ಲಿ ಇದು ಕೂಡ ಒಂದಾಗಿತ್ತು.

‘ಐಟಂ ಸಾಂಗ್ ಮಾಡಬೇಡ, ಮನೆಯಲ್ಲೇ ಇರು ಎಂದಿದ್ರು‘; ವಿಚ್ಛೇದನದ ದಿನಗಳನ್ನು ನೆನಪಿಸಿಕೊಂಡ ಸಮಂತಾ
ಸಮಂತಾ-ನಾಗ ಚೈತನ್ಯ
TV9 Web
| Edited By: |

Updated on: Mar 29, 2023 | 11:58 AM

Share

ಸಮಂತಾ ರುತ್ ಪ್ರಭು (Samantha Ruth Prabhu) ಜೀವನದಲ್ಲಿ ನಡೆದ ಅತೀ ದುಃಖದ ಘಟನೆ ಎಂದರೆ ಅದು ವಿಚ್ಛೇದನ. 2021ರ ಅಕ್ಟೋಬರ್ ತಿಂಗಳಲ್ಲಿ ಸಮಂತಾ ಹಾಗೂ ನಾಗ ಚೈತನ್ಯ (Naga Chaitanya) ವಿಚ್ಛೇದನ ಪಡೆಯೋ ನಿರ್ಧಾರವನ್ನು ಘೋಷಿಸಿದರು. ಇದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಅನೇಕರು ಈ ನಿರ್ಧಾರದಿಂದ ಶಾಕ್​​ಗೆ ಒಳಗಾದರು. ಆಪ್ತರಿಗೆ ಈ ಸುದ್ದಿಯನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗಲೇ ಇಲ್ಲ. ಇದೇ ಸಂದರ್ಭದಲ್ಲಿ ಸಮಂತಾಗೆ ‘ಪುಷ್ಪ’ ಸಿನಿಮಾದ ಐಟಂ ಸಾಂಗ್​ನಲ್ಲಿ ನಟಿಸೋ ಅವಕಾಶ ಬಂತು. ಇದನ್ನು ಸಮಂತಾ ಒಪ್ಪಿಕೊಂಡು ನಟಿಸಿದರು. ಆದರೆ, ಇದನ್ನು ಮಾಡದಂತೆ ಕೆಲವರು ಸೂಚಿಸಿದ್ದರು.

ಸಮಂತಾ ಆಗತಾನೇ ವಿಚ್ಛೇದನ ಘೋಷಿಸಿದ್ದರು. ಸಮಂತಾ ತೆಗೆದುಕೊಂಡ ಕಠಿಣ ನಿರ್ಧಾರಗಳಲ್ಲಿ ಇದು ಕೂಡ ಒಂದಾಗಿತ್ತು. ಈ ನಿರ್ಧಾರ ಘೋಷಿಸಿದ ನಂತರ ಸಮಂತಾಗೆ ‘ಹೂ ಅಂತೀಯಾ ಮಾವ, ಊಹು ಅಂತೀಯಾ ಮಾವ..’ ಸಾಂಗ್ ಆಫರ್ ಬಂತು. ಈ ಬಗ್ಗೆ ಅವರು ಮಾತನಾಡಿದ್ದಾರೆ. ಇದನ್ನು ಒಪ್ಪಿಕೊಂಡಿದ್ದೇಕೆ ಎಂದು ಅವರು ಹೇಳಿದ್ದಾರೆ.

‘ಪುಷ್ಪ ಚಿತ್ರದ ಐಟಂ ಸಾಂಗ್ ಆಫರ್ ನೀಡಿದಾಗ ನಾನು ವಿಚ್ಛೇದನ ಪ್ರಕ್ರಿಯೆಯಲ್ಲಿದ್ದೆ. ಈ ಹಾಡನ್ನು ಮಾಡದಂತೆ ಕುಟುಂಬದವರು, ಗೆಳೆಯರು ಸೂಚಿಸಿದ್ದರು. ಐಟಂ ಸಾಂಗ್​ನೆಲ್ಲ ಮಾಡಬೇಡ ಎಂದು ಕಿವಿಮಾತು ಹೇಳಿದ್ದರು. ಅವರು ಹೇಳಿದ್ದರ ಹಿಂದೆ ಒಳ್ಳೆಯ ಉದ್ದೇಶ ಇತ್ತು. ಆದರೆ, ಅದನ್ನು ನಾನು ಮಾಡೋ ನಿರ್ಧಾರಕ್ಕೆ ಬಂದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ನಟಿ ಜೊತೆ ಲಂಡನ್​ನಲ್ಲಿ ನಾಗ ಚೈತನ್ಯ ಕದ್ದುಮುಚ್ಚಿ ಡೇಟಿಂಗ್​; ಫೋಟೋ ಲೀಕ್ ಮಾಡಿದವರು ಯಾರು?

‘ನಾನೇಕೆ ಅವಿತುಕೊಳ್ಳಲಿ? ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಯಾವುದೇ ಕ್ರೈಮ್ ಮಾಡಿರಲಿಲ್ಲ. ಹೀಗಾಗಿ, ಅವಿತುಕೂರೋ ಮಾತೇ ಇರಲಿಲ್ಲ. ನಾನು ನನ್ನ ದಾಂಪತ್ಯ ಜೀವನಕ್ಕೆ ಶೇ. 100 ನೀಡಿದ್ದೆ. ಆದಾಗ್ಯೂ ಸಂಬಂಧ ಉಳಿದುಕೊಂಡಿಲ್ಲ. ನಾನು ಮಾಡದೇ ಇರುವ ಕೆಲಸಕ್ಕೆ ನಾನು ಪಶ್ಚಾತಾಪ ಪಡೋದಿಲ್ಲ’ ಎಂದಿದ್ದಾರೆ ಸಮಂತಾ.

ಶೋಭಿತಾ ಧುಲಿಪಾಲ್ ಜೊತೆ ನಾಗ ಚೈತನ್ಯ

ಸಮಂತಾ ಹಾಗೂ ನಾಗ ಚೈತನ್ಯ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಆದರೆ, ಇದನ್ನು ಈ ಜೋಡಿ ತಳ್ಳುತ್ತಲೇ ಬಂದಿದ್ದರು. ಈಗ ಈ ವಿಚಾರಕ್ಕೆ ಸಾಕ್ಷಿ ಸಿಕ್ಕಿದೆ. ಶೋಭಿತಾ ಹಾಗೂ ನಾಗ ಚೈತನ್ಯ ಲಂಡನ್​ನಲ್ಲಿ ಸುತ್ತಾಡುತ್ತಿರುವ ಫೋಟೋಗಳು ವೈರಲ್ ಆಗಿವೆ. ಇಬ್ಬರೂ ಶೀಘ್ರವೇ ಮದುವೆ ಆಗಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್