ನಟಿ ಜೊತೆ ಲಂಡನ್​ನಲ್ಲಿ ನಾಗ ಚೈತನ್ಯ ಕದ್ದುಮುಚ್ಚಿ ಡೇಟಿಂಗ್​; ಫೋಟೋ ಲೀಕ್ ಮಾಡಿದವರು ಯಾರು?

Sobhita Dhulipala: ನಾಗ ಚೈತನ್ಯ ಅವರು ಶೋಭಿತಾ ಜೊತೆ ಡೇಟಿಂಗ್ ಆರಂಭಿಸಿದ್ದಾರೆ ಎನ್ನಲಾಗಿದೆ. ಈ ಮೊದಲೇ ಈ ಬಗ್ಗೆ ವರದಿ ಆಗಿತ್ತಾದರೂ ಯಾವುದೇ ಫೋಟೋ ಸಾಕ್ಷಿ ಸಿಕ್ಕಿರಲಿಲ್ಲ. ಆದರೆ, ಈಗ ನಾಗ ಚೈತನ್ಯ ಸಿಕ್ಕಿ ಬಿದ್ದಿದ್ದಾರೆ.

ನಟಿ ಜೊತೆ ಲಂಡನ್​ನಲ್ಲಿ ನಾಗ ಚೈತನ್ಯ ಕದ್ದುಮುಚ್ಚಿ ಡೇಟಿಂಗ್​; ಫೋಟೋ ಲೀಕ್ ಮಾಡಿದವರು ಯಾರು?
ಲಂಡನ್​ನಲ್ಲಿ ಶೋಭಿತಾ-ನಾಗ ಚೈತನ್ಯ
Follow us
ರಾಜೇಶ್ ದುಗ್ಗುಮನೆ
|

Updated on:Mar 31, 2023 | 10:30 AM

ನಟಿ ಸಮಂತಾ (Samantha) ಹಾಗೂ ನಾಗ ಚೈತನ್ಯ ವಿಚ್ಛೇದನ ಪಡೆಯಲು ಕಾರಣ ಏನು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಇವರು ಬೇರೆ ಆದ ವಿಚಾರದಲ್ಲಿ ಅನೇಕರಿಗೆ ಬೇಸರ ಇದೆ. ಅನೇಕ ವರ್ಷ ಪ್ರೀತಿಸಿ, ಮದುವೆ ಆದ  ಜೋಡಿ ಏಕಾಏಕಿ ಬೇರೆ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಈಗ ಇವೆಲ್ಲ ಹಳೆಯ ಕಥೆ. ಹೊಸ ಕಥೆ ಏನೆಂದರೆ ನಾಗ ಚೈತನ್ಯ ಹಾಗೂ ನಟಿ ಶೋಭಿತಾ (Sobhita Dhulipala) ಅವರು ಲಂಡನ್​ನಲ್ಲಿ ಡೇಟಿಂಗ್ ಮಾಡುತ್ತಿದ್ದಾರೆ. ಅಭಿಮಾನಿಯೋರ್ವ ಹಂಚಿಕೊಂಡ ಫೋಟೋದಿಂದ ಈ ವಿಚಾರ ರಿವೀಲ್ ಆಗಿದೆ. ಈ ಫೋಟೋಗೆ ವಿವಿಧ ರೀತಿಯಲ್ಲಿ ಕಮೆಂಟ್​ಗಳು ಬರುತ್ತಿವೆ.

ಸಮಂತಾ ಹಾಗೂ ನಾಗ ಚೈತನ್ಯ 2021ರ ಅಕ್ಟೋಬರ್​​ನಲ್ಲಿ ವಿಚ್ಛೇದನ ಪಡೆದರು. ಇವರು ಬೇರೆ ಆಗಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿತು. ಇದಾದ ಕೆಲವೇ ತಿಂಗಳಲ್ಲಿ ನಾಗ ಚೈತನ್ಯ ಅವರು ಶೋಭಿತಾ ಜೊತೆ ಡೇಟಿಂಗ್ ಆರಂಭಿಸಿದ್ದಾರೆ ಎನ್ನಲಾಗಿದೆ. ಈ ಮೊದಲೇ ಈ ಬಗ್ಗೆ ವರದಿ ಆಗಿತ್ತಾದರೂ ಯಾವುದೇ ಫೋಟೋ ಸಾಕ್ಷಿ ಸಿಕ್ಕಿರಲಿಲ್ಲ. ಆದರೆ, ಈಗ ನಾಗ ಚೈತನ್ಯ ಸಿಕ್ಕಿ ಬಿದ್ದಿದ್ದಾರೆ.

ಲಂಡನ್​ ಐಷಾರಾಮಿ ಹೋಟೆಲ್ ಒಂದರಲ್ಲಿ ಭಾರತ ಮೂಲದ ಸುರೇಂದರ್ ಮೋಹನ್ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ಹೋಟೆಲ್​ಗೆ ನಾಗ ಚೈತನ್ಯ ಹಾಗೂ ಶೋಭಿತಾ ಆಗಮಿಸಿದ್ದರು. ಈ ವೇಳೆ  ನಾಗ ಚೈತನ್ಯ ಜೊತೆ ಸುಂದರ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಹಿಂಭಾಗದಲ್ಲಿ ಶೋಭಿತಾ ಕೂಡ ಕಾಣಿಸಿದ್ದಾರೆ. ‘ಇಷ್ಟು ದಿನ ಡೇಟಿಂಗ್ ವಿಚಾರವನ್ನು ಅಲ್ಲಗಳೆಯುತ್ತಲೇ ಬರುತ್ತಿದ್ದ ನಾಗ ಚೈತನ್ಯ ಅವರು ಈಗ ರೆಡ್​ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದಾರೆ’ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಈ ಫೋಟೋನ ಇನ್​ಸ್ಟಾಗ್ರಾಮ್​​ನಲ್ಲಿ ಶೇರ್​ ಮಾಡಿಕೊಂಡಿದ್ದ ಸುಂದರ್ ಅವರು ನಂತರ ಅದನ್ನು ಡಿಲೀಟ್ ಮಾಡಿದ್ದಾರೆ.

ಇತ್ತೀಚೆಗೆ ಹಿಂದಿ ವೆಬ್ ಸೀರಿಸ್ ‘ದಿ ನೈಟ್ ಮ್ಯಾನೇಜರ್’ ಡಿಸ್ನಿ ಪ್ಲಸ್ ಹಾಟ್​ಸ್ಟಾರ್ ಮೂಲಕ ಪ್ರಸಾರ ಕಂಡಿತು. ಇದರಲ್ಲಿ ಶೋಭಿತಾ ಧುಲಿಪಾಲ್ ನಟಿಸಿದ್ದರು. ಅವರು ಸಖತ್ ಬೋಲ್ಡ್ ಆಗಿ ಮಿಂಚಿದ್ದಾರೆ. ಈ ಸೀರಿಸ್​​ನ ಮುಂದಿನ ಭಾಗ ಇನ್ನು ಕೆಲವೇ ತಿಂಗಳಲ್ಲಿ ರಿಲೀಸ್ ಆಗಲಿದ್ದು, ಅದರಲ್ಲಿ ಅವರು ಮತ್ತಷ್ಟು ಬೋಲ್ಡ್ ಅವತಾರ ತಾಳಲಿದ್ದಾರಂತೆ. ಈ ಮೊದಲು ಸಮಂತಾ ಅವರು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರಿಂದಲೇ ನಾಗ ಚೈತನ್ಯ ವಿಚ್ಛೇದನ ನೀಡಿದರು ಎನ್ನುವ ಸುದ್ದಿ ಹರಿದಾಡಿತ್ತು. ಇದನ್ನು ತಳ್ಳಿ ಹಾಕಲಾಗಿತ್ತು. ಶೋಭಿತಾ ಅವರಿಂದಾಗಿ ಸಮಂತಾ ಜೊತೆ ನಾಗ ಚೈತನ್ಯ ವಿಚ್ಛೇದನ ಪಡೆದರೇ ಎನ್ನುವ ಅನುಮಾನ ಅನೇಕರಲ್ಲಿ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:19 am, Wed, 29 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ