AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ಪ್ರತಿದಿನವೂ ಭಯದಲ್ಲಿಯೇ ಬದುಕುತ್ತಿದ್ದೇನೆ, ಆದರೆ…: ನಟಿ ಸಮಂತಾ

ನಟಿ ಸಮಂತಾ ಕಳೆದ ಮೂರು ವರ್ಷಗಳಲ್ಲಿ ಬಹಳ ಏರಿಳಿತಗಳನ್ನು ಕಂಡಿದ್ದಾರೆ. ವಿಚ್ಛೇದನ, ನಿಂದನೆ, ಅಪಮಾನ, ಸುಳ್ಳು ಆರೋಪಗಳನ್ನು ಎದುರಿಸಿದ್ದಾರೆ. ತೀವ್ರ ಅನಾರೋಗ್ಯದಿಂದಲೂ ಬಳಲಿ ಮತ್ತೆ ಪುಟಿದೆದ್ದು ಬಂದಿದ್ದಾರೆ. ಆದರೆ ಈಗಲೂ ತಾವು ಪ್ರತಿದಿನವೂ ಭಯದಲ್ಲಿಯೇ ಬದುಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

Samantha: ಪ್ರತಿದಿನವೂ ಭಯದಲ್ಲಿಯೇ ಬದುಕುತ್ತಿದ್ದೇನೆ, ಆದರೆ...: ನಟಿ ಸಮಂತಾ
ಸಮಂತಾ
ಮಂಜುನಾಥ ಸಿ.
|

Updated on: Mar 29, 2023 | 4:27 PM

Share

ನಟಿ ಸಮಂತಾ (Samantha) ಈಗ ಬಬ್ಲಿ ಗರ್ಲ್ ಅಲ್ಲ, ಗಟ್ಟಿಗಿತ್ತಿ. ಕಳೆದ ಕೆಲ ವರ್ಷಗಳಲ್ಲಿ ಸಾಕಷ್ಟು ಏರಿಳಿತಗಳನ್ನು ಜೀವನದಲ್ಲಿ ಕಂಡಿರುವ ಸಮಂತಾ ತಮ್ಮನ್ನು ತಾವು ಎಲ್ಲ ಪರಿಸ್ಥಿತಿಗಳಿಗೂ ಸಿದ್ಧಗೊಳಿಸಿಕೊಂಡಿದ್ದಾರೆ. ವಿಚ್ಛೇದನ ಅನಾರೋಗ್ಯ, ಮೋಸ, ನಿಂದನೆ, ಅಪಮಾನ ಎಲ್ಲವನ್ನು ಕಳೆದ ಮೂರು ವರ್ಷಗಳಲ್ಲಿ ಕಂಡ ಸಮಂತಾ ಎಲ್ಲವನ್ನೂ ದಿಟ್ಟವಾಗಿ ಎದುರಿಸಿ ನಿಂತಿದ್ದಾರೆ. ಹಲವಾರು ಹೆಣ್ಣುಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಮಾತನಾಡಿರುವ ನಟಿ ಸಮಂತಾ, ತಾವು ಪ್ರತಿದಿನವೂ ಭಯದಲ್ಲಿಯೇ ಬದುಕುತ್ತಿರುವುದಾಗಿ ಹೇಳಿದ್ದಾರೆ.

ಸಮಂತಾ ನಟನೆಯ ಶಾಕುಂತಲಂ (Shakunthalam) ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸಮಂತಾ ತೊಡಗಿಕೊಂಡಿದ್ದು, ಪ್ರಮೋಷನಲ್ ಇವೆಂಟ್​ಗಳನ್ನು, ಸರಣಿ ಸಂದರ್ಶನಗಳನ್ನು ನೀಡುತ್ತಿದ್ದಾರೆ ಸಮಂತಾ. ಇಂಥಹುದೇ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದ ಸಮಂತಾ, ತಮ್ಮ ಮಾನಸಿಕ ಸ್ಥಿತಿಯ ಬಗ್ಗೆ ತಮ್ಮ ಪ್ರತಿದಿನದ ಜೀವನದ ಬಗ್ಗೆ ಮಾತನಾಡಿದ್ದು, ಪ್ರತಿದಿನವೂ ತಾವು ಭಯದಲ್ಲಿಯೇ ಬದುಕುತ್ತಿರುವುದಾಗಿ ಹೇಳಿದ್ದಾರೆ.

ಶಕುಂತಲಂ ಸಿನಿಮಾದ ಆಫರ್ ಬಂದಾಗ ಮೊದಲು ನಾನು ಒಪ್ಪಿಕೊಳ್ಳಲಿಲ್ಲ. ನಟಿಸುವುದಿಲ್ಲ ಎಂದು ಹೇಳಿಬಿಟ್ಟೆ. ನನಗೆ ಬಹಳ ಭಯವಾಗಿತ್ತು, ನಾನು ಶಕುಂತಲಾ ರೀತಿಯಲ್ಲಿಲ್ಲ. ಆಕೆಯ ವೈಭವ, ಸೂಕ್ಷ್ಮತೆ, ವೈಯ್ಯಾರ ಇದ್ಯಾವುದೂ ನನಗೆ ಇಲ್ಲ ಎನಿಸಿತು. ಅಲ್ಲದೆ ಆಗ ತಾನೆ ನಾನು ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯಲ್ಲಿ ರಾಜಿ ಪಾತ್ರದಲ್ಲಿ ನಟಿಸಿದ್ದೆ. ಅದಕ್ಕಾಗಿ ದೇಹವನ್ನು ಸಾಕಷ್ಟು ಬದಲಾಯಿಸಿಕೊಂಡಿದ್ದೆ. ಶಕುಂತಲಾ ಪಾತ್ರಕ್ಕೆ ಬೇಕಾದ ಆಂಗಿಕ ಹಾಗೂ ವ್ಯಕ್ತಿತ್ವ ಎರಡೂ ನನಗೆ ಇರಲಿಲ್ಲ ಹಾಗಾಗಿ ನಾನು ಬೇಡ ಎಂದುಬಿಟ್ಟಿದ್ದೆ ಎಂದಿದ್ದಾರೆ ಸಮಂತಾ.

ಇದನ್ನೂ ಓದಿ: ‘ಐಟಂ ಸಾಂಗ್ ಮಾಡಬೇಡ, ಮನೆಯಲ್ಲೇ ಇರು ಎಂದಿದ್ರು‘; ವಿಚ್ಛೇದನದ ದಿನಗಳನ್ನು ನೆನಪಿಸಿಕೊಂಡ ಸಮಂತಾ

ಆದರೆ ಕಳೆದ ಮೂರು ವರ್ಷಗಳಲ್ಲಿ ನಾನು ಒಂದು ಕಲಿತಿದ್ದೇನೆ. ನನಗೆ ಯಾವ ವಿಷಯದ ಬಹಳ ಭಯವಾಗುತ್ತದೆಯೋ ಆ ಅದನ್ನು ಮಾಡಲೇ ಬೇಕು ಎಂಬುದನ್ನು ನಾನು ಕಲಿತಿದ್ದೇನೆ. ನನಗೆ ಭಯ ಆಗುವುದಿಲ್ಲ ಎಂದಲ್ಲ. ಬಹಳ ಭಯವಾಗುತ್ತದೆ ಆದರೆ ಅದನ್ನು ಎದುರಿಸುತ್ತೇನೆ, ಎದುರಿಸುವುದನ್ನು ಕಲಿತಿದ್ದೇನೆ. ಪ್ರತಿದಿನವೂ ನನಗೆ ಭಯವಾಗುತ್ತದೆ ಆದರೆ ಅದನ್ನು ಎದುರಿಸುತ್ತಲೇ ಬದುಕುತ್ತಿದ್ದೇನೆ. ಅದೇ ಕಾರಣಕ್ಕೆ ನಾನು ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಬದಲಾಗಿದ್ದೇನೆ. ವ್ಯಕ್ತಿಯಾಗಿ ನಟಿಯಾಗಿ ಬದಲಾವಣೆ ಕಾಣುತ್ತಿದ್ದೇನೆ ಎಂದಿದ್ದಾರೆ ಸಮಂತಾ.

ಶಾಕುಂತಲಂ ಸಿನಿಮಾದ ಲುಕ್ ಟೆಸ್ಟ್ ಮಾಡಿಸಿದಾಗ ಸಮಂತಾಗೆ ಇದು ಆಗುವ ಕೆಲಸ ಅಲ್ಲ ಎನಿಸಿತಂತೆ. ಏಕೆಂದರೆ ಜಿಮ್​ನಲ್ಲಿ ಅತಿಯಾಗಿ ವರ್ಕೌಟ್ ಮಾಡಿ ಕೈ, ಹೊಟ್ಟೆ ಭಾಗವೆಲ್ಲ ಬಹಳ ಬದಲಾಗಿಬಿಟ್ಟಿದ್ದವಂತೆ. ಶಾಕುಂತಲಾ ರೀತಿಯ ರಾಣಿಯ ಪಾತ್ರಕ್ಕೆ ಬೇಕಾದ ದೇಹ ಅವರದ್ದಾಗಿರಲಿಲ್ಲವಂತೆ. ಆದರೆ ನಿರ್ದೇಶಕ ಗುಣಶೇಖರ್ ಸಮಯ ನೀಡಿ ದೇಹವನ್ನು ಪಾತ್ರಕ್ಕೆ ಹೊಂದುವ ರೀತಿಯಲ್ಲಿ ಬದಲಾಯಿಸಿಕೊಳ್ಳಲು ಸೂಚಿಸಿದ್ದಾರೆ. ಬಳಿಕ ಜಿಮ್​ನಲ್ಲಿ ವೇಟ್​ಲಿಫ್ಟಿಂಗ್ ಇನ್ನಿತರೆಗಳನ್ನು ತಗ್ಗಿಸಿ ಪಾತ್ರಕ್ಕೆ ಹೊಂದುವಂತೆ ತಮ್ಮನ್ನು ಬದಲಾಯಿಸಿಕೊಂಡಿದ್ದಾರೆ ಸಮಂತಾ.

ಶಾಕುಂತಲಾ ಪಾತ್ರದ ಜೊತೆಗೆ ತಮ್ಮನ್ನು ಕನೆಕ್ಟ್ ಮಾಡಿಕೊಳ್ಳುವ ಸಮಂತಾ, ಆಕೆ ಜೀವನದಲ್ಲಿ ಅದೆಷ್ಟು ಕಷ್ಟಗಳನ್ನು ಅನುಭವಿಸಿದ್ದಾಳೆ. ಆದರೆ ಎಲ್ಲವನ್ನೂ ಬಹಳ ತಾಳ್ಮೆಯಿಂದ, ಗೌರವಯುತವಾಗಿ ಒಪ್ಪಿಕೊಂಡು ಅವನ್ನು ಎದುರಿಸಿದ್ದಾರೆ. ಅದೆಷ್ಟು ಸಾವಿರ ವರ್ಷಗಳ ಹಿಂದಿನ ಕತೆಯಾದರೂ ಆ ಕತೆ ಶಾಕುಂತಲಾ ಪಾತ್ರ ಇಂದಿಗೂ ಸಲ್ಲುತ್ತದೆ ಎಂದಿದ್ದಾರೆ ಸಮಂತಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ