ರಾಜ್​ಕುಮಾರ್ ಸದಾ ಬಿಳಿ ಪಂಚೆ, ಶರ್ಟ್​ನಲ್ಲೇ ಇರುತ್ತಿದ್ದರೇಕೆ? ಆ ಘಟನೆಯೇ ಕಾರಣ

ರಾಜ್ಕುಮಾರ್ ಅವರು ತಮ್ಮ ಜೀವನದ ಒಂದು ಹಂತದಲ್ಲಿ ಬಿಳಿ ಪಂಚೆ ಮತ್ತು ಶರ್ಟ್ ಧರಿಸಲು ಆರಂಭಿಸಿದರು. ಇದಕ್ಕೆ ಕಾರಣ ಮದ್ರಾಸ್‌ನಲ್ಲಿ ಒಬ್ಬ ಅಭಿಮಾನಿಯು ಅವರಿಗೆ ಹೇಳಿದ ಮಾತು. ಅಭಿಮಾನಿಯ ಮಾತು ಅವರ ಮೇಲೆ ಆಳವಾದ ಪ್ರಭಾವ ಬೀರಿತು. ಈ ಘಟನೆಯ ನಂತರ ಅವರು ಸದಾ ಸರಳ ಉಡುಗೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಗೌರವವನ್ನು ಗಳಿಸಿದರು.

ರಾಜ್​ಕುಮಾರ್ ಸದಾ ಬಿಳಿ ಪಂಚೆ, ಶರ್ಟ್​ನಲ್ಲೇ ಇರುತ್ತಿದ್ದರೇಕೆ? ಆ ಘಟನೆಯೇ ಕಾರಣ
ರಾಜ್​ಕುಮಾರ್
Edited By:

Updated on: May 13, 2025 | 8:06 AM

ರಾಜ್​ಕುಮಾರ್ (Rajkumar) ಅವರು ಒಂದು ವಯಸ್ಸನ್ನು ದಾಟಿದ ಬಳಿಕ ಬಿಳಿ ಪಂಚೆ ಹಾಗೂ ಬಿಳಿ ಶರ್ಟ್​​​ನಲ್ಲೇ ಹೆಚ್ಚು ಕಾಣಿಸಿಕೊಂಡರು. ಇದಕ್ಕೆ ಕಾರಣ ಏನು ಎಂಬುದನ್ನು ಅವರು ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಈ ಬಗ್ಗೆ ಅವರು ಕೂಡ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಈಗ ರಾಜ್​ಕುಮಾರ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರೊಬ್ಬರು ಈ ಬಗ್ಗೆ ಮಾತನಾಡಿದ್ದಾರೆ. ರಾಜ್​ಕುಮಾರ್ ಬಿಳಿ ಪಂಚೆ ಹಾಗೂ ಶರ್ಟ್​ನಲ್ಲೇ ಕಾಣಿಸಿಕೊಳ್ಳುತ್ತಿದ್ದು ಏಕೆ ಎಂಬುದಕ್ಕೆ ಉತ್ತರ ಸಿಕ್ಕಿದೆ.

ರಾಜ್​ಕುಮಾರ್ ಅವರು ಸರಳತೆಗೆ ಮತ್ತೊಂದು ಹೆಸರಾಗಿದ್ದರು. ಸದಾ ಸಿಂಪಲ್ ಉಡುಗೆಯಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದರು. ಎಂದಿಗೂ ಅವರು ಡ್ರೆಸ್ ವಿಚಾರದಲ್ಲಿ ಮೆರೆದವರಲ್ಲ. ಅಷ್ಟೇ ಏಕೆ ದುಬಾರಿ ಕಾರುಗಳನ್ನು ತೆಗೆದುಕೊಂಡು ಓಡಾಡಿದವರಲ್ಲ. ರಾಜ್​ಕುಮಾರ್ ಸರಳತೆ ಮೂಲಕ ಗಮನ ಸೆಳೆದವರು. ಆದರೆ, ರಾಜ್​ಕುಮಾರ್ ಅವರು ಈ ಮೊದಲು ಜೀನ್ಸ್ ಹಾಕುತ್ತಿದ್ದರು. ಒಂದು ಘಟನೆ ಅವರನ್ನು ಬದಲಾಯಿಸಿತು.

ಇದನ್ನೂ ಓದಿ
ನನ್ನ ತಂದೆ ಪಾಕಿಸ್ತಾನದವರು ಎಂದಿದ್ದ ಶಾರುಖ್ ಖಾನ್; ಈ ಕಾರಣಕ್ಕೆ ಮೌನ?
‘ಕೂಲಿ’ ಸಿನಿಮಾದ ಬಹುತೇಕ ಶೂಟ್​ನ ಬಾಡಿ ಡಬಲ್​ ಮೂಲಕವೇ ಮುಗಿಸಿದ ನಿರ್ದೇಶಕ
ಕಲರ್ಸ್​​ ಧಾರಾವಾಹಿಯಲ್ಲಿ ಗೌತಮಿ ಜಾಧವ್; ಪ್ರೋಮೋ ಮೂಲಕ ಬಿಗ್ ಸರ್​ಪ್ರೈಸ್
ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನೆಲ್ಲ ಆಯ್ತು? ವಿವರಿಸಿದ ಜಿಜಿ

ಆರ್​ಜೆ ಮಯೂರ್ ಅವರು ನಡೆಸುತ್ತಿರುವ ‘ಗೋಲ್ಡ್ ಕ್ಲಾಸ್ ವಿತ್ ಮಯೂರ್’ ಯೂಟ್ಯೂಬ್ ಚಾನೆಲ್​ಗೆ ಹಿರಿಯ ನಿರ್ದೇಶಕ ಪ್ರವೀಣ್ ನಾಯಕ್ ಅವರು ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಅವರು ಈ ವಿಚಾರ ರಿವೀಲ್ ಮಾಡಿದ್ದಾರೆ. ರಾಜ್​ಕುಮಾರ್ ಬಗ್ಗೆ ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ.

ರಾಜ್​ಕುಮಾರ್ ಅವರು ಸ್ಟೈಲಿಶ್ ಆಗಿಯೇ ಓಡಾಡಿಕೊಂಡಿದ್ದರು. ಜೀನ್ಸ್ ಹಾಕುತ್ತಿದ್ದರು. ಆದರೆ, ಮದ್ರಾಸ್​​ನಲ್ಲಿ ಓರ್ವ ವ್ಯಕ್ತಿ ಹೇಳಿದ ಮಾತು ಅವರನ್ನು ಪ್ರಭಾವಿಗೊಳಿಸಿತು. ‘ರಾಜ್​ಕುಮಾರ್ ಅವರು ಮದ್ರಾಸ್ ವಿಮಾನ ನಿಲ್ದಾಣದಲ್ಲಿ ಇಳಿದು ಬಂದರು. ಆಗ ತಮಿಳಿನ ವ್ಯಕ್ತಿಯೊಬ್ಬರು ನಮಸ್ಕಾರ, ನಿಮ್ಮ ಸಿನಿಮಾಗಳನ್ನು ನೋಡುತ್ತೇನೆ ಎಂದು ರಾಜ್​ಕುಮಾರ್ ಬಳಿ ಹೇಳಿದರು’ ಎಂದು ಮಾತು ಆರಂಭಿಸಿದರು ಪ್ರವೀಣ್.

‘ನಿಮ್ಮನ್ನು ನೋಡಿದರೆ ಗೌರವ ಭಾವನೆ ಮೂಡುತ್ತದೆ. ಆದರೆ, ಈ ರೀತಿ ಜೀನ್ಸ್ ಹಾಕಿದರೆ ನಿಮ್ಮ ಪಾತ್ರಗಳೇ ನೆನಪಿಗೆ ಬರುತ್ತವೆ. ನಿಮಗೆ ಬಿಳಿ ಪಂಚೆ-ಶರ್ಟ್ ಚೆನ್ನಾಗಿ ಕಾಣುತ್ತದೆ. ಗೌರವ ಹಾಗೆಯೇ ಉಳಿಯುತ್ತದೆ’ ಎಂದರಂತೆ. ಇದು ರಾಜ್​ಕುಮಾರ್ ಮೇಲೆ ಸಾಕಷ್ಟು ಪ್ರಭಾವ ಬೀರಿತು.

ಇದನ್ನೂ ಓದಿ: ‘ಒಡಹುಟ್ಟಿದವರು’ ಸಿನಿಮಾ ಮಾಡಲು ರಾಜ್​ಕುಮಾರ್​ಗೆ ಎರಡು ಷರತ್ತು ಹಾಕಿದ್ದ ಅಂಬರೀಷ್

ರಾಜ್​ಕುಮಾರ್ ತಂದೆ ಕೂಡ ಬಿಳಿ ಪಂಚೆ, ಶರ್ಟ್ ಹಾಕುತ್ತಿದ್ದರು. ‘ಸ್ಟೈಲ್ ಮಾಡೋಕೆ ಜಾಗ ಇದೆ. ಅದುವೇ ರಂಗಭೂಮಿ. ಅಲ್ಲಿ ಮಾಡು’ ಎಂದು ರಾಜ್​ಕುಮಾರ್ ತಂದೆ ಹೇಳಿದ್ದರಂತೆ. ಅದು ಕೂಡ ರಾಜ್​ಕುಮಾರ್​ಗೆ ನೆನಪಿಗೆ ಬಂತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 8:04 am, Tue, 13 May 25

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us