Ramesh Aravind Birthday: ಕೈಕೋಳ ತೊಟ್ಟು ಬಂದ ಶಿವಾಜಿ ಸುರತ್ಕಲ್​; ಸೂಪರ್​ ಹಿಟ್​ ಚಿತ್ರದ ಸೀಕ್ವೆಲ್​ಗೆ ಸಿದ್ಧತೆ

Shivaji Surathkal 2: ರಮೇಶ್ ಅರವಿಂದ್​ ಜನ್ಮದಿನದ ಪ್ರಯುಕ್ತ ‘ಶಿವಾಜಿ ಸುರತ್ಕಲ್​ 2’ ಚಿತ್ರದ ಫಸ್ಟ್​ಲುಕ್​ ಪೋಸ್ಟರ್​ ಬಿಡುಗಡೆ ಆಗಿದೆ. ಅದನ್ನು ಕಂಡು ಅವರ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ರಮೇಶ್​ಗೆ ಹುಟ್ಟುಹಬ್ಬದ ಶುಭಕೋರಲಾಗುತ್ತಿದೆ.

Ramesh Aravind Birthday: ಕೈಕೋಳ ತೊಟ್ಟು ಬಂದ ಶಿವಾಜಿ ಸುರತ್ಕಲ್​; ಸೂಪರ್​ ಹಿಟ್​ ಚಿತ್ರದ ಸೀಕ್ವೆಲ್​ಗೆ ಸಿದ್ಧತೆ
ರಮೇಶ್ ಅರವಿಂದ್
Follow us
TV9 Web
| Updated By: ಮದನ್​ ಕುಮಾರ್​

Updated on: Sep 10, 2021 | 1:20 PM

ನಟ ರಮೇಶ್​ ಅರವಿಂದ್​ ಪಾಲಿಗೆ ಇಂದು (ಸೆ.10) ಎರಡೆರಡು ಸಂಭ್ರಮ. ಅವರ ಹುಟ್ಟುಹಬ್ಬದ ದಿನವೇ ಗೌರಿ-ಗಣೇಶ್​ ಹಬ್ಬ ಕೂಡ ಬಂದಿದೆ. ಈ ಖುಷಿಯನ್ನು ದುಪ್ಪಟ್ಟು ಮಾಡಲು ‘ಶಿವಾಜಿ ಸುರತ್ಕಲ್​ 2’ ಚಿತ್ರದ ಹೊಸ ಪೋಸ್ಟರ್​ ರಿಲೀಸ್​ ಆಗಿದೆ. ‘ಶಿವಾಜಿ ಸುರತ್ಕಲ್​’ ಸಿನಿಮಾ ಮಾಡಿದ್ದ ತಂಡವೇ ಸೇರಿಕೊಂಡು ಈಗ ಅದರ ಎರಡನೇ ಪಾರ್ಟ್​ ತಯಾರಿಸುತ್ತಿದೆ. ಆಕಾಶ್​ ಶ್ರೀವತ್ಸ ನಿರ್ದೇಶನ ಮಾಡುತ್ತಿದ್ದು, ರೇಖಾ ಕೆ.ಎನ್​. ಹಾಗೂ ಅನೂಪ್​ ಗೌಡ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

2020ರ ಆರಂಭದಲ್ಲಿ ಲಾಕ್​ಡೌನ್​ ಶುರು ಆಗುವುದಕ್ಕೂ ಮುನ್ನ ‘ಶಿವಾಜಿ ಸುರತ್ಕಲ್​’ ಸಿನಿಮಾ ತೆರೆಕಂಡು ಯಶಸ್ವಿಯಾಗಿತ್ತು. ಸಸ್ಪೆನ್ಸ್​-ಥ್ರಿಲ್ಲರ್​ ಕಥೆಯುಳ್ಳ ಚಿತ್ರ ಎಲ್ಲೆಡೆ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿರುವಾಗಲೇ ಲಾಕ್​ಡೌನ್​ ಜಾರಿ ಆಗಿದ್ದರಿಂದ ಪ್ರದರ್ಶನ ನಿಲ್ಲಿಸುವುದು ಅನಿವಾರ್ಯ ಆಯಿತು. ಬಳಿಕ ಓಟಿಟಿ ಮೂಲಕವೂ ಈ ಸಿನಿಮಾ ಹೆಚ್ಚಿನ ಜನರನ್ನು ತಲುಪಿತ್ತು. ಮೊದಲ ಪಾರ್ಟ್​ನಲ್ಲಿ ಇದ್ದ ಶಿವಾಜಿ ಸುರತ್ಕಲ್​ ಪಾತ್ರ ಎರಡನೇ ಪಾರ್ಟ್​​ನಲ್ಲೂ ಮುಂದುವರಿಯುತ್ತಿದೆ. ಪತ್ತೆದಾರಿ ಆಗಿರುವ ಆತ ಈಗ ಹೊಸ ಕೇಸ್​ ಭೇದಿಸಲು ಸಜ್ಜಾಗುತ್ತಿದ್ದಾನೆ.

ಮೊದಲ ಪಾರ್ಟ್​ಗೆ ‘ದಿ ಕೇಸ್​ ಆಫ್​ ರಣಗಿರಿ ರಹಸ್ಯ’ ಎಂಬ ಟ್ಯಾಗ್​ಲೈನ್​ ಇತ್ತು. ಈಗ ಎರಡನೇ ಪಾರ್ಟ್​ಗೆ ‘ದಿ ಮಿಸ್ಟೀರಿಯಸ್​ ಕೇಸ್​ ಆಫ್​ ಮಾಯಾವಿ’ ಎಂಬ ಟ್ಯಾಗ್​ಲೈನ್​ ಇದೆ. ಇದರ ಪೋಸ್ಟರ್​ ಗಮನ ಸೆಳೆಯುತ್ತಿದೆ. ಪತ್ತೇದಾರಿ ಆಗಿರುವ ಶಿವಾಜಿಯ ಕೈಗೆ ಕೋಳ ತೊಡಿಸಲಾಗಿದೆ. ಹಾಗಾದರೆ ಈ ಕೇಸ್​ನಲ್ಲಿ ಆತನೇ ಆರೋಪಿ ಆಗಲಿದ್ದಾನಾ? ಆ ಮಾಯಾವಿ ಯಾರು ಎಂಬ ಪ್ರಶ್ನೆ ಸಿನಿಪ್ರಿಯರ ಮನದಲ್ಲಿ ಮೂಡುವಂತಾಗಿದೆ.

ಅಕ್ಟೋಬರ್​ನಿಂದ ಈ ಚಿತ್ರಕ್ಕೆ ಶೂಟಿಂಗ್​ ಶುರುವಾಗಲಿದೆ. ಹಲವು ಗೆಟಪ್​ಗಳಲ್ಲಿ ರಮೇಶ್​ ಅರವಿಂದ್​ ಕಾಣಿಸಿಕೊಳ್ಳಲಿದ್ದಾರೆ. ಕರ್ನಾಟಕದ ಅನೇಕ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ರಾಧಿಕಾ ನಾರಾಯಣ್​ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಟೀಮ್​ ಜೊತೆ ಕೆಲಸ ಮಾಡಲು ರಮೇಶ್​ ಉತ್ಸುಕರಾಗಿದ್ದಾರೆ. ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಅವರು ಈ ಪೋಸ್ಟರ್​ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

ಚಿತ್ರರಂಗದ ಸಮಸ್ಯೆಗಳಿಗೆ ಟಿವಿ9 ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಪರಿಹಾರ ಕೇಳಿದ ರಮೇಶ್​ ಅರವಿಂದ್​

ಹೇಗಿತ್ತು ಗೊತ್ತಾ ರಮೇಶ್​ ಅರವಿಂದ್ ಮಗಳ ಮದುವೆ?: ಇಲ್ಲಿದೆ ಚಿತ್ರನೋಟ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್