ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರಿಗೆ ರಮ್ಯಾ ಬೆಂಬಲ

ಇತ್ತೀಚೆಗಷ್ಟೆ ಆಶಾ ಕಾರ್ಯಕರ್ತೆಯರೊಟ್ಟಿಗೆ ಸರ್ಕಾರದ ಪ್ರತಿನಿಧಿಗಳು ಸಂವಾದ ನಡೆಸಿ ಭರವಸೆಗಳನ್ನು ನೀಡಿದ್ದರಾದರೂ ಪ್ರತಿಭಟನೆಯಿಂದ ಕಾರ್ಯಕರ್ತೆಯರು ಹಿಂದೆ ಸರಿದಿಲ್ಲ, ಲಿಖಿತ ಆದೇಶದ ಒತ್ತಾಯ ಮಾಡಿದ್ದಾರೆ. ಹಲವು ಸಂಘಟನೆಗಳು ಪ್ರತಿಭಟನಾ ನಿರತ ಕಾರ್ಯಕರ್ತೆಯರಿಗೆ ಬೆಂಬಲ ನೀಡಿವೆ. ಇದೀಗ ನಟಿ, ಮಾಜಿ ಸಂಸದೆ ರಮ್ಯಾ ಸಹ ಆಶಾ ಕಾರ್ಯಕರ್ತೆಯರ ಪರವಾಗಿ ದನಿ ಎತ್ತಿದ್ದಾರೆ.

ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರಿಗೆ ರಮ್ಯಾ ಬೆಂಬಲ
Asha Karyakarte

Updated on: Nov 21, 2026 | 7:31 PM

ಮುಖ್ಯಾಂಶಗಳು

  • ಆಶಾ ಕಾರ್ಯಕರ್ತೆಯರಿಗೆ ನಟಿ ರಮ್ಯಾ ಬೆಂಬಲ
  • ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
  • ಆಶಾ ಕಾರ್ಯಕರ್ತೆಯರ ಬಗ್ಗೆ ನಟಿ ಹೇಳಿದ್ದೇನು?

ಗೌರವ ಧನ ಹೆಚ್ಚಳ ಸೇರಿದಂತೆ ಇನ್ನೂ ಕೆಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ ಆಶಾ ಕಾರ್ಯಕರ್ತೆಯರು ರಾಜ್ಯ ಸರ್ಕಾರದ ವಿರುದ್ಧ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೆ ಆಶಾ ಕಾರ್ಯಕರ್ತೆಯರೊಟ್ಟಿಗೆ ಸರ್ಕಾರದ ಪ್ರತಿನಿಧಿಗಳು ಸಂವಾದ ನಡೆಸಿ ಭರವಸೆಗಳನ್ನು ನೀಡಿದ್ದರಾದರೂ ಪ್ರತಿಭಟನೆಯಿಂದ ಕಾರ್ಯಕರ್ತೆಯರು ಹಿಂದೆ ಸರಿದಿಲ್ಲ, ಲಿಖಿತ ಆದೇಶದ ಒತ್ತಾಯ ಮಾಡಿದ್ದಾರೆ. ಹಲವು ಸಂಘಟನೆಗಳು ಪ್ರತಿಭಟನಾ ನಿರತ ಕಾರ್ಯಕರ್ತೆಯರಿಗೆ ಬೆಂಬಲ ನೀಡಿವೆ. ಇದೀಗ ನಟಿ, ಮಾಜಿ ಸಂಸದೆ ರಮ್ಯಾ ಸಹ ಆಶಾ ಕಾರ್ಯಕರ್ತೆಯರ ಪರವಾಗಿ ದನಿ ಎತ್ತಿದ್ದಾರೆ.

ಟಿವಿ9 ಜೊತೆಗೆ ಮಾತನಾಡಿರುವ ನಟಿ ರಮ್ಯಾ, ‘ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರು ಮೂಲವೇತನ ಕೇಳುತ್ತಿದ್ದಾರೆ ಅಷ್ಟೆ. ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿಯ ಬೆನ್ನೆಲುಬು. ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಬೇಕು, ಈಡೇರಿಸಬೇಕು ಎಂದು ನಾನು ನಂಬಿದ್ದೀನಿ. ಸರ್ಕಾರ ಖಜಾನೆಯಲ್ಲಿ ಹಣ ಇಲ್ಲ ಎಂದು ಹೇಳುವಂತಿಲ್ಲ. ಐದು ಸಾವಿರ ವೇತನಕ್ಕೆ ಏನು ಸಿಗುತ್ತದೆ? ಅದರಿಂದ ಕುಟುಂಬ ನಡೆಸಲು ಆಗುತ್ತದೆಯೇ? 15 ಸಾವಿರ ಕನಿಷ್ಟ ವೇತನ ನೀಡಬೇಕು’ ಎಂದಿದ್ದಾರೆ.

Loading...

‘ನಾನು ಅವರ ಪರವಾಗಿ ದ್ವನಿ ಎತ್ತಬಹುದು ಅಷ್ಟೆ, ಇನ್ನೇನು ಮಾಡಲು ಆಗುವುದಿಲ್ಲ. ಆದರೆ ನನಗೆ ಸಚಿವ ಯುಟಿ ಖಾದರ್ ಅವರ ಮೇಲೆ ನಂಬಿಕೆ ಇದೆ. ಅವರು ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದಿದ್ದಾರೆ.

ಇದನ್ನೂ ಓದಿ:ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?

ಇನ್​​ಸ್ಟಾಗ್ರಾಂನಲ್ಲೂ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ನಟಿ ರಮ್ಯಾ, ‘ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಬೆನ್ನೆಲುಬು. ಅವರಿಗೆ ಕನಿಷ್ಟ, ಗೌರವಾನ್ವಿತ ವೇತನ ಸಿಗಲೇ ಬೇಕು. ಸರ್ಕಾರ ನೀಡಿರುವ ಭರವಸೆ, ಆದೇಶವಾಗಿ ಬದಲಾಗುತ್ತದೆ ಎಂಬ ನಂಬಿಕೆ ನನಗೆ ಇದೆ. ಈ ಹೆಣ್ಣುಮಕ್ಕಳು ನಾಲ್ಕು ದಿನಗಳಿಂದಲೂ ತಮಗೆ ಸಿಗಬೇಕಾದ ಕನಿಷ್ಟ ಗೌರವ ಧನಕ್ಕಾಗಿ ಬೇಡಿಕೆ ಇಡುತ್ತಾ ಫ್ರೀಡಂ ಪಾರ್ಕ್​​ನಲ್ಲಿ ಕೂತಿದ್ದಾರೆ. ಸರ್ಕಾರ (ವಿಧಾನಸೌಧ)ದಿಂದ ಕೇವಲ 1.5 ಕಿ.ಮೀ ದೂರದಲ್ಲಿ ಅವರು ತಮ್ಮ ಹಕ್ಕಿಗಾಗಿ ಕೂಗುತ್ತಿದ್ದಾರೆ ಆದರೆ ಸರ್ಕಾರಕ್ಕೆ ಕೇಳುತ್ತಿಲ್ಲವೇ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us