23 ವರ್ಷಗಳ ಬಳಿಕ ಮತ್ತೆ ಫ್ಯಾನ್ಸ್ ಜತೆ ಕುಳಿತು ಅಪ್ಪು ಸಿನಿಮಾ ನೋಡಿದ ರಮ್ಯಾ

|

Updated on: Mar 16, 2025 | 4:32 PM

ಮರು ಬಿಡುಗಡೆ ಆಗಿರುವ ‘ಅಪ್ಪು’ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಚಂದನವನದ ಸೆಲೆಬ್ರಿಟಿಗಳು ಸಹ ಈ ಚಿತ್ರವನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ. ನಟಿ ರಮ್ಯಾ ದಿವ್ಯ ಸ್ಪಂದನಾ ಅವರು ಚಿತ್ರಮಂದಿರಕ್ಕೆ ಬಂದು ಪುನೀತ್​ ರಾಜ್​ಕುಮಾರ್ ಫ್ಯಾನ್ಸ್ ಜೊತೆ ಕುಳಿತು ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ.

23 ವರ್ಷಗಳ ಬಳಿಕ ಮತ್ತೆ ಫ್ಯಾನ್ಸ್ ಜತೆ ಕುಳಿತು ಅಪ್ಪು ಸಿನಿಮಾ ನೋಡಿದ ರಮ್ಯಾ
Ramya
Follow us on

ಪುನೀತ್ ರಾಜ್​​ಕುಮಾರ್​ (Puneeth Rajkumar) ಅಭಿಮಾನಿಗಳಿಗೆ ಮಾತ್ರವಲ್ಲದೇ ಸೆಲೆಬ್ರಿಟಿಗಳಿಗೆ ಕೂಡ ‘ಅಪ್ಪು’ ಸಿನಿಮಾ (Appu movie) ತುಂಬ ಸ್ಪೆಷಲ್. ಈ ಸಿನಿಮಾ ಮರು ಬಿಡುಗಡೆ ಆಗಿದ್ದು, ಅನೇಕರು ಬಂದು ವೀಕ್ಷಿಸುತ್ತಿದ್ದಾರೆ. ಸಂತೋಷ್ ಆನಂದ್​ರಾಮ್​. ರಕ್ಷಿತಾ ಪ್ರೇಮ್​ ಮುಂತಾದವರು ಮಾರ್ಚ್​ 14ರಂದು ಸಿನಿಮಾ ನೋಡಿದರು. ಇಂದು (ಮಾರ್ಚ್​ 16) ಸ್ಯಾಂಡಲ್​ವುಡ್​ ಕ್ವೀನ್ ರಮ್ಯಾ ಕೂಡ ‘ಅಪ್ಪು’ ಸಿನಿಮಾವನ್ನು ವೀಕ್ಷಿಸಿದ್ದಾರೆ. ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಕುಳಿತು ರಮ್ಯಾ ದಿವ್ಯ ಸ್ಪಂದನಾ (Ramya Divya Spandana) ಅವರು ಸಿನಿಮಾ ನೋಡಿದ್ದಾರೆ. ಬಳಿಕ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

‘23 ವರ್ಷಗಳ ಹಿಂದೆ ಅಪ್ಪು ಸಿನಿಮಾ ರಿಲೀಸ್ ಆದಾಗ ನಾನು ಥಿಯೇಟರ್​ಗೆ ಬಂದಿದ್ದೆ. ಈಗ ಮತ್ತೆ 23 ವರ್ಷ ಆದ ಮೇಲೆ ಅಪ್ಪು ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದಿದ್ದೇನೆ. ಆ ದಿನಗಳೆಲ್ಲ ನೆನಪಾಗುತ್ತಿವೆ. ತುಂಬ ಖುಷಿ ಆಗುತ್ತಿದೆ. ಆಗ ಫ್ಯಾನ್ಸ್ ಜೊತೆ ಸಿನಿಮಾ ನೋಡಿದಾಗಲೂ ಇದೇ ರೀತಿ ಎನರ್ಜಿ ಇತ್ತು. ತಾಲಿಬಾನ್ ಅಲ್ಲ ಅಲ್ಲ ಹಾಡಿಗೆ ಆಗಲೂ ಇದೇ ರೀತಿ ಡ್ಯಾನ್ಸ್ ಮಾಡುತ್ತಿದ್ದರು. ನಾನು ಕೂಡ ಆಗ ಓರ್ವ ಅಭಿಮಾನಿಯಾಗಿ ಕುಳಿತು ಸಿನಿಮಾ ನೋಡಿದ್ದೆ. ಈಗಲೂ ಅಭಿಮಾನಿಗಳಲ್ಲಿ ಅದೇ ಉತ್ಸಾಹ ಕಾಣಿಸುತ್ತಿದೆ’ ಎಂದು ರಮ್ಯಾ ಅವರು ಹೇಳಿದ್ದಾರೆ.

‘ಬಹಳ ಖುಷಿ ಆಗುತ್ತಿದೆ. ಯಾಕೆಂದರೆ, ಅಭಿಮಾನಿಗಳು ಬಂದು ತೋರಿಸುವ ಪ್ರೀತಿ ಮತ್ತು ಎನರ್ಜಿಯಿಂದ ನಮಗೆ ಇನ್ನಷ್ಟು ಶಕ್ತಿ ಬರುತ್ತದೆ. ಹಾಗಾಗಿ ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ನೋಡೋಕೆ ನನಗೆ ಇಷ್ಟ. ನಾನು ಪುನೀತ್ ಜೊತೆ ಅವರ ಎರಡನೇ ಸಿನಿಮಾ ‘ಅಭಿ’ ಮಾಡುವಾಗಲೂ ಅಭಿಮಾನಿಗಳ ಎನರ್ಜಿ ಹಾಗೆಯೇ ಇತ್ತು. ಅಪ್ಪು ಫ್ಯಾನ್ಸ್ ಅಷ್ಟು ಇದ್ದರು ಆಗ. ಈಗ ಇನ್ನೂ ಜಾಸ್ತಿ ಇದ್ದಾರೆ’ ಎಂದಿದ್ದಾರೆ ರಮ್ಯಾ.

ಇದನ್ನೂ ಓದಿ
ನನಗೆ ಮೋಸ ಆಗಿದೆ: ಹಾಸ್ಟೆಲ್ ಹುಡುಗರ ಕಿರಿಕ್ ಬಗ್ಗೆ ವಿವರಣೆ ನೀಡಿದ ರಮ್ಯಾ
ನನಗೆ ಒಂದು ಕೋಟಿ, ಅವರಿಗೆ 5 ಕೋಟಿ: ಚಿತ್ರರಂಗದ ಅಸಮಾನತೆ ಬಗ್ಗೆ ರಮ್ಯಾ ಮಾತು
ಇಂಟರ್​ವಲ್ ತನಕ ಕಥೆ ಕೇಳಿ ಎಕ್ಸ್​ಕ್ಯೂಸ್​ ಮಿ’ ಒಪ್ಪಿಕೊಂಡಿದ್ದ ರಮ್ಯಾ
ಕಲಾವಿದರಿಗೆ ಬೆದರಿಕೆ ಹಾಕಬಾರದು: ಡಿಕೆಶಿ ಮಾತಿಗೆ ರಮ್ಯಾ ಪ್ರತಿಕ್ರಿಯೆ

‘ಅಭಿ ಸಿನಿಮಾದಲ್ಲಿ ನಾನು ಪುನೀತ್ ಅವರಿಗೆ ಸಹನಟಿ ಆಗಿದ್ದೆ. ಆದರೆ ‘ಅಪ್ಪು’ ಚಿತ್ರ ನೋಡುವಾಗ ನಾನು ಕೂಡ ಅವರಿಗೆ ಫ್ಯಾನ್ ಆಗಿದ್ದೆ. ಮನೆಯಲ್ಲಿ ಒಬ್ಬಳೇ ಇದ್ದಾಗ ಅಪ್ಪು ಸಿನಿಮಾದ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಿದೆ. ಆ ಚಿತ್ರದ ಎಲ್ಲ ಹಾಡುಗಳು ನನಗೆ ಇಷ್ಟ’ ಎಂದು ಸಿನಿಮಾ ನೋಡಿದ ಬಳಿಕ ರಮ್ಯಾ ದಿವ್ಯ ಸ್ಪಂದನಾ ಅವರು ಮಾತನಾಡಿದ್ದಾರೆ.

ಇದನ್ನೂ ಓದಿ: ಅಪ್ಪು ಸಿನಿಮಾ ಅದ್ದೂರಿ ಮರು ಬಿಡುಗಡೆ; ಫ್ಯಾನ್ಸ್ ಸಂಭ್ರಮ ಕಣ್ತುಂಬಿಕೊಂಡ ಯುವ

ಈ ವರ್ಷ ಪುನೀತ್ ರಾಜ್​​ಕುಮಾರ್​ ಅವರ 50ನೇ ವರ್ಷದ ಬರ್ತ್​ಡೇ (ಮಾರ್ಚ್​ 17) ಬರುತ್ತಿದೆ. ಅದು ಅಭಿಮಾನಿಗಳ ಪಾಲಿಗೆ ಸಖತ್ ವಿಶೇಷ. ಆ ಪ್ರಯುಕ್ತ ‘ಅಪ್ಪು’ ಸಿನಿಮಾವನ್ನು ರೀ-ರಿಲೀಸ್ ಮಾಡಲಾಗಿದೆ. ಎಲ್ಲ ಕಡೆಗಳಿಂದ ಅಭಿಮಾನಿಗಳಿಂದ ಉತ್ತಮ ಬೆಂಬಲ ಸಿಕ್ಕಿದೆ. ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಸೆಲೆಬ್ರೇಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.