ಪ್ಲೀಸ್​.. ಇಂಥ ಕೆಲಸ ಮಾಡಬೇಡಿ; ಮನನೊಂದ ರಶ್ಮಿಕಾ ಪರಿಪರಿಯಾಗಿ ಬೇಡಿಕೊಂಡಿದ್ದೇಕೆ?

ಕೆಲವರು ತಮ್ಮ ಅಭಿಮಾನ ವ್ಯಕ್ತಪಡಿಸುವ ಭರದಲ್ಲಿ ಅತಿರೇಕದ ಕೆಲಸಗಳನ್ನು ಮಾಡುತ್ತಾರೆ. ಅಂಥವರ ಬಳಿ ರಶ್ಮಿಕಾ ಒಂದು ಮನವಿ ಮಾಡಿಕೊಂಡಿದ್ದಾರೆ.

ಪ್ಲೀಸ್​.. ಇಂಥ ಕೆಲಸ ಮಾಡಬೇಡಿ; ಮನನೊಂದ ರಶ್ಮಿಕಾ ಪರಿಪರಿಯಾಗಿ ಬೇಡಿಕೊಂಡಿದ್ದೇಕೆ?
ರಶ್ಮಿಕಾ ಮಂದಣ್ಣ
Edited By:

Updated on: Jun 27, 2021 | 5:08 PM

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರ ಖ್ಯಾತಿ ಈಗ ದೇಶಾದ್ಯಂತ ಹಬ್ಬಿದೆ. ಕನ್ನಡದಿಂದ ಶುರುವಾದ ಅವರ ಸಿನಿಜರ್ನಿ ಬಾಲಿವುಡ್​ವರೆಗೆ ಸಾಗಿದೆ. ಹಾಗಾಗಿ ಅವರಿಗೆ ಎಲ್ಲೆಡೆ ಅಭಿಮಾನಿಗಳಿದ್ದಾರೆ. ಕೆಲವರು ತಮ್ಮ ಅಭಿಮಾನ ವ್ಯಕ್ತಪಡಿಸುವ ಭರದಲ್ಲಿ ಅತಿರೇಕದ ಕೆಲಸಗಳನ್ನು ಮಾಡುತ್ತಾರೆ. ಅಂಥವರ ಬಳಿ ರಶ್ಮಿಕಾ ಒಂದು ಮನವಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ರಶ್ಮಿಕಾರನ್ನು ನೋಡಬೇಕು ಎಂದು ಒಬ್ಬ ಅಭಿಮಾನಿ ತೆಲಂಗಾಣದಿಂದ ಕೊಡಗಿನ ವಿರಾಜಪೇಟೆಗೆ ಬಂದುಬಿಟ್ಟಿದ್ದ. ಆ ಬಗ್ಗೆ ನ್ಯಾಷನಲ್​ ಕ್ರಶ್​ ಈಗ ಪ್ರತಿಕ್ರಿಯಿಸಿದ್ದಾರೆ.

‘ನಿಮ್ಮಲ್ಲಿ ಯಾರೋ ಒಬ್ಬರು ನನ್ನನ್ನು ಹುಡುಕಿಕೊಂಡು ತುಂಬ ದೂರ ಪ್ರಯಾಣ ಮಾಡಿದ್ದೀರಿ ಮತ್ತು ನಮ್ಮ ಮನೆವರೆಗೂ ಹೋಗಿದ್ದೀರಿ ಎಂಬುದು ಈಗ ತಾನೇ ತಿಳಿಯಿತು. ದಯವಿಟ್ಟು ಇಂಥ ಕೆಲಸ ಮಾಡಬೇಡಿ. ನಿಮ್ಮನ್ನು ಭೇಟಿ ಆಗಲು ಸಾಧ್ಯವಾಗಲಿಲ್ಲ ಎಂಬುದಕ್ಕೆ ನನಗೆ ಬೇಸರವಾಗಿತ್ತಿದೆ. ನೀವು ಖಂಡಿತಾ ಒಂದು ದಿನ ಭೇಟಿ ಆಗುತ್ತೀರಿ ಎಂಬ ನಂಬಿಕೆ ಇದೆ. ಸದ್ಯಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಪ್ರೀತಿ ತೋರಿಸಿ. ನಾನು ಖುಷಿಯಾಗಿರುತ್ತೇನೆ’ ಎಂದು ರಶ್ಮಿಕಾ ಟ್ವೀಟ್​ ಮಾಡಿದ್ದಾರೆ.

ಹಾಗೆ ರಶ್ಮಿಕಾರನ್ನು ಹುಡುಕಿಕೊಂಡು ವಿರಾಜಪೇಟೆಗೆ ಬಂದ ಅಭಿಮಾನಿ ಹೆಸರು ಆಕಾಶ್​ ತ್ರಿಪಾಠಿ. ವಿರಾಜಪೇಟೆ ತಾಲೂಕಿನ ಮಗ್ಗುಲದಲ್ಲಿ ರಶ್ಮಿಕಾ ಇರುತ್ತಾರೆಂದು ತಿಳಿದು ಆತ ಹೈದರಾಬಾದ್​ನಿಂದ ಮೈಸೂರಿಗೆ ರೈಲಿನಲ್ಲಿ ಬಂದಿದ್ದ. ಅಲ್ಲಿಂದ ಗೂಡ್ಸ್ ಆಟೋದಲ್ಲಿ ಕೊಡಗಿನ ವಿರಾಜಪೇಟೆಗೆ ಬಂದ. ಅಲ್ಲಿ ಸಿಕ್ಕ ಸಿಕ್ಕವರಿಗೆ ರಶ್ಮಿಕಾರ ಮನೆ ಎಲ್ಲಿ ಎಂದು ಕೇಳುತ್ತ ಅಲೆದಾಡಿದ್ದ. ಈತನ ವರ್ತನೆ ಕಂಡು ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಆಕಾಶ್​ನನ್ನು ವಿರಾಜಪೇಟೆ ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ರಶ್ಮಿಕಾ ನೋಡಲು ಬಂದಿರುವುದಾಗಿ ಆಕಾಶ್ ಹೇಳಿದ್ದಾನೆ. ಬಳಿಕ ಆಕಾಶ್‌ಗೆ ಬುದ್ಧಿವಾದ ಹೇಳಿ ಪೊಲೀಸರು ಆತನನ್ನು ವಾಪಸ್ ತೆಲಂಗಾಣಕ್ಕೆ ಹೋಗುವಂತೆ ತಿಳಿಸಿದ್ದರು.

ಈ ಎಲ್ಲ ವಿಚಾರ ಈಗ ರಶ್ಮಿಕಾ ಗಮನಕ್ಕೆ ಬಂದಿದೆ. ಹಾಗಾಗಿ ಯಾರೂ ಇಂಥ ಕೆಲಸ ಮಾಡಬೇಡಿ ಎಂದು ತಮ್ಮ ಅಭಿಮಾನಿಗಳಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ. ಸದ್ಯ ರಶ್ಮಿಕಾ ಕೈಯಲ್ಲಿ ಹಲವು ಪ್ರಾಜೆಕ್ಟ್​ಗಳಿವೆ, ಬಾಲಿವುಡ್​ನ ‘ಗುಡ್​ಬೈ’ ಮತ್ತು ‘ಮಿಷನ್​ ಮಜ್ನು’ ಸಿನಿಮಾಗಳ ಶೂಟಿಂಗ್​ ಸಲುವಾಗಿ ಅವರಿಗೆ ಮುಂಬೈಗೆ ತೆರಳಿದ್ದಾರೆ. ಅಲ್ಲಿ ಹೊಸ ಅಪಾರ್ಟ್​ಮೆಂಟ್​ ಕೂಡ ಖರೀದಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಅವರಿಗೆ ಸಿಕ್ಕಾಟ್ಟೆ ಬೇಡಿಕೆ ಇದೆ. ಅಲ್ಲು ಅರ್ಜುನ್​ ಜೊತೆ ರಶ್ಮಿಕಾ ನಟಿಸಿರುವ ಬಹುನಿರೀಕ್ಷಿತ ‘ಪುಷ್ಪ’ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ.

ಇದನ್ನೂ ಓದಿ:

ವಿಜಯ್​ ದೇವರಕೊಂಡ ಜೊತೆ ಸೇರಿಕೊಂಡು ಸೈಲೆಂಟಾಗಿ ಮತ್ತೊಂದು ಸಾಧನೆ ಮಾಡಿದ ರಶ್ಮಿಕಾ ಮಂದಣ್ಣ

ಮುಂಬೈನಲ್ಲಿ ಹೊಸ ಅಪಾರ್ಟ್​ಮೆಂಟ್​ ಸೇರಿಕೊಂಡ ರಶ್ಮಿಕಾ; ಅಲ್ಲೇ ಸೆಟ್ಲ್​ ಆಗ್ತಾರಾ ಕೊಡಗಿನ ಕುವರಿ?

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us