ವೃತ್ತಿ ಜೀವನದಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡ ರಶ್ಮಿಕಾ ಮಂದಣ್ಣ; ಕರಿಯರ್​ನಲ್ಲಿ ಇದು ಇದೇ ಮೊದಲು

ಸ್ಟಾರ್ ಆದ ನಂತರದಲ್ಲಿ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದರೆ ಆ ಸಿನಿಮಾಗೆ ತೂಕ ಬರುತ್ತದೆ. ಈ ಕಾರಣಕ್ಕೆ ಸ್ಯಾಂಡಲ್​ವುಡ್​, ಟಾಲಿವುಡ್​, ಬಾಲಿವುಡ್​ ಸೇರಿ ಎಲ್ಲಾ ಭಾಷೆಗಳಲ್ಲಿ ಸ್ಟಾರ್​ ನಟ-ನಟಿಯರು ಅತಿಥಿ ಪಾತ್ರ ಮಾಡಿದ ಉದಾಹರಣೆ ಸಾಕಷ್ಟಿದೆ.

ವೃತ್ತಿ ಜೀವನದಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡ ರಶ್ಮಿಕಾ ಮಂದಣ್ಣ; ಕರಿಯರ್​ನಲ್ಲಿ ಇದು ಇದೇ ಮೊದಲು
ರಶ್ಮಿಕಾ ಮಂದಣ್ಣ
Updated By: ರಾಜೇಶ್ ದುಗ್ಗುಮನೆ

Updated on: Sep 25, 2021 | 2:54 PM

ರಶ್ಮಿಕಾ ಮಂದಣ್ಣ ಅವರ ಕಾಲ್​ಶೀಟ್​ ಪಡೆಯಬೇಕು ಎಂದರೆ ಅದು ಅಷ್ಟು ಸುಲಭದ ಮಾತಲ್ಲ. ಸಂಭಾವನೆ ವಿಚಾರದಲ್ಲಿ ಅವರು ತುಟ್ಟಿ ಎನ್ನುವುದು ಒಂದು ಕಡೆಯಾದರೆ, ಸಿನಿಮಾ ಕಥೆ, ಪಾತ್ರವರ್ಗ ನೋಡಿಕೊಂಡು ಅವರು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ ಅನ್ನೋದು ಮತ್ತೊಂದು ಕಡೆ. ಹೀಗಿರುವಾಗಲೇ ಅವರು ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಏನದು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸ್ಟಾರ್ ಆದ ನಂತರದಲ್ಲಿ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದರೆ ಆ ಸಿನಿಮಾಗೆ ತೂಕ ಬರುತ್ತದೆ. ಈ ಕಾರಣಕ್ಕೆ ಸ್ಯಾಂಡಲ್​ವುಡ್​, ಟಾಲಿವುಡ್​, ಬಾಲಿವುಡ್​ ಸೇರಿ ಎಲ್ಲಾ ಭಾಷೆಗಳಲ್ಲಿ ಸ್ಟಾರ್​ ನಟ-ನಟಿಯರು ಅತಿಥಿ ಪಾತ್ರ ಮಾಡಿದ ಉದಾಹರಣೆ ಸಾಕಷ್ಟಿದೆ. ಈಗ ರಶ್ಮಿಕಾಗೂ ಹೀಗೊಂದು ಆಫರ್ ಬಂದಿದೆ. ಅವರು ಇದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಅವರು ಅತಿಥಿ ಪಾತ್ರ ಮಾಡುತ್ತಿದ್ದಾರೆ.

ರಶ್ಮಿಕಾ ಮಂದಣ್ಣ 2016ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರು ಬಣ್ಣದ ಜಗತ್ತಿಗೆ ಕಾಲಿಟ್ಟು ಐದು ವರ್ಷಗಳು ಕಳೆದಿವೆ. ಈ ಐದು ವರ್ಷಗಳಲ್ಲಿ ಅವರು ಸಾಕಷ್ಟು ಸ್ಟಾರ್​ ನಟರ ಜತೆ ನಟಿಸಿದ್ದಾರೆ. ಅಲ್ಲದೆ, ಸಾಕಷ್ಟು ಸಿನಿಮಾಗಳು ಹಿಟ್​ ಆಗಿವೆ. ಈ ಕಾರಣಕ್ಕೆ ಅವರು ನಿರ್ಮಾಪಕರ ಪಾಲಿಗೆ ಲಕ್ಕಿ ಗರ್ಲ್​ ಆಗಿದ್ದಾರೆ. ಹೀಗಾಗಿ ಈಗ ದುಲ್ಖರ್​ ಸಿನಿಮಾದಲ್ಲಿ ರಶ್ಮಿಕಾ ಅತಿಥಿ ಪಾತ್ರ ಮಾಡುತ್ತಿದ್ದಾರೆ.

‘ಅಂದಾಲ ರಾಕ್ಷಸಿ’, ‘ಲೈ’ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಹನು ರಘವಪುಡಿ ಈಗ ದುಲ್ಖರ್​ ಜತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಮೃನಲ್​ ಠಾಕೂರ್​ ನಾಯಕಿ. ಈ ಸಿನಿಮಾ ಬೇರೆಬೇರೆ ಭಾಷೆಗಳಲ್ಲಿ ತೆರೆಕಾಣಲಿದೆ. ಈ ಕಾರಣಕ್ಕೆ ರಶ್ಮಿಕಾ ಅವರನ್ನು ಈ ಸಿನಿಮಾಗೆ ಆಯ್ಕೆಮಾಡಿಕೊಳ್ಳಲಾಗಿದೆ. ಈ ಮೂಲಕ ಸಿನಿಮಾದ ಮೈಲೇಜ್​ ಹೆಚ್ಚಿಸುವ ಆಲೋಚನೆ ಚಿತ್ರತಂಡದ್ದು.

ಸದ್ಯ ರಶ್ಮಿಕಾ ಕೈಯಲ್ಲಿ ಹಲವು ಸಿನಿಮಾಗಳಿವೆ. ಸಿದ್ದಾರ್ಥ್​ ಮಲ್ಹೋತ್ರಾ ಜೊತೆ ಅವರು ನಟಿಸುತ್ತಿರುವ ‘ಮಿಷನ್​ ಮಜ್ನು’ ಚಿತ್ರಕ್ಕೆ ಶೂಟಿಂಗ್​ ಮುಗಿದಿದೆ. ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ಬೈ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್​ಗೆ ಜೋಡಿಯಾಗಿ ಅಭಿನಯಿಸಿರುವ ‘ಪುಷ್ಪ’ ಸಿನಿಮಾ ಡಿಸೆಂಬರ್​ನಲ್ಲಿ ಕ್ರಿಸ್​​ಮಸ್​ ಪ್ರಯುಕ್ತ ತೆರೆಕಾಣಲಿದೆ.

ಇದನ್ನೂ ಓದಿ: ದೀಪಿಕಾರನ್ನು ಕಾಪಿ ಮಾಡಿ ಸಿಕ್ಕಿ ಬಿದ್ರಾ ರಶ್ಮಿಕಾ ಮಂದಣ್ಣ? ಸೈಮಾದಲ್ಲಿ ಕಣ್ಣು ಕುಕ್ಕಿದ ಗೌನ್​

ರಶ್ಮಿಕಾ ಮುಂಬೈಗೆ ಹೋದ್ಮೇಲೆ ಪ್ರಚಾರಕ್ಕಾಗಿ ಮಾಡಿದ ಕೆಲಸ ಏನು? ಬಾಲಿವುಡ್​ನಲ್ಲಿ ಇದು ಕಾಮನ್​